ETV Bharat / state

ರಾಜ್ಯದಲ್ಲಿರುವ ಅಫ್ಘಾನ್ ಪ್ರಜೆಗಳ ರಕ್ಷಣೆಗೆ ಸರ್ಕಾರ, ಪೊಲೀಸ್ ಇಲಾಖೆ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಹಣದ ಹಿಂದೆ ಹೋಗೋ ಪೊಲೀಸರಿಗೆ ಖಡಕ್ ವಾರ್ನ್ ಮಾಡಿದ ಗೃಹ ಸಚಿವರು ಭ್ರಷ್ಟ, ಅಪ್ರಾಮಾಣಿಕ ಪೊಲೀಸರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಅಂಥವರನ್ನು ಯಾವುದೇ ಕಾರಣಕ್ಕೂ ನಾನು ಕ್ಷಮಿಸಲ್ಲ. ಯಾರು ಅಪರಾಧಿಗಳ ಪರ ನಿಲ್ಲುತ್ತಾರೆ ಎಂದು ಪೊಲೀಸರ ಪಟ್ಟಿ ಮಾಡಲಾಗುತ್ತಿದೆ. ನಿದ್ರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜು ಇಲ್ಲ..

home-minister-aaraga-jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Aug 18, 2021, 3:29 PM IST

Updated : Aug 18, 2021, 3:36 PM IST

ಬೆಂಗಳೂರು : ಅಫ್ಘಾನ್ ಪ್ರಜೆಗಳ ರಕ್ಷಣೆಗೆ ಪೊಲೀಸ್ ಇಲಾಖೆ ಇದೆ. ಯಾರಿಗೆ ಯಾವುದೇ ತೊಂದರೆ ಆದರೂ ಹತ್ತಿರದ ಠಾಣೆಗೆ ಸಂಪರ್ಕ ಮಾಡಿ, ಸರ್ಕಾರ ಸಹ ರಕ್ಷಣೆಗೆ ನಿಲ್ಲುವಂತೆ ಹೇಳಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ

ನಗರ ಪೊಲೀಸರು ಕಳವು ಮಾಡಿದ್ದ ವಸ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಮೈಸೂರು ರಸ್ತೆ, ಕಾಟನ್ ಪೇಟೆ ಬಳಿಯ ನಗರ ಮೀಸಲು ಪಡೆಯ ಮೈದಾನದಲ್ಲಿ ಬುಧವಾರ ನಡೆಯಿತು.

ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಪೊಲೀಸರು ಕಳೆದ ಒಂದು ವರ್ಷದಲ್ಲಿ ನಗರದ ಒಟ್ಟು 8 ವಿಭಾಗಗಳು ಹಾಗೂ ಸಿಸಿಬಿ ಸೇರಿದಂತೆ ಸರಗಳ್ಳತನ, ಮನೆಗಳ್ಳತನ, ಸುಲಿಗೆ ಸಂಬಂಧ ಸುಮಾರು 2500ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 56 ಕೋಟಿ ಬೆಲೆಯ ಚಿನ್ನ ಬೆಳ್ಳಿ ಆಭರಣಗಳು, ಸುಲಿಗೆ ಮಾಡಿದ್ದ ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ವಾಹನಗಳು ಹಾಗೂ 32 ಕೋಟಿ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್, ತಿಮಿಂಗಿಲ ವಾಂತಿಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

Display of stolen goods
ಕಳವು ಮಾಡಿದ್ದ ವಸ್ತುಗಳ ಪ್ರದರ್ಶನ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಫ್ಘಾನ್ ಪ್ರಜೆಗಳು 300ಕ್ಕೂ ಅಧಿಕ ಜನರು ಇದ್ದಾರೆ. 192 ಸ್ಟೂಡೆಂಟ್ಸ್ ವೀಸಾ ಅವಧಿ ಮುಗಿಯುತ್ತಿದೆ. ಪೊಲೀಸರು, ಸರ್ಕಾರ ಅಸಹಾಯಕವಾಗಿ ನೋಡುತ್ತಾ ಇದೆ ಅಂತಾ ಹೇಳುತ್ತಿದ್ದಾರೆ. ವೀಸಾ ಅವಧಿ ಸಹ ಮುಗೀತಾ ಇದೆ ಎಂದಿದ್ದಾರೆ. ಅದರ ಬಗ್ಗೆಯೂ ಸಂಬಂಧ ಪಟ್ಟವರ ಬಳಿ ಮಾತನಾಡಲಾಗುವುದು. ಅಫ್ಘಾನ್‌ ಜನರ ಪರ ಸರ್ಕಾರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಷಮತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಒಡವೆ, ವಸ್ತುಗಳನ್ನು ಕಳೆದುಕೊಂಡಿದ್ದ ಸಾರ್ವಜನಿಕರ ಪೈಕಿ, ಸಾಂಕೇತಿಕವಾಗಿ 18 ಜನ ವಾರಸುದಾರರಿಗೆ ಕಳೆದುಕೊಂಡಿದ್ದ ಚಿನ್ನಾಭರಣ ಹಾಗೂ ಸ್ವತ್ತುಗಳನ್ನು ಹಸ್ತಾಂತರಿಸಲಾಯಿತು.

Display of stolen goods
ಕಳವು ಮಾಡಿದ್ದ ವಸ್ತುಗಳ ಪ್ರದರ್ಶನ

ಈ ಪತ್ತೆ ಕಾರ್ಯ ನಡೆಸಿರುವ ನಗರ ಪೊಲೀಸ್ ಘಟಕದ ಎಸಿಪಿ, ಪಿಎಸ್‌ಐ, ಎಎಸ್‌ಐ, ಹೆಚ್‌ಸಿ ಮತ್ತು ಪಿಸಿ ಸೇರಿದಂತೆ ಸುಮಾರು 40 ಅಧಿಕಾರಿಗಳು, ಸಿಬ್ಬಂದಿಗೆ 18 ಲಕ್ಷ ರೂಪಾಯಿಗಳ ಮೊತ್ತವನ್ನು ಗೃಹ ಸಚಿವರು ವಿತರಿಸಿದರು. ಸ್ವತ್ತುಗಳನ್ನು ಸ್ವೀಕರಿಸಿದ ಸಾರ್ವಜನಿಕರು, ವಾರಸುದಾರರು ಅಪಾರ ಸಂತಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಪ್ರದರ್ಶನ ಮಾಡಿರುವುದು ಸಾಮಾನ್ಯವಲ್ಲ: ನನ್ನ ಪೊಲೀಸ್ ಇಲಾಖೆ ನನ್ನ ಹೆಮ್ಮೆ. ಪೊಲೀಸರ ಕೆಲಸ ನೋಡಿ ನನ್ನ ಹೃದಯ ತುಂಬಿ ಬಂದಿದೆ. ಅಷ್ಟೊಂದು ಕೇಸ್ ಗಳನ್ನು ರಿಕವರಿ ಮಾಡಿದ್ದಾರೆ. ಸೈಬರ್ ಕ್ರೈಂ ಸ್ಟೇಷನ್​ಗೂ ನಾನು ವಿಸಿಟ್ ಮಾಡಿದ್ದೇನೆ. ಪ್ರಕರಣವನ್ನು ಭೇದಿಸೋದು ನೋಡಿದರೆ ಖುಷಿ ಅನಿಸುತ್ತದೆ. ಅಂತಾರಾಷ್ಟ್ರೀಯ ಪೊಲೀಸರು ಸಹ ಬಂದು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ. 32 ಕೋಟಿ ಮಾದಕ ವಸ್ತುಗಳನ್ನು ಇವತ್ತು ಪೊಲೀಸರು ಪ್ರದರ್ಶನ ಮಾಡಿರುವುದು ಸಾಮಾನ್ಯವಲ್ಲ ಎಂದರು.

ಭ್ರಷ್ಟ ಪೊಲೀಸರನ್ನು ಕ್ಷಮಿಸುವುದಿಲ್ಲ : ಹಣದ ಹಿಂದೆ ಹೋಗೋ ಪೊಲೀಸರಿಗೆ ಖಡಕ್ ವಾರ್ನ್ ಮಾಡಿದ ಗೃಹ ಸಚಿವರು ಭ್ರಷ್ಟ, ಅಪ್ರಾಮಾಣಿಕ ಪೊಲೀಸರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಅಂಥವರನ್ನು ಯಾವುದೇ ಕಾರಣಕ್ಕೂ ನಾನು ಕ್ಷಮಿಸಲ್ಲ. ಯಾರು ಅಪರಾಧಿಗಳ ಪರ ನಿಲ್ಲುತ್ತಾರೆ ಎಂದು ಪೊಲೀಸರ ಪಟ್ಟಿ ಮಾಡಲಾಗುತ್ತಿದೆ. ನಿದ್ರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜು ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಮಲ್ ಪಂತ್​ ಹೇಳಿಕೆ : ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದರು. ಪ್ರಾಪರ್ಟಿ ಪೆರೇಡ್ನಲ್ಲಿ 30 ಕೋಟಿಗೂ ಹೆಚ್ಚು ಸ್ವತ್ತು ಪ್ರದರ್ಶನ ಮಾಡಲಾಗಿದೆ. ಕಳೆದ ಆರು ತಿಂಗಳಿಂದ ಸೀಜ್ ಮಾಡಿದ ಡ್ರಗ್ಸ್ ನ ಪ್ರದರ್ಶನ ಮಾಡಲಾಗಿದೆ. ಕೋಟ್ಯಂತರ ಮೌಲ್ಯದ ಡ್ರಗ್ಸ್​ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಓದಿ: CAA ವಿರೋಧಿಸುವವರು ಅಫ್ಘಾನಿಸ್ತಾನದ​ ಸ್ಥಿತಿ ನೋಡಿ ತಿಳಿದುಕೊಳ್ಳಲಿ: ಸಂಸದ ಪ್ರತಾಪ್ ಸಿಂಹ

Last Updated : Aug 18, 2021, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.