ETV Bharat / state

ಕಿರುಕುಳಕ್ಕೂ ಒಂದು‌ ಮಿತಿ ಇದೆ, ಎಲ್ಲದಕ್ಕೂ ನಾನು ರೆಡಿ ಇದ್ದೇನೆ.. ಡಿಕೆಶಿ

author img

By

Published : Aug 25, 2022, 1:45 PM IST

ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಇವತ್ತಿನ ತನಕ ನನ್ನನ್ನಾಗಲಿ ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಸಿಎಂ ಭೇಟಿ ಮಾಡಿದ್ದರು? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ಉಳಿದುಕೊಂಡಿರುವುದು ಇನ್ನೇನಿದೆ. ಕಿರುಕುಳಕ್ಕೆ ಒಂದು ಲಿಮಿಟೇಶನ್ ಇರಬೇಕು. ಈ ದೇಶದಲ್ಲಿ ಕಾನೂನು ಇದೆ. ಆ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಅದನ್ನು ದುರುಪಯೋಗ ಮಾಡಿಕೊಂಡು ನನ್ನ‌ ಮೇಲೆ ಎಷ್ಟು ಕೇಸ್ ಹಾಕಿಸಿದ್ದಾರೆ ಎಂದು ನಾನೊಂದು ಪಟ್ಟಿ ಮಾಡಿಸಿದ್ದೇನೆ‌. ಎಲ್ಲರಿಗೂ ಸೇರಿ ಕಿರುಕುಳ ಕೊಡುತ್ತಿದ್ದಾರೆ. ಎಲ್ಲ ಸುತ್ತಿಕೊಂಡು ಬರುತ್ತಿದ್ದಾರೆ. ನಾನು ಎಲ್ಲದಕ್ಕೂ ರೆಡಿ ಇದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿಜಯ್ ಮುಳುಗುಂದ್​ಗೆ ಸಿಬಿಐ ನೋಟಿಸ್‌ ವಿಚಾರವಾಗಿ ಪ್ರತಿಕ್ರಿಯಿಸಿ, ವಿಜಯ್ ಮುಳುಗುಂದ್ ನಮ್ಮ ಪಾರ್ಟಿಯ ಜನರಲ್ ಸೆಕ್ರೆಟರಿ, ನನ್ನ ಆಪ್ತ. ಅವನೊಬ್ಬನ ಮೇಲೆ ಕೊಟ್ಟಿಲ್ಲ. 30, 40 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾರ್ಯಾರು ನನ್ನ ಹತ್ರ ವ್ಯವಹಾರ ಮಾಡಿದ್ದಾರೆ. ನನ್ನ ಜೊತೆ ಯಾರಿಗೆಲ್ಲ ಬ್ಯುಸಿನೆಸ್ ಇದೆ. ಅವರೆಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ. ನಾವು ಇದನ್ನು ಮಾತನಾಡಬಾರದು. ಲೀಗಲ್ ಆಗಿ ಫೇಸ್ ಮಾಡೋಣ ಎಂದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈಗ ಇರುವ ಮಂತ್ರಿಗಳು ಶಾಸಕರಾಗಿದ್ದಾಗ ಎಷ್ಟಿತ್ತು ಆಸ್ತಿ. ಈಗ ಎಷ್ಟು ಆಗಿದೆ ಬಿಜೆಪಿಯವರದ್ದು ಆಸ್ತಿ? ನನಗೆ ಆಂತರಿಕ ಮಾಹಿತಿ ಇದೆ. ನಮ್ಮ ಕಿವಿಗೂ ಹೇಳುವವರು ಇದ್ದಾರೆ‌. ಈ ದೇಶದ ಕಾನೂನು ಬಗ್ಗೆ ನನಗೆ ಗೌರವವಿದೆ. ನನ್ನ ಪ್ರಾಮಾಣಿಕತೆಗೆ ಬೆಲೆ ಸಿಗುವ ನಂಬಿಕೆ ಇದೆ. ನನಗೆ, ನಮ್ಮ ಪಕ್ಷಕ್ಕೆ ಬೆಲೆ ಸಿಗುತ್ತೆ ಅನ್ನುವ ನಂಬಿಕೆ ಇದೆ‌. ಏನು ಬೇಕಾದ್ರೂ ಮಾಡಿಕೊಳ್ಳಲಿ. ನಾನು ಎಲ್ಲದನ್ನು ಫೇಸ್ ಮಾಡೋದಕ್ಕೆ ರೆಡಿ ಇದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಕಾಂಗ್ರೆಸ್ ಏಜೆಂಟ್ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಇವತ್ತಿನ ತನಕ ನನ್ನನ್ನಾಗಲಿ ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಸಿಎಂ ಭೇಟಿ ಮಾಡಿದ್ದರು? ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ. ಬಿಜೆಪಿಯವರು ಏಳು ಎಂಟು ಕಡೆ ಜನೋತ್ಸವ ಆಚರಣೆ ಮಾಡ್ತಾರಂತೆ ಮಾಡಿಕೊಳ್ಳಲಿ. ವಿರೋಧ ಪಕ್ಷವಾಗಿ ನಾವು ಇವರ ಭ್ರಷ್ಟೋತ್ಸವ ಆಚರಣೆ ಮಾಡಬೇಕಲ್ಲ. ವಿರೋಧ ಪಕ್ಷವಾಗಿ ನಮ್ಮ ಮೇಲೂ ಜವಾಬ್ದಾರಿ ಇದೆಯಲ್ಲ ಎಂದು ತಿಳಿಸಿದರು.

ಇವರ ಮಾಜಿ ಸಚಿವರೊಬ್ಬರು ಅಪೆಕ್ಸ್ ಬ್ಯಾಂಕ್​ಗೆ 600-700 ಕೋಟಿ ಸಾಲ ಬಾಕಿ ಇಟ್ಕೊಂಡಿದ್ದಾರೆ. ಅವರ ಬಗ್ಗೆಯೂ ಮಾತನಾಡಬೇಕಲ್ಲ ನಾವು? ಈಶ್ವರಪ್ಪಗೆ ತನಿಖೆ ಆಗುವ ಮೊದಲೇ ಕ್ಲೀನ್​ ಚಿಟ್ ಕೊಟ್ರಲ್ಲ ಅದರ ಬಗ್ಗೆಯೂ ನಾವು ಮಾತಾಡಬೇಕಲ್ಲ? ಇದೇ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ವಿಷಯಕ್ಕೆ ಚಾಮರಾಜನಗರ ರೈತರು ಪತ್ರ ಬರೆದಿದ್ದರಲ್ಲ. ಪ್ರಧಾನಿಗಳಿಗೆ ಪತ್ರ ಬರೆದರೂ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಗುತ್ತಿಗೆದಾರರ ಆರೋಪದ ಹಿಂದೆ ಕಾಂಗ್ರೆಸ್‌ ರಾಜಕೀಯ ಇದೆ : ಸಚಿವ ಸುಧಾಕರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.