ಬೆಂಗಳೂರು : ಮಾದಕ ವಸ್ತು ಇಡೀ ಮನುಕುಲಕ್ಕೆ ಮಾರಕವಾಗಿದೆ. ಮಾದಕ ವಸ್ತು ವ್ಯಕ್ತಿಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. ಇಂದು ಡ್ರಗ್ಸ್ ಮಾರಾಟ ವಿರೋಧಿ ದಿನ ಕಾರ್ಯಾಚರಣೆ ಹಿನ್ನೆಲೆ ಡಿಜಿ ಕಚೇರಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಮಾದಕ ವಸ್ತುವಿಗೆ ಆದಷ್ಟು ಬೇಗ ಕ್ಲೀನ್ ಚಿಟ್ ನೀಡಬೇಕಿದೆ ಎಂದರು.
ಮೊದಲು ವಿಧಾನಸೌದದಲ್ಲಿ ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನವೇ ಮಾದಕ ವಸ್ತು ವಿರುದ್ಧ ನನ್ನ ಸಮರ ಅಂತಾ ಹೇಳಿದ್ದೆ. ಮಾದಕ ವಸ್ತು ಅಂತಾರಾಷ್ಟ್ರೀಯ, ಸ್ಥಳೀಯವಾಗಿ ಲಭ್ಯವಾಗುತ್ತದೆ. ಕೆಲವರು ಗಾಂಜಾವನ್ನು ನಿಪ್ಪಾಣಿ, ಹಾಸನ, ಮಲೆನಾಡು ಪ್ರದೇಶದಲ್ಲಿ ಅಡಿಕೆ ಮಧ್ಯೆ ಕೂಡ ಇದನ್ನು ಬೆಳೆಯುತ್ತಾರೆ.
ಪ್ರತಿ ಜಿಲ್ಲಾ ಪೊಲೀಸರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಗಾಂಜಾ ಬೆಳೆಯುವವರನ್ನು ದಸ್ತಗಿರಿ ಮಾಡಿ ಕಠಿಣ ಕ್ರಮಕೈಗೊಳ್ಳಿ ಅಂತಾ.. ಇನ್ನು ಹೊರ ರಾಜ್ಯದಿಂದ ಸಣ್ಣ ಸಣ್ಣ ಪದಾರ್ಥಗಳ ಮೂಲಕ ಅಂದ್ರೆ ಚಾಕೊಲೆಟ್, ಬಿಸ್ಕೇಟ್ ಮುಖಾಂತರ ಬರುತ್ತಿದೆ. ಇದರ ಬಗ್ಗೆ ಗಮನ ವಹಿಸಬೇಕು ಎಂದರು.
ವಿದ್ಯಾಸಂಸ್ಥೆ, ಹಾಸ್ಟೆಲ್, ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳು ಇದಕ್ಕೆ ಡಿಪೆಂಡ್ ಆಗ್ತಾರೆ. ಕೊರೊನಾ ಬಂದಿದೆ ಅಂತಾ ಸ್ವಲ್ಪ ಜಾಗೃತಿ ನಿಲ್ಲಿಸಿದ್ದೇವೆ. ಶಾಲಾ-ಕಾಲೇಜು ಶುರುವಾದ ತಕ್ಷಣ ಮಕ್ಕಳಲ್ಲಿ, ಪೋಷಕರಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮಾಡುತ್ತೇವೆ ಎಂದರು. ಇದರ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತಾಡಿದ್ದೇನೆ. ಹಾಗೆ ಡ್ರಗ್ ಹೆಲ್ಪ್ ಲೈನ್ ರಾಜ್ಯ ಮತ್ತು ನಗರ ಕಮಾಂಡ್ ಸೆಂಟರ್ಗಳಲ್ಲಿ ಓಪನ್ ಮಾಡುತ್ತೇವೆ. ಹಾಗೆ ಕೋವಿಡ್ ಕಡಿಮೆಯಾದ ತಕ್ಷಣ ರೆಸಿಡೆನ್ಸಿ ಶಾಲಾ ಮ್ಯಾನೆಜ್‌ಮೆಂಟ್ ಸಭೆ ಕರೆದು ಮ್ಯಾನೆಜ್‌ಮೆಂಟ್ ಸಭೆ ಮಾಡಲಿದ್ದೇವೆ ಎಂದರು.
ಶಾಲಾ ಕಾಲೇಜು ಹಾಸ್ಟೆಲ್ನಲ್ಲಿ ಡ್ರಗ್ ಸಿಕ್ಕರೆ ವಿದ್ಯಾರ್ಥಿಗಳ ಮೇಲೆ ಮಾತ್ರ ಅಲ್ಲದೇ ಮ್ಯಾನೆಜ್‌ಮೆಂಟ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇನ್ನೂ ಸಿಸಿಬಿ ಪೊಲೀಸರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖವಾಗಿ ಕೆನಡಾ,ಆಫ್ರಿಕಾ, ಕೇರಳದಾವರಾಗಿದ್ದಾರೆ. ಇದು ಇಲಾಖೆಗೆ ಒಳ್ಳೆಯ ಹೆಸರು. ಹಾಗೆ ಬಂಧಿಸಿದ ಆರೋಪಿಗಳಿಗೆ ಬೇಗನೆ ಜಾಮೀನು ಸಿಗುತ್ತೆ. ಅದಕ್ಕೂ ನಾವು ರೀಸರ್ಚ್ ಮಾಡಿ ಹೊಸ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿ ನ್ಯಾಯಾಲಯಕ್ಕೂ ಮನವಿ ಸಲ್ಲಿಸಿದ್ದು, ಅದಕ್ಕೂ ಅನುಮತಿ ಸಿಕ್ಕಿದೆ ಎಂದರು.
ಹೀಗಾಗಿ ಯಾವ ವ್ಯಕ್ತಿಗೆ ಡ್ರಗ್ಸ್ ಸಪ್ಲೈ ಮಾಡುತ್ತಾರೋ ಅಂತವರಿಗೆ 1 ವರ್ಷ ಜೈಲು ಶಿಕ್ಷೆಯಾಗುತ್ತದೆ. ಆರೋಪಿಗಳನ್ನು ಬಂಧಿಸಿರೋದು ಇಲಾಖೆಯ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಕೇವಲ ಮಾರಾಟ ಅಷ್ಟೇ ಅಲ್ಲ, ಸೇವನೆ, ಮ್ಯಾನುಫ್ಯಾಕ್ಚರಿಂಗ್ ಮಾಡುವವರನ್ನು ಬಂಧಿಸಬೇಕು ಎಂದರು.
ಯುವ ಜನತೆಗೆ ನನ್ನ ಕಳಕಳಿಯ ವಿನಂತಿ, ಡ್ರಗ್ಸ್ನಿಂದ ನಿಮ್ಮ ಚಾರಿತ್ಯ್ರ ಹರಣವಾಗುತ್ತೆ. ಹೀಗಾಗಿ ಸೇ ನೋ ಟು ಡ್ರಗ್ಸ್, ನಿಮಗೆ ಇದರ ಬಗ್ಗೆ ಗೊತ್ತಾದ್ರೆ ಪೊಲೀಸರಿಗೆ ಮಾಹಿತಿ ತಿಳಿಸಿ. ಕಷ್ಟ ಪಟ್ಟು ದುಡಿದು ಮಕ್ಕಳನ್ನು ಸಾಕಿದ್ದೀರಾ, ದಯವಿಟ್ಟು ಮಕ್ಕಳಿಗೆ ಡ್ರಗ್ಸ್ ಪರಿಣಾಮದ ಬಗ್ಗೆ ತಿಳಿಸಿ ಹೇಳಿ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್ ಹಾಗೂ ಡಾ.ಎಂ ಸಲೀಂ, ಎಡಿಜಿಪಿ ಪರಮಶಿವಮೂರ್ತಿ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳು ಭಾಗಿಯಾಗಿದ್ದರು.