ETV Bharat / state

ಸಚಿವ ಸ್ಥಾನ ಸಿಗದವರದು ಸ್ಮಶಾನ ವೈರಾಗ್ಯ.. ಎಲ್ಲರೂ ಬಿಟ್ಟ ಖಾತೆ ಕೊಟ್ಟರೂ ನಿಭಾಯಿಸುವೆ : ಸಚಿವ ನಿರಾಣಿ - Minister Murugesh Nirani talk about cabinet position

ಈಗ 29 ಮಂದಿಗೆ ಸಚಿವ ಸ್ಥಾನ ನೀಡಿದ್ದಾರೆ. ಎಲ್ಲರೂ ಕೂಡ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು. ಇನ್ನೂ ನಾಲ್ಕು ಸೀಟು ಇರುವುದರಿಂದ ಎಲ್ಲವನ್ನೂ ಸಮಾಧಾನ ಪಡಿಸುವ ಕೆಲಸ ಸಿಎಂ ಮಾಡ್ತಾರೆ ಎಂದು ವಿವರಿಸಿದರು.13 ಜಿಲ್ಲೆಗಳಿಗೆ ಪ್ರಾತಿನಿದ್ಯ ಸಿಗದೇ ಇರುವ ಬಗ್ಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಅದನ್ನೂ ಸಿಎಂ ಬಗೆಹರಿಸ್ತಾರೆ..

murugesh-nirani
ಸಚಿವ ಮುರುಗೇಶ್ ನಿರಾಣಿ
author img

By

Published : Aug 6, 2021, 5:36 PM IST

ಬೆಂಗಳೂರು : ಸಚಿವ ಸ್ಥಾನ ತಪ್ಪಿದವರಿಗೆ ವೈರಾಗ್ಯ ಕಾಡುವುದು ಸಹಜ. ಇದೊಂಥರಾ ಸ್ಮಶಾನ ವೈರಾಗ್ಯದ ತರಹ ಸ್ವಾಭಾವಿಕವಾಗಿ ಕಾಡುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, ನನಗೂ 2019ರಲ್ಲಿ ಅವಕಾಶ ಸಿಕ್ಕಿರಲಿಲ್ಲ.

ನನ್ನದೇ ಬ್ಯಾಚ್ಮೇಟ್ ನವರು ಸಚಿವರಾಗಿದ್ರು. ಆದರೂ ನಾನು ಅಸಮಾಧಾನ ತೋರಿಸಿಕೊಂಡಿರಲಿಲ್ಲ. ನನ್ನ ಸಹಪಾಠಿಗಳೇ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಆಗಿದ್ದಾರೆ. ತಾಳಿದವನು ಬಾಳಿಯಾನು ಅಂತಾ ಕಾಯಬೇಕು. ತಾಳ್ಮೆಯಿಂದ ಕಾದಿದ್ದಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ ಎಂದರು.

ಖಾತೆ ಸಿಗದವರ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಹೀಗಂತಾರೆ..

ಇನ್ನು ಕೆಲವು ಸಮರ್ಥರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅವರೆಲ್ಲರ ಜೊತೆಗೆ ಸಿಎಂ ಚರ್ಚೆ ನಡೆಸಿದ್ದಾರೆ. ಬರುವಂತಹ ದಿನಗಳಲ್ಲಿ ಅದನ್ನು ಸರಿ ಮಾಡ್ತಾರೆ ಎಂಬ ವಿಶ್ವಾಸ ಇದೆ. ಆದರೆ, 70 ವರ್ಷದಲ್ಲಿ ಯಾವಾಗ ಮಂತ್ರಿಮಂಡಲ ರಚನೆ ಆಗಿದೆಯೋ, ಆಗೆಲ್ಲ ಎರಡು ಮೂರು ದಿನ ಅಸಮಾಧಾನ ಇರುತ್ತದೆ.

ಈಗ 29 ಮಂದಿಗೆ ಸಚಿವ ಸ್ಥಾನ ನೀಡಿದ್ದಾರೆ. ಎಲ್ಲರೂ ಕೂಡ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು. ಇನ್ನೂ ನಾಲ್ಕು ಸೀಟು ಇರುವುದರಿಂದ ಎಲ್ಲವನ್ನೂ ಸಮಾಧಾನ ಪಡಿಸುವ ಕೆಲಸ ಸಿಎಂ ಮಾಡ್ತಾರೆ ಎಂದು ವಿವರಿಸಿದರು.13 ಜಿಲ್ಲೆಗಳಿಗೆ ಪ್ರಾತಿನಿದ್ಯ ಸಿಗದೇ ಇರುವ ಬಗ್ಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಅದನ್ನೂ ಸಿಎಂ ಬಗೆಹರಿಸ್ತಾರೆ ಎಂದು ತಿಳಿಸಿದರು.

ಎಲ್ಲರೂ ಬಿಟ್ಟ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ : ನನಗೆ ಎಲ್ಲರೂ ಬಿಟ್ಟ ಖಾತೆಯನ್ನ ಕೊಟ್ಟರೂ, ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು. ಸಿಎಂ ನನಗೂ 30 ವರ್ಷದ ಸಂಬಂಧ. ಒಂದೇ ಕಾಲೇಜಿನಲ್ಲಿ ಓದಿದವರು. ನನಗೆ ಯಾವುದೇ ಖಾತೆ ಕೊಟ್ಟರೂ ಎಫೆಕ್ಟಿವ್ ಆಗಿ ನಿಭಾಯಿಸ್ತೇನೆ ಅನ್ನೋದು ಸಿಎಂಗೆ ಗೊತ್ತಿದೆ. ಪಕ್ಷಕ್ಕೆ, ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡ್ತೇನೆ ಎಂದು ಹೇಳಿದರು.

ಓದಿ: ಸಂಶೋಧನಾ ವಿದ್ಯಾರ್ಥಿ ರಕ್ಷಣೆಯಾಗಬೇಕು: ಪ್ರೊ ಲೋಲಾಕ್ಷಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.