ETV Bharat / state

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅಕ್ರಮ ಮಳಿಗೆ ತೆರವು ಪ್ರಕರಣ: ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್ - ತುಷಾರ್ ಗಿರಿನಾಥ್

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್​ ಜಾರಿಗೊಳಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By ETV Bharat Karnataka Team

Published : Oct 26, 2023, 10:55 PM IST

ಬೆಂಗಳೂರು: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್​ನ ಮೇಲಿನ ನೆಲಮಾಳಿಗೆಯಲ್ಲಿನ ಅಕ್ರಮ ಅಂಗಡಿಗಳನ್ನು ಮೂರು ವರ್ಷದೊಳಗೆ ತೆಗೆದುಹಾಕುವ ಕುರಿತು 2020ರ ಆದೇಶವನ್ನು ಅನುಸರಿಸಲು ವಿಫಲವಾದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ವಾಹನ ನಿಲುಗಡೆಗೆ ಉದ್ದೇಶಿಸಲಾಗಿದ್ದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನ ಪುನರ್‌ನಿರ್ಮಿಸಲಾದ ಬ್ಲಾಕ್‌ 1 ರ ಮೇಲಿನ ನೆಲಮಾಳಿಗೆಯಿಂದ ಅಂಗಡಿಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡುವ ಮೂಲಕ ಕಟ್ಟಡ ಕಾನೂನು ಉಲ್ಲಂಘಿಸಿದೆ ಎಂದು ಆರೋಪಿಸಿ ವಕೀಲ ಆರ್‌.ಆರ್‌ ಹಿರೇಮಠ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿ ವಿಚಾರಣೆ ವೇಳೆ ಹಳೆಯ ಪರವಾನಗಿದಾರರಿಗೆ ಸ್ಥಳಾವಕಾಶ ಕಲ್ಪಿಸಲು ಮೇಲಿನ ನೆಲಮಾಳಿಗೆಯನ್ನು ತಾತ್ಕಾಲಿಕವಾಗಿ ಬಳಸಲಾಗುತ್ತಿದೆ ಮತ್ತು ಮೂರು ವರ್ಷಗಳಲ್ಲಿ ಬ್ಲಾಕ್ 2, 3 ಮತ್ತು 4 ಅನ್ನು ನಿರ್ಮಿಸಿದ ನಂತರ ಅದನ್ನು ಪಾರ್ಕಿಂಗ್ ಸ್ಥಳವಾಗಿ ಬಳಸಲಾಗುವುದು ಎಂದು ಬಿಬಿಎಂಪಿ ಹೈಕೋರ್ಟ್ ಗೆ ತಿಳಿಸಿತ್ತು. ಆದರೆ ಇತರ ಬ್ಲಾಕ್‌ಗಳನ್ನು ನಿರ್ಮಿಸಲು ಮತ್ತು ಮೇಲಿನ ಬೇಸ್‌ಮೆಂಟ್‌ನ ಪಾರ್ಕಿಂಗ್ ಫ್ಲೋರ್‌ನಿಂದ ಅಕ್ರಮ ಅಂಗಡಿಗಳನ್ನು ತೆಗೆದುಹಾಕಲು ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿದ ಅರ್ಜಿದಾರರಾದ ಆರ್.ಆರ್.ಹಿರೇಮಠ್ ಪರ, ವಕೀಲರಾದ ಜಿ.ಆರ್.ಮೋಹನ್, ಹೈಕೋರ್ಟ್ ಆದೇಶ ಪಾಲಿಸದ ಬಿಬಿಎಂಪಿ ನ್ಯಾಯಾಂಗ ನಿಂದನೆ ಎಸಗಿದೆ. ಹಾಗಾಗಿ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಕರಣ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ: ಸುಳ್ಳು ಎಸ್ಸಿ/ಎಸ್ಟಿ ದೌರ್ಜನ್ಯ ಕೇಸ್​: ದೂರುದಾರರಿಂದ ಹಣ ವಸೂಲಿಗೆ ಆದೇಶಿಸಿದ ಹೈಕೋರ್ಟ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.