ETV Bharat / state

ಕಾಂಗ್ರೆಸ್​ ಷಡ್ಯಂತ್ರ ವಿಫಲ, ಚುನಾವಣೆಗೆ ಬಿಜೆಪಿ ಸಿದ್ಧವಿದೆ: ಬಸವರಾಜ ಬೊಮ್ಮಾಯಿ - Minister Somanna reaction on Disqualified MLAs Verdict

ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್​ ತೀರ್ಪಿನ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಸವರಾಜ್ ಬೊಮ್ಮಾಯಿ
author img

By

Published : Nov 13, 2019, 1:29 PM IST

ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್​ ತೀರ್ಪಿನ ಬಗ್ಗೆ ಸಿಎಂ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಚುನಾವಣೆಗೆ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ಸಿಕ್ಕಿದೆ. ಅದು ಅನರ್ಹ ಶಾಸಕರಿಗೆ ದೊರೆತ ಜಯ. ಕಾಂಗ್ರೆಸ್ ಷಡ್ಯಂತ್ರ ವಿಫಲವಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್​ ಬೊಮ್ಮಾಯಿ ಹಾಗೂ ಸೋಮಣ್ಣ

ಅಲ್ಲದೇ ಚುನಾವಣೆಗೆ ಬಿಜೆಪಿ ಸಿದ್ಧವಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಳಿದ ಅವಧಿಗೆ ಯಡಿಯೂರಪ್ಪ ಸಿಎಂ‌ ಆಗಿರ್ತಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಅಧಿಕಾರ ಪೂರೈಸಲಿದೆ. ಇದು ನೈತಿಕ ಗೆಲುವು ಎಂದರು.

ನಂತರ ಸಚಿವ ಸೋಮಣ್ಣ ಮಾತನಾಡಿ, ಸುಪ್ರೀಂಕೋರ್ಟ್ ಆದೇಶವನ್ನ ನಾವು ಸ್ವಾಗತಿಸುತ್ತೇವೆ. ಯಾರ್ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಇಂದು ಸಂಜೆ ನಡೆಯುವ ಕೋರ್​ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗುತ್ತದೆ ಎಂದರು.

ಯಡಿಯೂರಪ್ಪ ಮೂರು ತಿಂಗಳಿಂದ ಕೆಲಸ ಮಾಡಿದ್ದಾರೆ. ಉತ್ತಮವಾಗಿ ನೆರೆ ಪರಿಸ್ಥಿತಿ ನಿಭಾಯಿಸಿದ್ದು, ಕೊಟ್ಟಿರುವ ಪರಿಹಾರವನ್ನ ಜನರು ಮೆಚ್ಚಿದ್ದಾರೆ. ಇನ್ನೂ ಮೂರು ವರ್ಷಗಳ ಕಾಲ ಯಡಿಯೂರಪ್ಪನವರ ಸರ್ಕಾರ ಇರುತ್ತೆ. ದೇಶದಲ್ಲಿ ನಂಬರ್ 1 ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

Intro:

ಬೆಂಗಳೂರು: ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತಿದ್ದು ಅನರ್ಹ ಶಾಸಕರಿಗೆ‌ ಬಿಜೆಪಿ ಟಿಕೆಟ್ ನೀಡುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುರಿತು ಕಟೀಲ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕರ್ನಾಟಕದ 17 ಶಾಸಕರ ಅನರ್ಹತೆಯ ವಿವಾದ ನ್ಯಾಯಾಲಯದ ಮುಂದೆ ಇತ್ತು.ಸಭಾಧ್ಯಕ್ಷರ ತೀರ್ಮಾನವನ್ನ ನ್ಯಾಯಾಲಯ ಎತ್ತಿ‌ಹಿಡಿದೆ ಜೊತೆಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆಗೂ ಅವಕಾಶ ಕೊಟ್ಟಿದೆ. ನ್ಯಾಯಾಲಯದ ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಉಪ ಚುನಾವಣೆ ಘೊಷಣೆ ಈಗಾಗಲೇ ಆಗಿದೆ. ಅದರ ಬಗ್ಗೆ ಪ್ರಮುಖರು ಕುಳಿತು ಚರ್ಚೆ ಮಾಡ್ತೀವಿ.ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಇಂದು ಚರ್ಚೆ ಮಾಡುತ್ತೇವೆ.ಇಂದು ಸಂಜೆ ಕೋರ್ ಕಮಿಟಿ ಇದೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಮುಂದೆ ಅವರಿಗೆ ಸ್ಥಾನ ಮಾನ ಮಾಡುವ ಬಗ್ಗೆಯೂ ಚರ್ಚೆ ನಡೆಯಲಿದೆ, ರಾಜು ಕಾಗೆ, ಶರತ್ ಬಚ್ಚೇಗೌಡ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವ ವಿಚಾರ, ಯಾರನ್ನು ಕಳಿಸಿ ಮನವಿಲಿಸಬೇಕು ಎನ್ನುವುದೂ ಕೋರ್ ಕಮಿಟಿಯಲ್ಲಿ ಚರ್ಚೆಯಾಗುತ್ತದೆ.ಸಂಜೆ ಎಲ್ಲವೂ ಚರ್ಚೆಯಾಗಿ ನಿರ್ಧಾರ ಆಗುತ್ತದೆ ಎಂದರು.Body:Video mojoConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.