ಬೆಂಗಳೂರು: ಮತಾಂತರ ಮೂಲಕ ಧರ್ಮ ಒಡೆಯಲಾಗಿತ್ತು. ಸೇವೆಯ ಹೆಸರಲ್ಲಿ ಮತಾಂತರ ಮಾಡಲಾಗಿತ್ತು. ಈಗ ಮತಾಂತರ ನಿಷೇಧ ಕಾಯ್ದೆ ಮೂಲಕ ಕಡಿವಾಣ ಹಾಕಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪರಿಷತ್ನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಹಳ ಸಂತೋಷದ ವಿಚಾರ ಇದು. ನಿನ್ನೆ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗಿದೆ. ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಬಿಲ್ ಪಾಸ್ ಆಗಿತ್ತು. ಪರಿಷತ್ನಲ್ಲಿ ಬಿಲ್ ಮಂಡನೆ ಆಗಿರಲಿಲ್ಲ. ಅದಕ್ಕಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಂದಿದ್ದೇವೆ. ಈಗ ಬಿಲ್ ಎರಡು ಸದನದಲ್ಲಿ ಪಾಸ್ ಆಗಿದೆ ಎಂದರು.
ಗೋ ಹತ್ಯೆ, ಮತಾಂತರ ಎರಡು ಅಂಗೀಕಾರ ಆಗಿದೆ. ವೈಯಕ್ತಿಕವಾಗಿ ಅತ್ಯಂತ ಸಂತೋಷವಾಗಿದೆ. ನಾನು ಗೃಹ ಸಚಿವನಾಗಿ ಬಿಲ್ ಮಂಡಿಸಿದ್ದು ಹೆಮ್ಮೆ ಆಗುತ್ತಿದೆ. ಹಿಂದೂ ಧರ್ಮದ ಬುಡ ಅಲ್ಲಾಡುತ್ತಿತ್ತು. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಹಿಂದಿನಿಂದ ಮಾಡುತ್ತಿದೆ. ಕಾಂಗ್ರೆಸ್ ಮುಖವಾಡ ಈಗ ಕಳಚಿದೆ ಎಂದು ಕಿಡಿಕಾರಿದರು.
(ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ: ಪ್ರತಿ ಹರಿದು ಕಾಂಗ್ರೆಸ್ - ಜೆಡಿಎಸ್ ಸಭಾತ್ಯಾಗ)