ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಈ ಸಂಧರ್ಭದಲ್ಲಿ ಇತರೆ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಬನಶಂಕರಿ ನಿವಾಸಿ 53 ವರ್ಷದ ವ್ಯಕ್ತಿಯೋರ್ವರಿಗೆ ಶ್ವಾಸಕೋಶದ ಸಮಸ್ಯೆ ಇರುವ ಕಾರಣ ಬಹಳಷ್ಟು ಆಸ್ಪತ್ರೆಗೆ ಅಲೆದರು ಕೂಡ ಬೆಡ್ ಸಿಗದೇ ವಿಕ್ಟೋರಿಯಾ ಆಸ್ಪತ್ರೆ ಬಳಿ ತೆರಳಿದ್ದಾರೆ. ವಿಕ್ಟೊರಿಯಾ ಆಸ್ಪತ್ರೆ ಬಳಿ ಆಕ್ಸಿಜನ್ ಸಿಲಿಂಡರ್ ಜೊತೆ ಆಟೋದಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ರೋಗಿ ನರಳಾಡಿ ಚಿಂತಾಜನಕ ಸ್ಥಿತಿಯಲ್ಲಿದ್ದರೂ ಕೂಡ ಸೂಕ್ತ ಚಿಕಿತ್ಸೆಗೆ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ.
ಇದರಿಂದ ಆಟೋದಲ್ಲಿ ಜೀವನ್ಮರಣ ಮಧ್ಯೆ ಹೋರಾಡುತ್ತಿದ್ದ ರೋಗಿಯನ್ನು ಕಂಡ ಆತನ ಪತ್ನಿ ಕಂಗಾಲಾಗಿ ಮಾಧ್ಯಮದವರಿಗೆ ವಿಷಯ ತಿಳಿಸಿದ್ದಾರೆ. ಆಗ ಖಾಸಗಿ ಚಾನಲ್ ವರದಿಗಾರ ಹೋಗಿ ಪ್ರಶ್ನಿಸಿದಾಗ ಆಸ್ಪತ್ರೆಗೆ ನಿರ್ಬಂಧ ವಿಧಿಸಿ, ಆಸ್ಪತ್ರೆ ಮುಖ್ಯ ದ್ವಾರದ ಬಳಿ ಸೆಕ್ಯುರಿಟಿ ಹೈಡ್ರಾಮ ಮಾಡಿದ್ದಾನೆ ಎನ್ನಲಾಗ್ತಿದೆ. ಅಲ್ಲದೆ ಕ್ಯಾಮರಾ ಎಳೆದಾಡಿ ನಿಂದಿಸಿದ್ದಾನ ಎಂಬ ಆರೋಪಿಸಲಾಗಿದೆ.
ಆಟೋದಲ್ಲಿ ನರಳಾಡುತ್ತಿದ್ದ ರೋಗಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮಾಧ್ಯಮದವರೇ ಮುಂದಾಗಿ ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.