ETV Bharat / state

ಬೀಗ ಹಾಕಿರುವ ಮನೆಗಳೇ ಈತನ ಟಾರ್ಗೆಟ್​.. ಕದ್ದ ಆಭರಣಗಳನ್ನ ಅಟ್ಟಿಕಾ ಗೋಲ್ಡ್​ನಲ್ಲಿ ಸೇಲ್ ಮಾಡ್ತಿದ್ದ ಖದೀಮ..

author img

By

Published : Aug 21, 2019, 7:09 PM IST

ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿ ಹಾಗೂ ಕದ್ದ ವಸ್ತುಗಳನ್ನ ಪಡೆಯುತ್ತಿದ್ದ ಅಟ್ಟಿಕಾ ಗೋಲ್ಡ್​ ಬ್ರಾಂಚ್​ನ ಮ್ಯಾನೇಜರ್​ನನ್ನ ಬಂಧಿಸುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೀಗ ಹಾಕಿರುವ ಮನೆಗಳೇ ಈತನ ಟಾರ್ಗೆಟ್​...ಕದ್ದ ವಸ್ತುಗಳನ್ನ ಅಟ್ಟಿಕಾ ಗೋಲ್ಡ್​ನಲ್ಲಿ ಮಾರಾಟ

ಬೆಂಗಳೂರು: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿ ಹಾಗೂ ಕದ್ದ ಆಭರಣಗಳನ್ನ ಪಡೆಯುತ್ತಿದ್ದ ಅಟ್ಟಿಕಾ ಗೋಲ್ಡ್​ ಬ್ರಾಂಚ್​ನ ಮ್ಯಾನೇಜರ್​ನನ್ನ ಬಂಧಿಸುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್‌ ಡಿ ಯೋಗೀಶ್ ಅಲಿಯಾಸ್ ಮೈಲಾರಿ, ದೇವೇಂದ್ರ ಅಲಿಯಾಸ್​ ಬಾಬು ಬಂಧಿತರು. ದಾಸರಳ್ಳಿ ಬಳಿಯ ನಿವಾಸಿ ಆದಿನಾರಾಯಣ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯಲ್ಲಿನ ಮೈಲಾರ ದೇವಸ್ಥಾನಕ್ಕೆ ತೆರಳಿದ್ರು. ಇದನ್ನು ಟಾರ್ಗೆಟ್ ಮಾಡಿದ ಯೋಗೀಶ್ ಮನೆಯಲ್ಲಿರುವ ಸುಮಾರು 45 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

ಇನ್ನು, ಪೊಲೀಸರು ಆರೋಪಿ ಯೋಗೀಶ್‌ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಕದ್ದ ಆಭರಣಗಳನ್ನ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಬ್ರಾಂಚ್​ನಲ್ಲಿ ಮಾರಾಟ ಮಾಡಿರುವ ವಿಚಾರವನ್ನ ತಿಳಿಸಿದ್ದ. ಹೀಗಾಗಿ ಪೊಲೀಸರು ಅಟ್ಟಿಕಾ ಗೋಲ್ಡ್​ ಬ್ರಾಂಚ್​ನ ಮ್ಯಾನೇಜರ್‌ ದೇವೇಂದ್ರ ಅಲಿಯಾಸ್ ಬಾಬು ಎಂಬಾತನನ್ನ ಬಂಧಿಸಿದ್ದಾರೆ. ಈತ ಎಷ್ಟೇ ಕದ್ದ ಮಾಲುಗಳಿದ್ದರೂ ಅದನ್ನ ತನಗೆ ಮಾರಾಟ ಮಾಡುವಂತೆ ಯೋಗೀಶ್​ಗೆ ತಿಳಿಸಿದ್ದನಂತೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು,ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನವರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ 39.10 ಲಕ್ಷ ರೂ. ಬೆಲೆ ಬಾಳುವ 1 ಕೆಜಿ 13ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಸಾಮಾನು, 2 ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದ್ದು, ಬಂಧಿತ ಯೋಗೀಶ್​ ವಿರುದ್ಧ ಬಾಗಲಗುಂಟೆಯಲ್ಲಿ 7,ಪೀಣ್ಯದಲ್ಲಿ 7,ಸೋಲದೇವನಹಳ್ಳಿಯಲ್ಲಿ 1 ಪ್ರಕರಣಗಳಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಮನೆಗೆ ಬೀಗ ಹಾಕಿರುವುದನ್ನೆ ಟಾರ್ಗೇಟ್ ಮಾಡ್ತಿದ್ದ
ಕದ್ದ ಮಾಲುಗಳನ್ನ ಅಟ್ಟಿಕಾ ಗೋಲ್ಡ್ ನಲ್ಲಿ ಮಾರಟ ಮಾಡ್ತಿದ್ದ ಆರೋಪಿ ಅಂದರ್

ಮನೆಗೆ ಬೀಗ ಹಾಕಿ ಕೊಂಡು ಹೊಗ್ತಿದ್ದ ಮನೆಯನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಬಂಧನ‌ಮಾಡುವಲ್ಲಿ ಉತ್ತರ ವಿಭಾಗದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಯೋಗೀಶ್ ಹೆಚ್ .ಡಿ ಅಲಿಯಾಸ್ ಮೈಲಾರಿ, ದೇವೇಂದ್ರ ಬಾಬು ದೇವರಾಜ ಬಂಧಿತ ಆರೋಪಿಗಳು..

ದಾಸರ ಹಳ್ಳಿ ಬಳಿಯ ನಿವಾಸಿ ಆದಿನಾರಯಣ ಎಂಬುವವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯಲ್ಲಿನ ಮೈಲಾರ ದೇವಸ್ಥಾನಕ್ಕೆ ತೆರಳಿದ್ರು. ಇದನ್ನು ಟಾರ್ಗೇಟ್ ಮಾಡಿದ ಯೋಗೀಶ್ ಮನೆಯಲ್ಲಿರುವ ಸುಮಾರು 45 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ್ದ .ಹೀಗಾಗಿ ಬಾಗಲಗುಂಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸದ್ಯ ಆರೋಪಿಯನ್ನ ತನಿಖೆ ನಡೆಸಿ ಬಂಧಿಸಿದ್ದಾರೆ..

ತನಿಖೆಯಲ್ಲಿ ರೋಚಕ ಕಹಾನಿ ಬೆಳಕಿಗೆ

ಇನ್ನು ಪೊಲೀಸರು ಆರೋಪಿ ಯೋಗಿಶ್ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಕದ್ದ ಮಾಲನ್ನ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಬ್ರಾಂಚ್ಗೆ ಮಾರಟ ಮಾಡಿರುವ ವಿಚಾರವನ್ನ ತಿಳಿಸಿದ್ದ.. ಹೀಗಾಗಿ ಪೊಲೀಸರು ಅಟ್ಟಿಕಾ ಗೋಲ್ಟ್ ಬ್ರಾಂಚ್ನ ಮ್ಯಾನೇಜರ್ ದೇವೇಂದ್ರ ಅಲಿಯಾಸ್ ಬಾಬು ಅವರನ್ನ. ಅಂದರ್ ಮಾಡಿದ್ದಾರೆ‌. ಇನ್ನು ಆರೋಪಿ ಯೋಗೀಶ್ ಕದ್ದ ಮಾಲುಗಳನ್ನ ಈ ಮ್ಯಾನೇಜರ್ ದೇವೆಂದ್ರ ಬಾಬು ಅವನಿಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಈ ವೇಳೆ ಮ್ಯಾನೇಜರ್ ಎಷ್ಟೇ ಕದ್ದ ಮಾಲುಗಳು ಇದ್ದಾರೆ ತಂದು ಮಾರಟ ಮಾಡುವಂತೆ ತಿಳಿಸಿದ್ದಾನೆ. ಹೀಗಾಗಿ ಸಧ್ಯ ಇಬ್ಬರು ಆರೋಪಿಗಳನ್ನ ಬಂಧಿಸಿ ಇದ್ರಲ್ಲಿ ಇನ್ನು ಹೆಚ್ಚಿನ ಮಂದಿ ಭಾಗಿಯಾಗಿದ್ದಾರ ಅನ್ನೋದ್ರ ಬಗ್ಗೆ ತನಿಕೆ ಮುಂದುವರೆದಿದೆ.

ಇನ್ನು ಬಂಧಿತ ಆರೋಪಿಗಳಿಂದ 39.10ಲಕ್ಷ ರೂ ಬೆಲೆ ಬಾಳುವ 1.ಕೆ ಜಿ .13ಗ್ರಾಂ ಚಿನ್ನಾಭರಣ,250ಗ್ರಾಂ ಬೆಳ್ಳಿ ಸಾಮಾನು, 2ದ್ವಿಚಕ್ರವಾಹನ ವಶಪಡಿಸಿ ಬಂಧಿತ ಯೋಗಿಶ್ ನಿಂದ ಬಾಗಲಗುಂಟೆ7,ಪೀಣ್ಯ_7,ಸೋಲದೇವನಹಳ್ಳಿ ೧ಪ್ರಕರಣ ಪತ್ತೆ ಮಾಡಿ ತನಿಖೆ ಮುಂದುವರೆಸಿದ್ದಾರೆBody:KN_BNG_05_ATTIKA_HOME_THEFT_7204498Conclusion:KN_BNG_05_ATTIKA_HOME_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.