ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವರನ್ನು ಕನಕಪುರದ ಸ್ವಗೃಹದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ.
ಕನಕಪುರದ ಸ್ವಗೃಹದಲ್ಲೇ ಗೌರಮ್ಮ ಅವರನ್ನು ಕನ್ನಡದಲ್ಲೇ ವಿಚಾರಣೆ ನಡೆಸಬೇಕು. ಈ ವೇಳೆ ವಿಚಾರಣೆಯ ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಬೇಕು. ಇಡಿ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಲು ರಾಮನಗರ ಎಸ್ಪಿಗೆ ಸೂಚನೆ ನೀಡುವುದರ ಜೊತೆಗೆ ವಿಚಾರಣೆಗೆ ಯಾರು ಅಡ್ಡಿಪಡಿಸುವಂತಿಲ್ಲ. ಯಾವುದೇ ಪ್ರತಿಭಟನೆ ಇತ್ಯಾದಿ ನಡೆಸುವಂತಿಲ್ಲ ಎಂದು ನ್ಯಾ. ನರೇಂದರ್ ಆದೇಶಿಸಿದ್ದಾರೆ.