ETV Bharat / state

Chandrayana-3:  ಲ್ಯಾಂಡರ್​, ರೋವರ್​  ಹೇಗೆಲ್ಲ ಕಾರ್ಯನಿರ್ವಹಿಸುತ್ತವೆ ಗೊತ್ತಾ..?; ಗಿರೀಶ್​ ಲಿಂಗಣ್ಣ ಮಾತಲ್ಲಿ ಕೇಳಿ!

author img

By

Published : Jul 13, 2023, 7:11 PM IST

Updated : Jul 13, 2023, 11:07 PM IST

ಶುಕ್ರವಾರ ಮಧ್ಯಾಹ್ನ 2.35ರ ವೇಳೆಗೆ ಇಡೀ ದೇಶವೇ ಎದುರು ನೋಡುತ್ತಿರುವ ಚಂದ್ರಯಾನ 3 ಯೋಜನೆ ಉಡಾವಣೆಯಾಗಲಿದೆ.

Space and Defense Analyst Girish Linganna
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ
ಚಂದ್ರಯಾನ 3 ಬಗ್ಗೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾತು

ಬೆಂಗಳೂರು: ಚಂದ್ರಯಾನ 3 ಈ ಹಿಂದಿನ ಚಂದ್ರಯಾನ 2ರ ಮುಂದುವರಿದ ಯೋಜನೆಯಾಗಿದೆ. ಚಂದ್ರನ ಮೇಲ್ಮೈಯಲ್ಲಿ ರೋವರ್ ಇಳಿಸಿ, ಅಲ್ಲಿ ಹಿಂದೆಂದೂ ತಿಳಿದು ಬರದ ಬಾಹ್ಯಾಕಾಶದ ವಿವರಗಳನ್ನು ಕಲೆಹಾಕುವ ಉದ್ದೇಶ ಹೊಂದಿದೆ. ನಾಳೆ ಮಧ್ಯಾಹ್ನ 2.35 ರ ವೇಳೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್‌ವಿಎಂ3 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತಿದೆ ಎಂದು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ತಿಳಿಸಿದರು.

ಶುಕ್ರವಾರ ಇಸ್ರೋದ ಚಂದ್ರನ ಮೇಲ್ಮೈ, ಹವಾಮಾನ ಸೇರಿದಂತೆ ಚಂದ್ರನ ಕುರಿತು ಹೆಚ್ಚಿನ ಅನ್ವೇಷಣೆ ನಡೆಸುವ ಮತ್ತು ಭೂಮಿಯ ಹಲವು ಆಯಾಮಗಳನ್ನು ಅಲ್ಲಿಂದ ತಿಳಿಯುವ ಯೋಜನೆಯ ಮೂರನೆಯ ಭಾಗವಾಗಿ ಚಂದ್ರಯಾನ 3 ನಾಳೆ ಉಡಾವಣೆಗೊಳ್ಳಲಿದೆ. ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿರುವ ಗಿರೀಶ್ ಲಿಂಗಣ್ಣ, 3,900 ಕೆಜಿಯ ಸ್ಪೇಸ್ ಕ್ರಾಫ್ಟ್ ಉಡಾವಣೆ ಶ್ರೀಹರಿ ಕೋಟಾದಿಂದ ನಡೆಯಲಿದ್ದು, ಪ್ರೊಪಲ್ಷನ್ ಮಾಡ್ಯುಲ್ ಸ್ಪೇಸ್ ಕ್ರಾಫ್ಟ್ ಚಂದ್ರನೆಡೆಗೆ ತಲುಪುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಯೋಜನೆ ದೇಶೀಯವಾಗಿ ನಿರ್ಮಿಸಲಾದ ಲ್ಯಾಂಡರ್ ಮತ್ತು ರೋವರ್‌ಗಳನ್ನು ಒಳಗೊಂಡಿದೆ. ರೋವರ್ ಚಂದ್ರನ ಮೇಲ್ಮೈಯಲ್ಲಿ ಇಳಿಯುವುದಕ್ಕೆ ಲ್ಯಾಂಡರ್ ನ ಜವಾಬ್ದಾರಿಯಾಗಿದ್ದರೆ, ರೋವರ್ ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆ ನಡೆಸುವ ಜವಾಬ್ದಾರಿ ಹೊಂದಿದೆ ಎಂದು ಮಾಹಿತಿ ನೀಡಿದರು.

ಪ್ರೊಪಲ್ಷನ್ ಮಾಡ್ಯುಲ್ ಯೋಜನೆಯ ಮುಖ್ಯ ಅಂಶ: ಪ್ರೊಪಲ್ಷನ್ ಮಾಡ್ಯುಲ್ ಎನ್ನುವುದು ಚಂದ್ರಯಾನ 3 ಯೋಜನೆಯ ಮುಖ್ಯ ಭಾಗವಾಗಿದೆ. ಇದು ಲ್ಯಾಂಡರ್ ಮತ್ತು ರೋವರ್‌ಗಳನ್ನು 100 ಕಿಲೋಮೀಟರ್ ಚಂದ್ರನ ಕಕ್ಷೆಗೆ ಒಯ್ಯುವ ಜವಾಬ್ದಾರಿ ಹೊಂದಿದೆ. ಚಂದ್ರ ಭೂಮಿಯಿಂದ ಅಂದಾಜು 384,400 ಕಿಲೋಮೀಟರ್ ದೂರದಲ್ಲಿದ್ದಾನೆ. 100 ಕಿಲೋಮೀಟರ್‌ಗಳ ಅದರ ಕಕ್ಷೆ ತುಂಬಾ ಕೆಳಗಿನ ಕಕ್ಷೆಯಾಗಿದೆ. ಒಂದು ಬಾರಿ ಚಂದ್ರನ ಕಕ್ಷೆಯನ್ನು ತಲುಪಿದ ಬಳಿಕ, ಲ್ಯಾಂಡರ್ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟು, ಚಂದ್ರನ ಕಡೆಗೆ ಇಳಿಯತೊಡಗುತ್ತದೆ. ಬಳಿಕ ರೋವರ್ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ಆರಂಭಿಸುತ್ತದೆ. ಪ್ರೊಪಲ್ಷನ್ ಮಾಡ್ಯುಲ್ ಒಂದು ಮಹತ್ವದ ಅಂಗವಾಗಿದ್ದು, ಚಂದ್ರಯಾನ 3ರ ಯಶಸ್ಸಿಗೆ ಇದು ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಭೂಮಿಯ ವಾತಾವರಣ ಮತ್ತು ಮೇಲ್ಮೈ ಅಧ್ಯಯನ: ಚಂದ್ರಯಾನ 3ರ ಪ್ರೊಪಲ್ಷನ್ ಮಾಡ್ಯುಲ್ ಸ್ಪೆಕ್ಟ್ರೋ - ಪೋಲಾರಿಮೆಟ್ರಿ ಆಫ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ತ್ ಎಂಬ ಪೇಲೋಡ್ ಹೊಂದಿದೆ. ಇದು ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿಮೆಟ್ರಿಕ್ ಅಳತೆಯನ್ನು ಅಧ್ಯಯನ ನಡೆಸಲಿದೆ. ಸ್ಪೆಕ್ಟ್ರಲ್ ಅಳತೆಗಳು ಯಾವುದೇ ಮೂಲದಿಂದ, ಬೇರೆ ಬೇರೆ ತರಂಗಾಂತರಗಳಲ್ಲಿ ಎಷ್ಟು ಬೆಳಕು ಬರುತ್ತದೆ ಎಂಬುದನ್ನು ತಿಳಿಸಿದರೆ, ಪೋಲಾರಿಮೆಟ್ರಿಕ್ ಅಳತೆಗಳು ಬೆಳಕಿನ ಅಲೆಗಳ ದಿಕ್ಕನ್ನು ವಿವರಿಸುತ್ತವೆ. ಈ ಅಳತೆಗಳು ಚಂದ್ರನ ಕಕ್ಷೆಯಿಂದ ಭೂಮಿಯ ವಾತಾವರಣ ಮತ್ತು ಮೇಲ್ಮೈಯನ್ನು ಅಧ್ಯಯನ ನಡೆಸುತ್ತವೆ ಎಂದು ಹೇಳಿದರು.

ಚಂದ್ರಯಾನ 2 ಯೋಜನೆಗಾಗಿದ್ದ ಹಿನ್ನಡೆ: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲು ವಿಫಲವಾದ್ದರಿಂದ ಚಂದ್ರಯಾನ 2 ಯೋಜನೆಗೆ ಹಿನ್ನಡೆಯಾಯಿತು ಆದರೆ, ಇಸ್ರೋ ಈ ಹಿನ್ನಡೆಯಿಂದ ಪಾಠ ಕಲಿತಿದ್ದು, ಚಂದ್ರಯಾನ 3 ಯೋಜನೆ ಯಶಸ್ವಿಯಾಗಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Chandrayaan 3: ಬಾಹುಬಲಿ ರಾಕೆಟ್​ ಉಡಾವಣೆ ವೀಕ್ಷಿಸಲು ಶ್ರೀಹರಿಕೋಟಾಗೆ ಹಾರಿದ ಶಾಲಾ ಮಕ್ಕಳು!

Last Updated : Jul 13, 2023, 11:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.