ETV Bharat / state

ವಿಶ್ವಕಪ್ ಅಖಾಡದಲ್ಲಿರುವ ತಂಡಗಳ ಹಿರಿಯ, ಕಿರಿಯ ಆಟಗಾರರು ಇವರು..

ಐಸಿಸಿ ಏಕದಿನ ವಿಶ್ವಕಪ್​ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳಲ್ಲಿನ ಅತ್ಯಂತ ಕಿರಿಯ ಮತ್ತು ಹಿರಿಯ ಆಟಗಾರರ ಪಟ್ಟಿ ಇಂತಿದೆ.

icc-world-cup-2023-dot-list-of-most-senior-and-junior-players-from-all-the-teams
ವಿಶ್ವಕಪ್ ಅಖಾಡದಲ್ಲಿರುವ ತಂಡಗಳ ಹಿರಿಯ ಹಾಗೂ ಕಿರಿಯ ಆಟಗಾರರು
author img

By ETV Bharat Karnataka Team

Published : Oct 5, 2023, 9:07 PM IST

ಬೆಂಗಳೂರು : ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ ಹಬ್ಬ ಇಂದಿನಿಂದ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಭಾರತ ಈ ಬಾರಿ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಸಲದ ವಿಶ್ವಕಪ್ ಅನೇಕ ಕಾರಣಗಳಿಗಾಗಿ ವಿಶೇಷವೆನಿಸಿದೆ. ಸಾಕಷ್ಟು ದಿಗ್ಗಜ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಎಂದು ಬಿಂಬಿತವಾಗುತ್ತಿದ್ದರೆ, ಮತ್ತಷ್ಟು ಯುವ ಕ್ರಿಕೆಟಿಗರಿಗೆ ಇದು ಮೊದಲ ಅವಕಾಶ. ಈ ಬಾರಿಯ ವಿಶ್ವಕಪ್‌ನ ತಂಡಗಳಲ್ಲಿರುವ ಅತ್ಯಂತ ಹಿರಿಯ ಹಾಗೂ ಕಿರಿಯ ಆಟಗಾರರ ವಿವರ ಇಲ್ಲಿದೆ.

ಅಫ್ಘಾನಿಸ್ತಾನ : ವಿಶ್ವಕಪ್ ಟೂರ್ನಿಯಲ್ಲಿರುವ ಅತಿ ಕಿರಿಯ ತಂಡದವರೆಂದರೆ ಅದು ಅಫ್ಘಾನಿಸ್ತಾನ. ನೂರ್ ಅಹಮದ್ (18 ವರ್ಷ 274 ದಿನಗಳು) ಅಫ್ಘನ್ ತಂಡದಲ್ಲಿರುವ ಕಿರಿಯ ಸದಸ್ಯನಾದರೆ, ಮೊಹಮ್ಮದ್ ನಬಿ (38 ವರ್ಷ 276 ದಿನಗಳು) ತಂಡದ ಹಿರಿಯ ಆಟಗಾರನಾಗಿದ್ದಾರೆ.

ಶ್ರೀಲಂಕಾ : 1996ರ ವಿಶ್ವಕಪ್‌ ಚಾಂಪಿಯನ್ ಶ್ರೀಲಂಕಾ ಈ ಬಾರಿಯ ವಿಶ್ವಕಪ್‌ನಲ್ಲಿ ಹೆಚ್ಚು ಕಿರಿಯ ಸದಸ್ಯರನ್ನು ಹೊಂದಿರುವ ಎರಡನೇ ತಂಡ. ದುನಿತ್ ವೆಲ್ಲಾಲಗೆ (20 ವರ್ಷ 290 ದಿನಗಳು) ತಂಡದ ಕಿರಿಯ ಆಟಗಾರನಾದರೆ, ದಿಮುತ್ ಕರುಣರತ್ನೆ (35 ವರ್ಷ 166 ದಿನಗಳು) ಸಿಂಹಳೀಯರ ತಂಡದ ಹಿರಿಯ ಅನುಭವಿ ಆಟಗಾರರಾಗಿದ್ದಾರೆ.

ಬಾಂಗ್ಲಾದೇಶ : ಚೊಚ್ಚಲ ವಿಶ್ವಕಪ್ ಚಾಂಪಿಯನ್​ಶಿಪ್​ ಕನಸಿನಲ್ಲಿರುವ ಬಾಂಗ್ಲಾದೇಶ ಸಹ ಅನುಭವಿ ಹಾಗೂ ಕಿರಿಯ ಆಟಗಾರರ ಸಮ್ಮಿಶ್ರಣದಂತಿದೆ. ತಂಜಿಮ್ ಹಸನ್ ಸಕೀಬ್ (20 ವರ್ಷ 349 ದಿನಗಳು) ತಂಡದಲ್ಲಿರುವ ಕಿರಿಯ ಆಟಗಾರ. ಹಾಗೂ ಮೊಹಮ್ಮದುಲ್ಲಾ (37 ವರ್ಷ 242 ದಿನಗಳು) ತಂಡದ ಹಿರಿಯ ಆಟಗಾರ. ಅಲ್ಲದೇ 36 ವರ್ಷದ ಶಕೀಬ್ ಅಲ್ ಹಸನ್ ಹಾಗೂ ಮುಷ್ಫಿಕರ್ ರಹೀಂ ಕೂಡಾ ತಂಡದ ಹಿರಿಯ ಆಟಗಾರರಾಗಿದ್ದಾರೆ.

ಪಾಕಿಸ್ತಾನ : ವಿಶ್ವಕಪ್ ಕ್ಯಾಂಪೇನ್'ಗಾಗಿ ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಭಾರತ ಪ್ರವಾಸ ಹೊಸತು. ಮೊಹಮ್ಮದ್ ವಾಸೀಂ (22 ವರ್ಷ 40 ದಿನಗಳು) ಪಾಕಿಸ್ತಾನ ಪಾಳಯದಲ್ಲಿರುವ ಕಿರಿಯ ಆಟಗಾರನಾದರೆ ಫಕಾರ್ ಜಮಾನ್ (33 ವರ್ಷ 177 ದಿನಗಳು) ಅತಿ ಹಿರಿಯ ಸದಸ್ಯ ಎನಿಸಿದ್ದಾರೆ.

ನೆದರ್ಲೆಂಡ್ಸ್‌ : 2011ರ ಬಳಿಕ ವಿಶ್ವಕಪ್ ಸಮರಕ್ಕೆ ಮರಳಿರುವ ಡಚ್ಚರು ಯುವ ಹಾಗೂ ಅನುಭವಿ ತಂಡದೊಂದಿಗೆ ಟೂರ್ನಿ ಪ್ರವೇಶಿಸಿದ್ದಾರೆ. ಆರ್ಯನ್ ದತ್ (20 ವರ್ಷ 145 ದಿನಗಳು) ನೆದರ್ಲೆಂಡ್ಸ್‌ ತಂಡದಲ್ಲಿರುವ ಕಿರಿಯ ಆಟಗಾರ. ನಂತರದ ಸ್ಥಾನದಲ್ಲಿ ಶರೀಜ್ ಅಹ್ಮದ್ (20 ವರ್ಷ 166 ದಿನಗಳು) ಹಾಗೂ ವಿಕ್ರಂಜೀತ್ ಸಿಂಗ್ (20 ವರ್ಷ 268 ದಿನಗಳು) ಇದ್ದರೆ, ವೆಸ್ಲೆ ಬರ್ರೇಸೀ (39 ವರ್ಷ 124 ದಿನಗಳು) ತಂಡದಲ್ಲಿರುವ ಹಿರಿಯ ಹಾಗೂ ನೆದರ್ಲೆಂಡ್ಸ್‌ ಪರ ಈ ಹಿಂದಿನ ವಿಶ್ವಕಪ್ ಆಡಿರುವ ಅನುಭವವಿರುವ ಆಟಗಾರರಾಗಿದ್ದಾರೆ.

ದಕ್ಷಿಣ ಆಫ್ರಿಕಾ : 1992ರಲ್ಲಿ ವಿಶ್ವಕಪ್‌ ರೇಸ್‌ಗೆ ಕಾಲಿಟ್ಟರೂ ಸಹ ದಕ್ಷಿಣ ಆಫ್ರಿಕಾ ಪಾಲಿಗೆ ಪ್ರಶಸ್ತಿ ಇನ್ನೂ ಮರೀಚಿಕೆಯಾಗುಳಿದಿದೆ. ಮತ್ತೊಮ್ಮೆ ವಿಶ್ವಕಪ್ ಅಭಿಯಾನದಲ್ಲಿ ಭಾಗಿಯಾಗುತ್ತಿರುವ ಹರಿಣಗಳ ಪಾಳಯದಲ್ಲಿ ರಸ್ಸಿ ವ್ಯಾಂಡರ್ ಡಸ್ಸೆನ್ (34 ವರ್ಷ 239 ದಿನಗಳು) ಹಿರಿಯ ಆಟಗಾರನಾದರೆ, ಗೆರಾಲ್ಡ್ ಕೊಯೆಟ್ಜೀ (23 ವರ್ಷ 3 ದಿನಗಳು) ಕಿರಿಯ ಸದಸ್ಯ ಎಂದು ಗುರುತಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ : ಕಳೆದ ಬಾರಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವಿರೋಚಿತ ಸೋಲು ಕಂಡ ನ್ಯೂಜಿಲೆಂಡ್, ಈ ಬಾರಿ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿಟ್ಟಿದೆ. ಟಿಮ್ ಸೌಥಿ (34 ವರ್ಷ 297 ದಿನಗಳು) ಕಿವೀಸ್ ತಂಡದ ಹಿರಿಯ ಆಟಗಾರನಾದರೆ, ಅವರ ನಂತರ ಸ್ಥಾನದಲ್ಲಿ ಟ್ರೆಂಟ್ ಬೌಲ್ಟ್ (34 ವರ್ಷ 73 ದಿನಗಳು) ಇದ್ದಾರೆ‌. ಇನ್ನು ರಚಿನ್ ರವೀಂದ್ರ (23 ವರ್ಷ 320 ದಿನಗಳು) ತಂಡದಲ್ಲಿರುವ ಕಿರಿಯ ಆಟಗಾರರಾಗಿದ್ದಾರೆ.

ಆಸ್ಟ್ರೇಲಿಯಾ : ವಿಶ್ವಕಪ್ ಇತಿಹಾಸದ ಅತ್ಯಂತ ಯಶಸ್ವಿ ತಂಡವಾಗಿರುವ ಆಸ್ಟ್ರೇಲಿಯಾ, ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಕ್ಯಾಮರೂನ್ ಗ್ರೀನ್ (24 ವರ್ಷ 123 ದಿನಗಳು) ತಂಡದಲ್ಲಿರುವ ಕಿರಿಯ ಆಟಗಾರನಾದರೆ, ಡೇವಿಡ್ ವಾರ್ನರ್ (36 ವರ್ಷ 342 ದಿನಗಳು) ಕಾಂಗರೂ ಪಾಳಯದ ಅತೀ ಹಿರಿಯ ಆಟಗಾರರಾಗಿದ್ದಾರೆ.

ಇಂಗ್ಲೆಂಡ್ : ಚಾಂಪಿಯನ್ ಪಟ್ಟ ರಿಟೈನ್ ಮಾಡಿಕೊಳ್ಳುವ ಭರವಸೆಯೊಂದಿಗೆ ಟೂರ್ನಿಗೆ ಕಾಲಿಟ್ಟಿರುವ ಇಂಗ್ಲೆಂಡ್ ತಂಡದಲ್ಲಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರೀ ಬ್ರೂಕ್ (24 ವರ್ಷ 224 ದಿನಗಳು) ಅತೀ ಕಿರಿಯ ಆಟಗಾರನಾದರೆ, ಆಲ್ ರೌಂಡರ್ ಮೊಯೀನ್ ಅಲಿ (36 ವರ್ಷ 108 ದಿನಗಳು) ತಂಡದಲ್ಲಿರುವ ಹಿರಿಯ ಸದಸ್ಯರಾಗಿದ್ದಾರೆ.

ಭಾರತ : ಈ ಬಾರಿ ವಿಶ್ವ ವಿಜೇತರಾಗುವ ಯತ್ನದಲ್ಲಿರುವ ಆತಿಥೇಯ ಭಾರತ ತಂಡದಲ್ಲಿ ಶುಭ್ಮನ್ ಗಿಲ್ (24 ವರ್ಷ 25 ದಿನಗಳು) ಕಿರಿಯ ಆಟಗಾರನಾದರೆ, ರವಿಚಂದ್ರನ್ ಅಶ್ವಿನ್ (37 ವರ್ಷ 17 ದಿನಗಳು) ತಂಡದ ಅನುಭವಿ ಆಟಗಾರರಾಗಿದ್ದಾರೆ. ಅವರ ನಂತರದಲ್ಲಿ ನಾಯಕ ರೋಹಿತ್ ಶರ್ಮಾ (36 ವರ್ಷ 157 ದಿನಗಳು) ಇದ್ದಾರೆ.

ಇದನ್ನೂ ಓದಿ : 27 ವರ್ಷಗಳ ಬಳಿಕ ಪುಣೆ ಮೈದಾನದಲ್ಲಿ ವಿಶ್ವಕಪ್ ಕ್ರಿಕೆಟ್​ ಕಲರವ; 5 ಪಂದ್ಯಗಳಿಗೆ ಆತಿಥ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.