ETV Bharat / state

ವಾಹನಗಳ ನೋಂದಣಿ: ಸ್ಮಾರ್ಟ್​​​ ಕಾರ್ಡ್ ವಿತರಣೆ ಮುಂದುವರೆಸಲು ಹೈಕೋರ್ಟ್ ಸಮ್ಮತಿ

ಸ್ಮಾರ್ಟ್​​​​ಕಾರ್ಡ್ ಆಧಾರಿತ ನೋಂದಣಿ ಪ್ರಮಾಣ ಪತ್ರಕ್ಕೆ (ಆರ್​​​ಸಿ) ಬದಲಾಗಿ ಎಲೆಕ್ಟ್ರಾನಿಕ್ ಅಥವಾ ಅನ್​​​​ಲೈನ್ ಮೂಲಕ ಆರ್​​​ಸಿ ವಿತರಿಸಲು ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಿಚಾರಣೆ ನಡೆಸಿತು.

High Court order to issue RC through smart card
ಆರ್​ಸಿಯನ್ನು ಸ್ಮಾರ್ಟ್​ ಕಾರ್ಡ್​ ಮೂಲಕ ವಿತರಣೆಗೆ ಹೈಕೋರ್ಟ್​ ಆದೇಶ
author img

By

Published : Dec 8, 2021, 10:28 PM IST

ಬೆಂಗಳೂರು : ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು (ಆರ್​​​ಸಿ) ಈ ಹಿಂದಿನಂತೆಯೇ ಸ್ಮಾರ್ಟ್ ಕಾರ್ಡ್ ಮೂಲಕವೇ ವಿತರಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.

ಸ್ಮಾರ್ಟ್​​​​ಕಾರ್ಡ್ ಆಧಾರಿತ ನೋಂದಣಿ ಪ್ರಮಾಣ ಪತ್ರಕ್ಕೆ (ಆರ್​​​ಸಿ) ಬದಲಾಗಿ ಎಲೆಕ್ಟ್ರಾನಿಕ್ ಅಥವಾ ಅನ್​​​​ಲೈನ್ ಮೂಲಕ ಆರ್​​​ಸಿ ವಿತರಿಸಲು ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಪ್ರಶ್ನಿಸಿ ರೂಸ್ಮೆರ್ಟಾ ಟೆಕ್ನಾಲಜೀಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರ ಸಂಸ್ಥೆ ರೂಸ್ಮೆರ್ಟಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಂತೆ ರಾಜ್ಯ ಸರ್ಕಾರ ಸ್ಮಾರ್ಟ್ ​​​ಕಾರ್ಡ್ ವಿತರಿಸುವ ಸಂಬಂಧ ಸಂಸ್ಥೆಯೊಂದಿಗೆ 2009ರಲ್ಲಿ ಒಪ್ಪಂದ ಮಾಡಿಕೊಂಡಿದ್ದು, 2024ರವರೆಗೂ ಜಾರಿಯಲ್ಲಿರಲಿದೆ. ಈ ನಡುವೆ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ವಾಹನಗಳ ಉತ್ಪಾದಕರು, ಡೀಲರ್​​ಗಳಿಗೆ ನೋಂದಣಿ ಅವಕಾಶ ನೀಡುವ ಮೂಲಕ ಒಪ್ಪಂದ ಉಲ್ಲಂಘಿಸಿದೆ. ಇದು ಒಪ್ಪಂದದ ಉಲ್ಲಂಘನೆ ಎಂದು ಆರೋಪಿಸಿದರು.

ಅಲ್ಲದೆ ಈ ಸಂಬಂಧ ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು 2021 ರ ಅಕ್ಟೋಬರ್ 31 ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡುವಂತೆ ಕೋರಿದರು.

ವಾದ ಆಲಿಸಿದ ಪೀಠ, ಈ ಮೊದಲಿನಂತೆಯೇ ವಾಹನಗಳ ನೋಂದಣಿ ಪ್ರಮಾಣ ಪತ್ರಗಳನ್ನು ಸ್ಮಾರ್ಟ್​​​​ಕಾರ್ಡ್ ಮೂಲಕವೇ ವಿತರಿಸುವಂತೆ ನಿರ್ದೇಶಿಸಿತು. ಅಲ್ಲದೆ ಅರ್ಜಿಯಲ್ಲಿನ ಪ್ರತಿವಾದಿಗಳಾದ ಹೆದ್ದಾರಿ ಸಚಿವಾಲಯ, ರಾಜ್ಯ ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿ 3 ವಾರಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ಕೆಜಿಎಫ್ ಬಾಬುರಿಂದ 115 ಕೋಟಿ ರೂ. ಭೂ ಕಬಳಿಕೆಯಾಗಿದೆ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.