ETV Bharat / state

ಸಾಲದ ಹಣ‌ ಕೊಟ್ಟಿಲ್ಲ ಎಂದು ಕಾರ್ಮಿಕನ ಮೇಲೆ‌ ಹಲ್ಲೆ ನಡೆಸಿದ ಹೋಟೆಲ್​​ ಮಾಲೀಕ - ಬಸವನಗುಡಿ ಪೊಲೀಸ್​ ಠಾಣೆ

ಸಾಲ ಪಡೆದ ಹಣ ವಾಪಸ್​ ನೀಡಿಲ್ಲ ಎಂದು ಕಾರ್ಮಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಸವನಗುಡಿಯಲ್ಲಿ ನಡೆದಿದೆ.

ಕಾರ್ಮಿಕನ ಮೈ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವುದು

author img

By

Published : Oct 4, 2022, 8:42 PM IST

ಬೆಂಗಳೂರು: ಸಾಲದ ಹಣ ಕೊಟ್ಟಿಲ್ಲ ಎಂದು ಕಾರ್ಮಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಸವನಗುಡಿಯಲ್ಲಿ ನಡೆದಿದೆ‌. ಕುಮಾರ್ ಹಲ್ಲೆಗೊಳಗಾದ ಕಾರ್ಮಿಕನಾಗಿದ್ದು, ಮೈ ತುಂಬಾ ಬಾಸುಂಡೆ ಬರುವವರೆಗೂ ಹಲ್ಲೆ ಮಾಡಲಾಗಿದೆ.

ಕಾರ್ಮಿಕನ ಮೈ ಮೇಲೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿರುವುದು

ಎನ್ ಆರ್ ಕಾಲೋನಿಯ ಸೌತ್ ಕಿಚನ್ ಹೋಟೆಲ್​ನಲ್ಲಿ ಕೂಡಿ ಹಾಕಿ ಸೌತ್ ಕಿಚನ್ ಮಾಲೀಕ ಸಂಜಯ್ ಹಾಗೂ ಸಂತೋಷ್ ಪ್ರಭಾಕರ್ ರಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಕಳೆದ 6 ವರ್ಷಗಳಿಂದ ಬಸವನಗುಡಿಯಲ್ಲಿರುವ ಸೌತ್ ಕಿಚನ್​ನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಮನೆಯಲ್ಲಿ ಸಮಸ್ಯೆ, ಅನಾರೋಗ್ಯ ಹಿನ್ನೆಲೆ 3 ಲಕ್ಷ ರೂ. ಅಡ್ವಾನ್ಸ್ ರೀತಿ ಪಡೆದಿದ್ದ. ಮಾಲೀಕರಿಂದ ಹಂತ ಹಂತವಾಗಿ ಪ್ರತಿ ತಿಂಗಳು 5 ರಿಂದ 10 ಸಾವಿರ ಹಣ ಸಾಲವಾಗಿ ಪಡೆದಿದ್ದ ಕುಮಾರ್ ಗೆ ಸಾಲ‌ ತೀರಿಸಲು ಸಾಧ್ಯವಾಗಿರಲಿಲ್ಲ.

ಮೂರು ತಿಂಗಳ ಹಿಂದೆ ಕುಮಾರ್ ಕೆಲಸ ಬಿಟ್ಟಿದ್ದ. ಕಳೆದ ತಿಂಗಳ 30 ರಂದು ಕುಮಾರ್​ಗೆ ಕರೆ ಮಾಡಿದ್ದ ಮಾಲೀಕರು ಹೋಟೆಲ್​ ಬಳಿ ಕರೆಸಿಕೊಂಡು ರೂಮ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರಂತೆ‌. ಸದ್ಯ ಬಸವನಗುಡಿ ಪೊಲೀಸ್​ ಠಾಣೆಗೆ ಕುಮಾರ್ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ‌‌.

ಓದಿ: ಬೆಲ್ಜಿಯಂನಿಂದ ಬೆಂಗಳೂರಿಗೆ ಎಂಡಿಎಂಎ ಆಮದು ಮಾಡಿಕೊಂಡ ಮಹಿಳೆಯ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.