ETV Bharat / state

ಸ್ವಾಮೀಜಿಗಳು ನ್ಯಾಯಾಲಯಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದರೆ ನ್ಯಾಯಮೂರ್ತಿಗಳು ಏನು ಮಾಡಬೇಕು?: ಹೈಕೋರ್ಟ್

ರಾಮಲಿಂಗೇಶ್ವರ ಮಠದ ಪೀಠಾಧಿಪತಿ ನೀಲಕಂಠ ಸಾರಂಗ ದೇಶಿಕೇಂದ್ರ ಮಹಾಸ್ವಾಮೀಜಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು.

high-court-hearing-on-contempt-of-court-application
ಸ್ವಾಮೀಜಿಗಳು ನ್ಯಾಯಾಲಯಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದರೆ ನ್ಯಾಯಮೂರ್ತಿಗಳು ಏನು ಮಾಡಬೇಕು? : ಹೈಕೋರ್ಟ್ ಪ್ರಶ್ನೆ
author img

By ETV Bharat Karnataka Team

Published : Dec 20, 2023, 10:24 PM IST

ಬೆಂಗಳೂರು: ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದ್ದ ಸ್ವಾಮೀಜಿಯೊಬ್ಬರನ್ನು ತೀವ್ರ ತರಾಟೆಗೆ ಗುರಿಪಡಿಸಿರುವ ಹೈಕೋರ್ಟ್, ನಿಮ್ಮಂಥ ತ್ರಿಕಾಲ ಜ್ಞಾನಿ ಸ್ವಾಮೀಜಿಗಳು ಹೀಗೆ ಮಾಡಿದರೆ ಸಂಸ್ಥೆ (ನ್ಯಾಯಾಲಯ) ಎಲ್ಲಿಗೆ ಹೋಗಬೇಕು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ, ಸ್ವಾಮೀಜಿಗಳು ಬೇಷರತ್​ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಪೀಠ ಕೈಬಿಟ್ಟಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ನೀಲಕಂಠ ಸಾರಂಗ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್​. ದೀಕ್ಷಿತ್, ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಸಾಮಾನ್ಯ ಮನುಷ್ಯ ಮಾಡಿದ್ದರೆ ಅದನ್ನು ನಾವು ಅರ್ಥ ಮಾಡಿಕೊಳ್ಳುತ್ತಿದ್ದೆವು. ನೀವೆಲ್ಲಾ (ಅರ್ಜಿದಾರರು) ತ್ರಿಕಾಲ ಜ್ಞಾನಿಗಳು, ಇಂಥ ತ್ರಿಕಾಲ ಸ್ವಾಮೀಜಿಗಳು ಈ ರೀತಿ ಮಾಡಿದರೆ ಸಂಸ್ಥೆ ಎಲ್ಲಿಗೆ ಹೋಗಬೇಕು? ಮುಂದಿನ ಜನಾಂಗಕ್ಕಾಗಿ ಈ ಸಂಸ್ಥೆ ರಕ್ಷಿಸಬೇಕು ಅಲ್ಲವೇ ಎಂದು ಪ್ರಶ್ನಿಸಿದರು.

ಹಿಂದೂ ಧರ್ಮ, ಇತ್ಯಾದಿ ನಂಬಿಕೆಗಳನ್ನು ಪಾಲಿಸುವಲ್ಲಿ ನೀವು ತುಂಬಾ ಬ್ಯುಸಿ ಇರುತ್ತೀರಿ. ಹಿಂದೂ ಧರ್ಮವು ರಾಜಾ ಪ್ರತ್ಯಕ್ಷ ದೇವತಃ ಎಂದು ಬೋಧಿಸುತ್ತದೆ. ನ್ಯಾಯಾಧೀಶ ಪ್ರತ್ಯಕ್ಷ ದೇವತಾಃ ಎಂದು ಹೇಳುತ್ತದೆ. ಅವರು ಹಿಂದೂ ಧರ್ಮದ ಭಾಗವಲ್ಲವೇ? ನೀವು ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳನ್ನು ಹೀಗಳೆದರೆ ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು? ಮೊದಲಿಗೆ ಹೀಗಳೆಯುತ್ತೀರಿ. ಆಮೇಲೆ ಬಂದು ಕ್ಷಮೆ ಕೋರುತ್ತೀರಿ. ಸಾಕಷ್ಟು ಜನರು ನಿಮ್ಮನ್ನು ಅನುಸರಿಸುತ್ತಾರೆ. ನೀವೇ ಹೀಗೆ ಮಾಡಿದರೆ ನಿಮ್ಮನ್ನು ಅನುಸರಿಸುವವರಿಗೆ ಏನು ಸಲಹೆ ಕೊಡುತ್ತೀರಿ ಎಂದು ಪ್ರಶ್ನಿಸಿದರು.

ಸ್ವಾಮೀಜಿ ಅಥವಾ ಯಾರೇ ಆದರೂ ನ್ಯಾಯಾಲಯಗಳಿಗೆ ನ್ಯಾಯಾಂಗ ನಿಂದಕರು ಒಂದು ವರ್ಗ. ಹಿಂದೂ ಧರ್ಮದಲ್ಲಿ ನ್ಯಾಯಸ್ಥಾನಕ್ಕೆ ಗೌರವ ಕೊಡಬೇಕು ಎಂದು ಹೇಳಲಾಗಿದೆ. ಅದಾಗ್ಯೂ, ನೀವೇಕೆ ಗೌರವ ಕೊಡಲಿಲ್ಲ. ಮಂತ್ರ, ಶ್ಲೋಕಗಳಲ್ಲಿ ನ್ಯಾಯಾಧೀಶಃ ಪ್ರತ್ಯಕ್ಷ ದೇವತಃ ಎಂದು ಹೇಳಲಾಗಿದೆ. ನೀವೆ ಹೀಗೆ ಹೇಳಿದರೆ ಈ ಸಂಸ್ಥೆಯನ್ನು ನಾವು ಉಳಿಸುವುದು ಹೇಗೆ? ನಿಮ್ಮ ಭಕ್ತರು ಏನು ಮಾಡಬಹುದು? ಸಾವಿರ ನ್ಯಾಯಾಂಗ ನಿಂದನೆ ಪ್ರಕರಣ ನಮ್ಮ ಮುಂದೆ ಬರುತ್ತವೆ. ನ್ಯಾಯದಾನ ಮಾಡುವುದು ಹೇಗೆ? ದಿನ ನ್ಯಾಯಾಂಗ ನಿಂದನೆ ಪ್ರಕರಣ ನಡೆಸುತ್ತಾ ಕುಳಿತರೆ ನ್ಯಾಯದಾನ ಮಾಡುವುದು ಹೇಗೆ? ನಿಮ್ಮಂಥ ಶ್ರೇಷ್ಠ ಸ್ಥಾನದಲ್ಲಿರುವ ಸ್ವಾಮೀಜಿಯಂಥ ಜವಾಬ್ದಾರಿ ಬೇಕು. ನ್ಯಾಯಾಧೀಶರು, ನ್ಯಾಯಾಲಯದ ಬಗ್ಗೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಆಗ ನಿಮಗೂ ಗೌರವ ಬರುತ್ತದೆ. ಇಲ್ಲವಾದಲ್ಲಿ ನಮ್ಮ ಕೆಲಸವನ್ನು ನಾವು ಮಾಡಬೇಕಾಗುತ್ತದೆ ಎಂದು ಪೀಠ ತಿಳಿಸಿತು.

ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು, ಅಸಾಮಾನ್ಯ ಜವಾಬ್ದಾರಿಗಳು ಅಸಾಮಾನ್ಯ ಶಕ್ತಿಯೊಂದಿಗೆ ಬರುತ್ತವೆ ಎಂದು ಹೇಳುತ್ತಾರೆ. ನಾಯಕ ಏನು ಹೇಳುತ್ತಾರೋ, ಭಕ್ತರು ಅದನ್ನೇ ಮಾಡುತ್ತಾರೆ. ನಾವು ಸಂಸ್ಥೆಯ ಭಾಗ. ಈ ಕೆಲಸ ಮಾಡಲು ನಮ್ಮನ್ನು ಆಯ್ಕೆ ಮಾಡಲಾಗಿದೆ. ಗೌರವವನ್ನು ಸಂಸ್ಥೆಗೆ ನೀಡಲಾಗುತ್ತದೆಯೇ ವಿನಾ ವ್ಯಕ್ತಿಗಲ್ಲ. ನಾವು ಸಂಸ್ಥೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಜನರು ಬಂದು ಹೋಗುತ್ತಾರೆ. ಸಂಸ್ಥೆಯು ಶತಮಾನಗಳು ಕಳೆದರೂ ಇರುತ್ತವೆ. ಹಿಂದೆಯೂ ಸಂಸ್ಥೆ ಇತ್ತು. ಹೀಗಾಗಿ, ಸಂಸ್ಥೆ ಗೌರವಿಸಬೇಕು ಎಂದು ಪೀಠ ತಿಳಿಸಿದರು.

ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.