ಬೆಂಗಳೂರು: ಮೊದಲ ರಾತ್ರಿಗೆ ಎರಡು ದಿನ ಬಾಕಿ ಇರುವಾಗಲೇ ಪತ್ನಿಯ ರಾಸಲೀಲೆಯ ಫೋಟೋಗಳನ್ನು ಮೊಬೈಲ್ನಲ್ಲಿ ನೋಡಿದ ಪತಿಗೆ ಶಾಕ್ ಆಗಿದೆ. ನವ ದಾಂಪತ್ಯ ಜೀವನಕ್ಕೆ ಆರಂಭದಲ್ಲೇ ಪೂರ್ಣ ವಿರಾಮ ಬಿದ್ದಿರುವ ಪ್ರಕರಣ ಸುಬ್ರಮಣ್ಯ ನಗರದಲ್ಲಿ ಬೆಳಕಿಗೆ ಬಂದಿದೆ.
ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಸಂತ್ರಸ್ತ ಯುವಕ ವಾಸವಿದ್ದು ಹಾಸನ ಮೂಲದ ಸರ್ಕಾರಿ ಉದ್ಯೋಗದಲ್ಲಿರುವ ಯುವತಿಯ ಪ್ರಪೋಸಲ್ ಬಂದ ಕಾರಣ ಎರಡು ಮನೆಯವರ ಒಪ್ಪಿಗೆ ಮೇರೆಗೆ 2019 ಜೂನ್ 30ರಂದು ಹಿರಿಯರ ಮುಂದೆ ಪರಸ್ಪರ ಒಪ್ಪಿಗೆ ಮದುವೆಯಾಗಿದ್ದ. ನಂತರ ಕೆಲ ಸಾಂಪ್ರದಾಯಿಕ ಪೂಜೆ, ಪುನಸ್ಕಾರ ಇದ್ದ ಕಾರಣ, ಕೆಲಕಾಲ ಬಿಡುವಿನಲ್ಲಿದ್ದ ಸಂತ್ರಸ್ತ ಹುಡುಗನಿಗೆ ಫೇಸ್ಬುಕ್ನಲ್ಲಿ ಪ್ರಮೋದ್ ಕುಮಾರ್ ಎಂಬ ಹೆಸರಿನ ಅಕೌಂಟ್ನಿಂದ ಮೆಸ್ಸೇಜ್ ಬಂದಿತ್ತು. ಹೊಸದಾಗಿ ಮದುವೆ ಆಗಿದ್ದ ಹುಡುಗಿ ಇದಕ್ಕೂ ಮುನ್ನ ವಿನೀತ್ ಎಂಬಾತನನ್ನು ಪ್ರೀತಿಸಿ ಮೋಸ ಮಾಡಿರುವುದಾಗಿ ತಿಳಿಸಿದ್ದಾನೆ. ಹಾಗೆ ಆಕೆಯ ನಗ್ನ ಫೋಟೋಗಳನ್ನು ಕಳುಹಿಸಿ ಹೆಚ್ಚಿನ ಮಾಹಿತಿಗೆ ವಿನೀತ್ ನಂಬರ್ ಶೇರ್ ಮಾಡಿದ್ದ.
ಇನ್ನು ವಿನಿತ್ನನ್ನು ಮಧುಮಗ ಸಂಪರ್ಕಿಸಿದಾಗ ಆಕೆಯೊಂದಿಗಿನ ದೈಹಿಕ ಸಂಪರ್ಕದ ಫೋಟೋಗಳನ್ನು ಕಳುಹಿಸಿದ್ದಾನೆ. ಚಿಕ್ಕಮಗಳೂರು ರೆಸಾರ್ಟ್ನಲ್ಲಿ ತಾವಿಬ್ಬರು ಇದ್ದ ಫೋಟೋಗಳನ್ನು ಶೇರ್ ಮಾಡಿದ್ದಾನೆ. ಇದಲ್ಲದೇ ಹುಡುಗಿ ಚಾಟ್ ಮಾಡಿರುವ ಸಂದೇಶವನ್ನ ಕಳುಹಿಸಿದ್ದಾನೆ. ಇದೆಲ್ಲವನ್ನು ಕಂಡ ಯುವಕನಿಗೆ ಮೊದಲ ರಾತ್ರಿಗೆ ಎರಡು ದಿನ ಬಾಕಿ ಇದ್ದಾಗಲೇ ದೊಡ್ಡ ಆಘಾತವಾಗಿದೆ.
ಇನ್ನು ಮದುವೆಯ ಮುಂಚೆ ಯಾರನ್ನಾದರು ಪ್ರೀತಿ ಮಾಡುತ್ತಿದ್ದೀಯ ಅನ್ನೋ ಪ್ರಶ್ನೆಗೆ ನೋ ಎಂದು ಹೇಳಿ ಯುವತಿ ಮೋಸ ಮಾಡಿದ್ದಾಳೆ ಎನ್ನಲಾಗ್ತಿದೆ. ಸದ್ಯ ಈ ಘಟನೆ ಗೊತ್ತಾದ ನಂತರ ಸಂತ್ರಸ್ತ ಯುವಕ ಪ್ರಶ್ನಿಸಿದ್ದಕ್ಕೆ ಯುವತಿ ಮನೆಯವರು ಬೆದರಿಕೆ ಹಾಕಿದ ಕಾರಣ ಸದ್ಯ ಈ ಸಂಬಂಧ ಹಾಸನದ ಸೈಬರ್ ಠಾಣೆ ಹಾಗೂ ಸಿಲಿಕಾನ್ ಸಿಟಿಯ ಸುಬ್ರಮಣ್ಯ ನಗರ ಠಾಣೆಯಲ್ಲಿ ದೂರು ಪ್ರತಿ ದೂರುಗಳು ದಾಖಲಾಗಿವೆ.