ETV Bharat / state

ಹಿಜಾಬ್ ನಿರ್ಬಂಧ ವಿದ್ಯಾರ್ಥಿಗಳಿಗಷ್ಟೇ ಶಿಕ್ಷಕರಿಗಲ್ಲ: ಫೆ.10ರ ಆದೇಶಕ್ಕೆ ಸ್ಪಷ್ಟನೆ ನೀಡಿದ ಕೋರ್ಟ್ - ಹಿಜಾಬ್ ನಿರ್ಬಂಧ ವಿದ್ಯಾರ್ಥಿಗಳಿಗಷ್ಟೇ, ಶಿಕ್ಷಕರಿಗಲ್ಲ ಎಂದ ಹೈಕೋರ್ಟ್​

ಫೆಬ್ರವರಿ 10ರಂದು ನೀಡಿದ್ದ ಆದೇಶಕ್ಕೆ ಹೈಕೋರ್ಟ್​ ಸ್ಪಷ್ಟನೆ ನೀಡಿದ್ದು, ಆದೇಶ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆಯೇ ಹೊರತು ಶಿಕ್ಷಕರಿಗಲ್ಲ ಎಂದಿದೆ.

Hijab restriction is for students, not teachers clarified by Highcourt
ಹಿಜಾಬ್ ನಿರ್ಬಂಧ ವಿದ್ಯಾರ್ಥಿಗಳಿಗಷ್ಟೇ, ಶಿಕ್ಷಕರಿಗಲ್ಲ ಎಂದ ಹೈಕೋರ್ಟ್
author img

By

Published : Feb 23, 2022, 9:33 PM IST

ಬೆಂಗಳೂರು: ಹಿಜಾಬ್ ಸೇರಿದಂತೆ ಧಾರ್ಮಿಕ ಸಂಕೇತದ ವಸ್ತ್ರಗಳನ್ನು ಪ್ರಕರಣ ಇತ್ಯರ್ಥವಾಗುವವರೆಗೆ ಕಾಲೇಜಿಗೆ ಧರಿಸಿ ಹೋಗದಂತೆ ನೀಡಿರುವ ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆಯೇ ಹೊರತು ಶಿಕ್ಷಕರಿಗಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಸ್ಪಷ್ಟಪಡಿಸಿದೆ.

ಈ ಕುರಿತಂತೆ ಅರ್ಜಿದಾರರ ಪರ ವಕೀಲ ತಾಹಿರ್ ವಿಚಾರಣೆಯ ಕೊನೆಯಲ್ಲಿ ಪ್ರಸ್ತಾಪಿಸಿ, ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಧಾರ್ಮಿಕ ಸಂಕೇತದ ಉಡುಪುಗಳನ್ನು ಸಮವಸ್ತ್ರ ನಿಗದಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧರಿಸಿ ಹೋಗುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಈ ಆದೇಶವನ್ನು ಎಲ್ಲ ಶಿಕ್ಷಣ ಸಂಸ್ಥೆಗಳೂ ಸಾಮಾನ್ಯವಾಗಿ ಅನುಸರಿಸುತ್ತಿವೆ. ಸಮವಸ್ತ್ರ ನಿಗದಿ ಮಾಡದ ಶಿಕ್ಷಣ ಸಂಸ್ಥೆಗಳಲ್ಲೂ ಕಡ್ಡಾಯ ಮಾಡಿವೆ. ಶಿಕ್ಷಕಿಯರಿಗೂ ಇದೇ ನಿರ್ಬಂಧ ಹೇರಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಮ್ಮ ಆದೇಶ ಸ್ಪಷ್ಟವಾಗಿದೆ. ಸಮವಸ್ತ್ರ ನಿಗದಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರಗಳನ್ನು ಧರಿಸದಂತೆ ಹೇಳಲಾಗಿದೆ. ಈ ಆದೇಶ ಶಿಕ್ಷಕಿಯರಿಗೆ ಅನ್ವಯಿಸದು ಎಂದು ಮೌಖಿಕವಾಗಿ ತಿಳಿಸಿತು.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿ ಮಾಡಲು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು 9ನೇ ದಿನವೂ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣ ಪೀಠ ವಿಚಾರಣೆ ನಡೆಸಿತು.

ಕಾಲೇಜು ಪರ ವಾದ: ವಿಚಾರಣೆ ವೇಳೆ ಕಾಲೇಜು ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್, 2004ರಿಂದಲೂ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಇದೆ. ವಿದ್ಯಾರ್ಥಿನಿಯರು ಎಲ್ಲಾ ಸಂದರ್ಭದಲ್ಲೂ ಹಿಜಾಬ್ ಧರಿಸುತ್ತಿರಲಿಲ್ಲ. ವಿದ್ಯಾರ್ಥಿನಿಯರ ಆಧಾರ್ ಕಾರ್ಡ್ ಸೇರಿದಂತೆ ಹಲವು ಫೋಟೋಗಳಲ್ಲಿ ಹಿಜಾಬ್ ಧರಿಸಿಲ್ಲ. ಇತ್ತೀಚೆಗೆ ಈ ವಿವಾದ ಸೃಷ್ಟಿಸಿದ್ದಾರೆ. ಜೊತೆಗೆ ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವಿರುದ್ಧ ಇಲ್ಲ ಸಲ್ಲದ ಕಿರುಕುಳು ಆರೋಪಗಳನ್ನು ಮಾಡಿದ್ದಾರೆ. ಅವೆಲ್ಲವೂ ಸತ್ಯಕ್ಕೆ ದೂರ.

ಇನ್ನು ವಿದ್ಯಾರ್ಥಿನಿಯರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹಾದಿ ತಪ್ಪಿಸಿದೆ. ಕಾಲೇಜಿಗೂ, ವಿದ್ಯಾರ್ಥಿನಿಯರಿಗೂ ಸಂಬಂಧವಿಲ್ಲ. ಸಂಘಟನೆ ಹಿಜಾಬ್ ಧರಿಸಲು ಸಮ್ಮತಿಸುವಂತೆ ಕಾಲೇಜಿಗೆ ಬಂದು ಒತ್ತಡ ಹೇರಿದೆ. ಬಳಿಕ ಪ್ರತಿಭಟನೆ ನಡೆಸುವುದಾಗಿ ಬೆದರಿಸಿದೆ. ಈಗಲೂ ಇದೇ ಸಂಘಟನೆ ಹಿಜಾಬ್ ಹೆಸರಿನಲ್ಲಿ ಗದ್ದಲ ಸೃಷ್ಟಿಸುತ್ತಿದೆ. ಸಿಎಫ್ಐ ಸಂಘಟನೆ ಶಿಕ್ಷಕರಿಗೂ ಬೆದರಿಕೆ ಹಾಕಿದೆ. ಶಿಕ್ಷಕರು ಇದೀಗ ಸಂಘಟನೆ ವಿರುದ್ಧ ದೂರು ದಾಖಲಿಸಿರುವ ಮಾಹಿತಿ ತಿಳಿದು ಬಂದಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಸಂಘಟನೆ ಯಾರು, ಏನು ಎಂಬ ಬಗ್ಗೆ ಮಾಹಿತಿ ನೀಡಿ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಸರ್ಕಾರದ ಬಳಿ ಮಾಹಿತಿ ಇದೆ. ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಲಾಗುವುದು ಎಂದರು. ಇದೇ ವೇಳೆ, ವಿದ್ಯಾರ್ಥಿನಿಯರ ಪರ ವಕೀಲ ತಾಹಿರ್ ವಾದಿಸಿ, ಸಿಎಫ್ಐ ವಿದ್ಯಾರ್ಥಿ ಸಂಘಟನೆ. ಕೆಲ ಶಾಸಕರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದಾರೆ ಎಂದು ಆರೋಪಿಸಿದರು. ಪೀಠ ಇವೆಲ್ಲವನ್ನೂ ಪರಿಶೀಲಿಸುವುದಾಗಿ ತಿಳಿಸಿತು.

ಮತ್ತೆ ವಾದ ಮುಂದುವರೆಸಿದ ಹಿರಿಯ ವಕೀಲ ಎಸ್.ಎಸ್ ನಾಗಾನಂದ್, ಅರ್ಜಿದಾರ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರು ನಿಂದಿಸಿದರು, ಗದರಿಸಿದರು ಎಂಬೆಲ್ಲಾ ಆರೋಪಗಳನ್ನು ಮಾಡಿದ್ದಾರೆ. ಇವೆಲ್ಲವೂ ಸುಳ್ಳು. ಹೆತ್ತವರು ತಮ್ಮ ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯಲಿ ಎಂಬ ಕಾರಣಕ್ಕೆ ಗದರುತ್ತಾರೆ. ಕೆಲವೊಮ್ಮೆ ಶಿಕ್ಷಿಸುತ್ತಾರೆ. ಅದನ್ನು ಅಪರಾಧ ಎಂದು ಪರಿಗಣಿಲಾಗದು. ಇದೇ ರೀತಿಯಲ್ಲಿ ಶಿಕ್ಷಕರು ಅಶಿಸ್ತು ತೋರಿಸುವ ವಿದ್ಯಾರ್ಥಿಗಳನ್ನು ಗದರಿದರೆ ಅದು ಹೇಗೆ ತಪ್ಪಾಗುತ್ತದೆ ಎಂದರು.

ಬ್ರಾಹ್ಮಣ ಸಮುದಾಯದಲ್ಲಿ ಕೆಲವು ಕಟ್ಟಾ ಸಂಪ್ರದಾಯಸ್ಥರು ಹೊಲಿಗೆ ಹಾಕಿದ ವಸ್ತ್ರಗಳನ್ನು ಧರಿಸುವುದಿಲ್ಲ. ಅಂಗವಸ್ತ್ರ ಹಾಗೂ ಧೋತಿ ಧರಿಸುತ್ತಾರೆ. ಇಂತಹ ಪೋಷಕರ ಮಕ್ಕಳು ಧಾರ್ಮಿಕ ಆಚರಣೆ ಹೆಸರಲ್ಲಿ ಶಾಲೆಗೆ ಅಂಗವಸ್ತ್ರ-ಧೋತಿ ಧರಿಸಿ ಬಂದರೆ ಹೇಗಿರುತ್ತದೆ. ಎಲ್ಲ ಮಕ್ಕಳೂ ಧರ್ಮದ ಹೆಸರಲ್ಲಿ ಅವರಿಷ್ಟದ ಉಪುಡು ಧರಿಸಿ ಬರಲು ಮುಂದಾದರೆ ಸಮವಸ್ತ್ರ ಎಂಬುದಕ್ಕೆ ಅರ್ಥ ಎಲ್ಲಿದೆ. ಉಡುಪಿಯಲ್ಲಿ ಮುಸಲ್ಮಾನರು ಹಿಂದೂಗಳ ನಡುವಿನ ಭ್ರಾತೃತ್ವ ಅತ್ಯುತ್ತಮವಾಗಿದೆ. ಆದರೆ ಕೆಲ ಹಿತಾಸಕ್ತಿಗಳು ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ಮಾಡುತ್ತಿವೆ ಎಂದು ವಿವರಿಸಿದರು.

ಸಿಡಿಸಿ ಪರ ವಾದ: ಶಾಸಕರು ಸಿಡಿಸಿಗಳಲ್ಲಿರುವ ಕ್ರಮ ಸರಿಯಲ್ಲ ಎಂದಿದ್ದಾರೆ. ಆದರೆ, ಕಾಲೇಜು ಅಭಿವೃದ್ಧಿ ಸಮಿತಿಗೂ ಬೈ-ಲಾ ಇದೆ. ಆ ಪ್ರಕಾರವೇ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಶಾಸಕರೊಬ್ಬರೇ ಅಲ್ಲಿರುವುದಿಲ್ಲ. ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ 100 ಮುಸ್ಲಿಂ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಇವರಲ್ಲಿ 5 ಮಂದಿ ಮಾತ್ರ ಹಿಜಾಬ್​ಗೆ ಒತ್ತಾಯಿಸುತ್ತಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ಶಿಸ್ತು, ಸುವ್ಯವಸ್ಥೆ ತರಲು ಸಮವಸ್ತ್ರ ನಿಗದಿ ಮಾಡಲಾಗಿದೆ.

ಎಲ್ಲ ಮಕ್ಕಳು ಅವರವರ ಧರ್ಮದ ಆಧಾರದಲ್ಲಿ ಉಡುಪು ಧರಿಸಿ ಬರಲು ಸಾಧ್ಯವಿಲ್ಲ. ಸಮವಸ್ತ್ರವನ್ನು ಪ್ರಶ್ನಿಸಿರುವ ಅರ್ಜಿದಾರರ ಕ್ರಮವೇ ಸರಿಯಿಲ್ಲ. ಜಾತ್ಯತೀತ ಶಿಕ್ಷಣ ನೀಡಬೇಕು ಎಂದಾದರೆ ಸಮವಸ್ತ್ರ ಬೇಕಾಗುತ್ತದೆ. ಬಡವರಿರಲಿ, ಶ್ರೀಮಂತರಿರಲಿ ಅಥವಾ ಯಾವುದೇ ಧರ್ಮದವರಿರಲಿ ಎಲ್ಲಾ ವಿದ್ಯಾರ್ಥಿಗಳೂ ಸಮಾನರು ಎಂಬ ಕಾರಣಕ್ಕೆ ಸಮವಸ್ತ್ರ ತರಲಾಗಿದೆ. ಶೈಕ್ಷಣಿಕ ವಾತಾವರಣದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂದರು.

ಹಿಜಾಬ್ ಧರಿಸುವುದಕ್ಕೆ ಸಮ್ಮತಿಸಲು ಮನವಿ: ಮಧ್ಯಾಹ್ನದ ವಿಚಾರಣೆ ಆರಂಭವಾಗುತ್ತಲೇ ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ತಾಹಿರ್ ಪೀಠಕ್ಕೆ ಮನವಿ ಮಾಡಿ, ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆಗಳು ಆರಂಭವಾಗಿವೆ. ಆದರೆ, ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಗಳು ಅನುಮತಿಸುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿನಿಯರಿಗೆ ಹಿಜಾಬ್ ಅಥವಾ ದುಪ್ಪಟ್ಟಾ ಧರಿಸಿ ವಿದ್ಯಾರ್ಥಿನಿಯರು ಶಾಲೆ-ಕಾಲೇಜಿಗೆ ಹೋಗಲು ಅನುಮತಿ ನೀಡಬೇಕು ಎಂದು ಕೋರಿದರು. ಈ ಮನವಿ ಪರಿಗಣಿಸಲು ಪೀಠ ನಿರಾಕರಿಸಿತು.

ಮಧ್ಯಂತರ ಅರ್ಜಿದಾರರಿಗೆ ವಾದ ಮಂಡನೆಗೆ ಅವಕಾಶವಿಲ್ಲ: ವಿಚಾರಣೆಯ ಕೊನೆಯಲ್ಲಿ ಮಧ್ಯಂತರ ಅರ್ಜಿದಾರರ ಪರ ವಕೀಲರೊಬ್ಬರು ತಮ್ಮ ವಾದ ಮಂಡನೆಗೂ ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಧ್ಯಂತರ ಅರ್ಜಿದಾರರೆಲ್ಲರ ವಾದ ಆಲಿಸಬೇಕೆಂದರೆ ಇದೇ ಪ್ರಕರಣವನ್ನು ಇಡೀ ತಿಂಗಳು ವಿಚಾರಣೆ ನಡೆಸಬೇಕಾಗುತ್ತದೆ. ಹೀಗಾಗಿ, ಯಾರೆಲ್ಲಾ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಿರೋ ಅವರು ತಮ್ಮ ವಾದ ಮಂಡನೆಯನ್ನು ಲಿಖಿತವಾಗಿ ಸಲ್ಲಿಸಿ. ಅವುಗಳನ್ನು ನಾವು ಪರಿಗಣಿಸುತ್ತೇವೆ ಎಂದು ಸ್ಪಷ್ಟಪಡಿಸಿತು.

ವಿಚಾರಣೆಯ ಆರಂಭದಲ್ಲಿ ಮಾಧ್ಯಮಗಳ ವರದಿ ಕುರಿತು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಕೆಲವು ಮಾಧ್ಯಮಗಳು ಈ ವಾರವೇ ಹೈಕೋರ್ಟ್ ತೀರ್ಪು ನೀಡಲಿದೆ ಎಂದು ತಪ್ಪಾಗಿ ವರದಿ ಮಾಡಿವೆ. ಶೀಘ್ರವಾಗಿ ವಿಚಾರಣೆ ಪೂರ್ಣಗೊಳಿಸೋಣ ಎಂಬುದನ್ನೇ ತಪ್ಪಾಗಿ ಹೇಳಿವೆ. ಇನ್ನೂ ವಿಚಾರಣೆಯೇ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ : ಮತ್ತಿಬ್ಬರು ಆರೋಪಿಗಳು ಅರೆಸ್ಟ್​, ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.