ಬೆಂಗಳೂರು: ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ?. ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು?. ಬೊಮ್ಮಾಯಿ ಕೃಪೆಯೇ?, ಜ್ಞಾನೇಂದ್ರ ಕೃಪೆಯೇ? ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಸರ್ಕಾರವ್ನು ಪ್ರಶ್ನಿಸಿದೆ. ಸ್ಯಾಂಟ್ರೋ ರವಿ ನನಗೆ ಪರಿಚಯವೇ ಇಲ್ಲ ಎನ್ನುವ ಬೊಮ್ಮಾಯಿ ಅವರೇ, ಸಿಎಂ ನೇರ ಪರಿಚಯ ನನಗೆ' ಎಂದು ರವಿ ಹೇಳಿದ್ದು ಹೇಗೆ?. ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ 'ಸ್ವೀಟ್ ಬ್ರದರ್' ಆಗಿರುವುದು ಹೇಗೆ?. ನಿಮ್ಮ ಸರ್ಕಾರದ ಬಹುತೇಕ ಸಚಿವರಿಗೆ ಆಪ್ತನಾಗಿರುವ ಸ್ಯಾಂಟ್ರೋ ರವಿ ನಿಮಗೂ ಆಪ್ತನಲ್ಲವೇ?. ತಾವು ಆತನಿಗೆ ಸಾರ್ ಎಂದು ಸಂಬೋಧಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.
-
ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ?
— Karnataka Congress (@INCKarnataka) January 6, 2023 " class="align-text-top noRightClick twitterSection" data="
ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು?
ಬೊಮ್ಮಾಯಿ ಕೃಪೆಯೇ?
ಜ್ಞಾನೇಂದ್ರ ಕೃಪೆಯೇ?
">ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ?
— Karnataka Congress (@INCKarnataka) January 6, 2023
ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು?
ಬೊಮ್ಮಾಯಿ ಕೃಪೆಯೇ?
ಜ್ಞಾನೇಂದ್ರ ಕೃಪೆಯೇ?ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ?
— Karnataka Congress (@INCKarnataka) January 6, 2023
ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು?
ಬೊಮ್ಮಾಯಿ ಕೃಪೆಯೇ?
ಜ್ಞಾನೇಂದ್ರ ಕೃಪೆಯೇ?
ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ. ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ? ಕೆ.ಸುಧಾಕರ್ ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? ಎಂದು ಸ್ಯಾಂಟ್ರೋ ರವಿ ಜೊತೆಗಿನ ಸಚಿವ ಸುಧಾಕರ್ ಫೋಟೋವನ್ನು ಟ್ಯಾಗ್ ಮಾಡಿ ಆರೋಪಿಸಿದೆ.
ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಕೆ.ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ, ಬಿಜೆಪಿ ಸಚಿವರ ಜೊತೆ ಸಂಪರ್ಕ ಹೊಂದಿದ್ದಾನೆ' ಎಂಬ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಸಚಿವರು ಮತ್ತು ಸ್ಯಾಂಟ್ರೋ ರವಿ ನಡುವಿನ ಸಂಪರ್ಕದ ಬಗ್ಗೆ ಟ್ವೀಟ್ ಮಾಡುತ್ತಿದೆ.
ಸ್ಯಾಂಟ್ರೋ ರವಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರನ ಜೊತೆಗಿದ್ದ ಫೋಟೊ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕರನ್ನು ತರಾಟೆಗೆ ತೆಗದುಕೊಂಡಿದೆ. 'ಸಿಎಂ ನನಗೆ ಒನ್ ಟು ಒನ್ ಇದ್ದಾರೆ, ನನಗೆ 'ಸರ್' ಎಂದು ಕರೆಯುತ್ತಾರೆ' ಎಂದಿದ್ದಾನೆ ವೇಶ್ಯಾವಾಟಿಕೆ ದಂಧೆಯ ಆರೋಪಿ ಸ್ಯಾಂಟ್ರೋ ರವಿ. ಸಿಎಂ ಪುತ್ರ 'ಸ್ವೀಟ್ ಬ್ರದರ್'ಆಗಿ ಆತ್ಮೀಯತೆ ಹೊಂದಿರುವುದು ಆತನ ಹೇಳಿಕೆಗೆ ಪುರಾವೆ ಒದಗಿಸುತ್ತದೆ. ರಾಜಾರೋಷವಾಗಿ ವರ್ಗಾವಣೆ ಡೀಲ್ ಮಾಡುವ ಈತನೊಂದಿಗೆ ಬಸವರಾಜ ಬೊಮ್ಮಾಯಿ ಅವರಿಗಿರುವ ಸಂಬಂಧವೇನು? ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಪ್ರಶ್ನೆ ಮಾಡಿದೆ.
ಸ್ಯಾಂಟ್ರೋ ರವಿ ಈತ ಸಿಎಂ ಪುತ್ರನಿಗೆ ಆತ್ಮೀಯ, ಗೃಹಸಚಿವರಿಗೂ ಆತ್ಮೀಯ, ಬಹುತೇಕ ಸಚಿವರಿಗೂ ಆತ್ಮೀಯ. ವರ್ಗಾವಣೆ ದಂಧೆಯಲ್ಲಿನ ಈತನ ಆತ್ಮವಿಶ್ವಾಸಕ್ಕೆ ಸರ್ಕಾರದ ಪ್ರಭಾವಿಗಳ ಆತ್ಮೀಯತೆಯೇ ಕಾರಣವೇ? ಬಸವರಾಜ ಬೊಮ್ಮಾಯಿ ಅವರೇ, ತಮಗೆ ಈತನೊಂದಿಗಿರುವ ವ್ಯವಹಾರವೇನು? ಎಂದು ಪ್ರಶ್ನೆ ಮಾಡಿದೆ. 10 ವರ್ಷದಿಂದ ವೇಶ್ಯಾವಾಟಿಕೆ ದಂಧೆಯ ಪ್ರಕರಣಗಳಿರುವ ಸ್ಯಾಂಟ್ರೋ ರವಿಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೂ ಇರುವ ಆತ್ಮೀಯ ಸಂಬಂಧವೇನು? ಗೃಹ ಇಲಾಖೆಯ ವರ್ಗಾವಣೆಗೆ ಆತ ಸಚಿವರಿಗೆ ಯಾವ ರೀತಿ ಋಣ ತೀರಿಸುತ್ತಿದ್ದ? ಗೃಹ ಸಚಿವರೇ ಆತನ ದಂಧೆಯ ಹಿಂದಿನ ಶಕ್ತಿಯಾಗಿದ್ದಾರಾ? ಇಡೀ ಸರ್ಕಾರವೇ ಈತನ ಕೈಯ್ಯಲ್ಲಿದೆಯಂತೆ, ಇದು ಸಾಧ್ಯವಾಗಿದ್ದು ಹೇಗೆ? ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಸರಣಿ ಟ್ವೀಟ್ ಮಾಡಲು ಕಾರಣ : ಈ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಎಂಬಾತ ಯುವತಿಯೊಬ್ಬಳಿಗೆ ಕೆಲಸ ನೀಡುವ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಇತನ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪಕ್ಷದ ಕಛೇರಿಯಲ್ಲಿ ಈ ಕುರಿತು ವಿಷಯವನ್ನು ಪ್ರಸ್ತಾಪಿಸಿದ್ದರು. ಇಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ಸ್ಯಾಂಟ್ರೋ ರವಿಗೆ ಬಿಜೆಪಿ ನಾಯಕರ ಜೊತೆಗೆ ಸಂಬಂಧವಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ :ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್ಡಿಕೆ