ETV Bharat / state

ಬಿಎಸ್​ವೈ ಹೆಗಲಿಗೆ ಉಪಚುನಾವಣೆ ಹೊಣೆ; ಅಭ್ಯರ್ಥಿಗಳ ಆಯ್ಕೆಯಲ್ಲಿ ಕೇಂದ್ರದ ಹಸ್ತಕ್ಷೇಪವಿಲ್ಲ?

ರಾಜ್ಯ ಉಪಚುನಾವಣೆ ಸಮರದಲ್ಲಿ ಬಿಜೆಪಿ ಹೈಕಮಾಂಡ್​ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಅದರ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಬಿಎಸ್​ವೈಗೆ ನೀಡಲಾಗಿದೆ ಎನ್ನಲಾಗುತ್ತಿದೆ.

ಸಿಎಂ ಬಿ.ಎಸ್​.ಯಡಿಯೂರಪ್ಪ
author img

By

Published : Sep 24, 2019, 1:18 PM IST

ಬೆಂಗಳೂರು: ರಾಜ್ಯದ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದೆ ಎಂಬ ಮಾಹಿತಿ ಸಿಕ್ಕಿದೆ.

ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಎಲ್ಲ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗಬೇಕು? ಚುನಾವಣೆಯನ್ನು ಗೆಲ್ಲಲು ರಣತಂತ್ರ ಹೇಗಿರಬೇಕು? ಎನ್ನುವುದನ್ನು ಯಡಿಯೂರಪ್ಪನವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್ ಬಯಕೆಯಾಗಿದೆ.

High Command gave BS Y the by-election responsibility..?
ಸಿಎಂ ಬಿ.ಎಸ್​.ಯಡಿಯೂರಪ್ಪ (ಪ್ರಾತಿನಿಧಿಕ ಚಿತ್ರ)

ಬಿಎಸ್‌ವೈ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರಲು ನಿರ್ಧರಿಸಿರುವ ಕೇಂದ್ರ ನಾಯಕರು, ಮಂತ್ರಿ ಮಂಡಲ ರಚನೆಯ ನಂತರ ಸರ್ಕಾರದ ಯಾವ ಚಟುವಟಿಕೆಗಳ ವಿಷಯದಲ್ಲೂ ಮಧ್ಯೆ ಪ್ರವೇಶಿಸುತ್ತಿಲ್ಲ.

ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲಿ ದಾಖಲೆಯ ಪ್ರಮಾಣದಷ್ಟು ಸರ್ಕಾರಿ ನೌಕರರ ವರ್ಗಾವಣೆ ನಡೆದಿದೆ. ಆದ್ರೂ ಚಕಾರ ಎತ್ತದ ಹೈಕಮಾಂಡ್‌ ಇದೀಗ ಉಪಚುನಾವಣೆಯ ಸಂಪೂರ್ಣ ಹೊಣೆಯನ್ನೂ ಯಡಿಯೂರಪ್ಪನವರಿಗೆ ನೀಡಿದೆ.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಲಿ. ಚುನಾವಣೆ ನಂತರದ ಸಮಸ್ಯೆಗಳಿಗೆ ಹೈಕಮಾಂಡ್ ದೂರದಿರಲಿ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇದ್ದಕ್ಕಿದ್ದಂತೆ ಬಿಜೆಪಿ ವರಿಷ್ಠ ನಾಯಕರು ತಳೆದಿರುವ ಧೋರಣೆ ಯಡಿಯೂರಪ್ಪ ಆಪ್ತರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಈ ಉದ್ದೇಶದ ಹಿಂದೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಇರಾದೆ ಇದ್ದರೂ ಇರಬಹುದು ಎಂಬ ಗುಮಾನಿ ಮೂಡಿಸಿದೆ.

ವರ್ಷಾಂತ್ಯದ ವೇಳೆಗೆ ಇಲ್ಲವೇ ಹೊಸ ವರ್ಷದ ಆರಂಭಕ್ಕೆ ನಡೆಯಲಿರುವ ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯ ಜತೆಗೆ ಕರ್ನಾಟಕ ವಿಧಾನಸಭೆಗೂ ಮಧ್ಯಂತರ ಚುನಾವಣೆ ನಡೆಸುವ ಪೂರ್ವಭಾವಿ ತಯಾರಿ ಇದು ಎಂದು ಯಡಿಯೂರಪ್ಪ ಬೆಂಬಲಿಗರಲ್ಲಿ ಆತಂಕವಿದೆ.

ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿದ್ರೂ ನೆರವಿಗೆ ಬಾರದ ಕೇಂದ್ರದ ಧೋರಣೆ, ನೆರವು ಕೊಡಿ ಎಂದು ಯಡಿಯೂರಪ್ಪ ಪದೇ ಪದೇ ಕೋರಿದರೂ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ರೀತಿಗಳೂ ಇದಕ್ಕೆ ಪೂರಕವಾಗಿವೆ.

ಈಗ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ನೆತ್ತಿಯ ಮೇಲೆ ಜವಾಬ್ದಾರಿಯ ಬೆಟ್ಟ ಹೊರಿಸಿದ್ದು ಅದೂ ಕೂಡಾ ಸಿಎಂ ಬೆಂಬಲಿಗರಿಗೆ ಅನುಮಾನ ಮೂಡಿಸಿದೆ.

ಉಪಚುನಾವಣೆ ಕದನ ಜೋರಾಗಿಯೇ ಸದ್ದು ಮಾಡುತ್ತಿದ್ದು, ಬಿಎಸ್​ವೈ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Intro:ಬೆಂಗಳೂರು : ರಾಜ್ಯದ ಹದಿನೈದು ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಇದೀಗ ಸಿಎಂ ಯಡಿಯೂರಪ್ಪ ಅವರ ಹೆಗಲ ಮೇಲೆ ಹಾಕಿದೆ.Body:ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಎಲ್ಲ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗಬೇಕು? ಚುನಾವಣೆಯನ್ನು ಗೆಲ್ಲಲು ಹೂಡುವ ರಣತಂತ್ರ ಹೇಗಿರಬೇಕು? ಅನ್ನುವುದನ್ನು ಯಡಿಯೂರಪ್ಪ ಅವರೇ ನಿರ್ಧರಿಸಲಿ ಎಂಬುದು ಹೈಕಮಾಂಡ್ ಬಯಕೆ.
ಯಡಿಯೂರಪ್ಪ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರಲು ನಿರ್ಧರಿಸಿರುವ ಬಿಜೆಪಿ ಹೈಕಮಾಂಡ್ ಮಂತ್ರಿ ಮಂಡಲ ರಚನೆಯ ನಂತರ ಸರ್ಕಾರದ ಯಾವ ಚಟುವಟಿಕೆಗಳ ವಿಷಯದಲ್ಲೂ ಮಧ್ಯೆ ಪ್ರವೇಶಿಸುತ್ತಿಲ್ಲ.
ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲಿ ದಾಖಲೆಯ ಪ್ರಮಾಣದಷ್ಟು ಸರ್ಕಾರಿ ನೌಕರರ ವರ್ಗಾವಣೆ ನಡೆದಿದ್ದರೂ, ಆ ಬಗ್ಗೆ ಚಕಾರ ಎತ್ತದ ಬಿಜೆಪಿ ಹೈಕಮಾಂಡ್ ಇದೀಗ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಯಡಿಯೂರಪ್ಪ ಅವರ ಹೆಗಲ ಮೇಲೇ ಹೊರಿಸಿದೆ.
ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳಾಗಬೇಕು?ಎಂಬ ವಿಷಯದಲ್ಲಿ ಯಡಿಯೂರಪ್ಪ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿ. ಇಲ್ಲದಿದ್ದರೆ ನಾನು ಹೇಳಿದವರನ್ನು ಕ್ಯಾಂಡಿಡೇಟ್ ಮಾಡದೆ ಇದ್ದುದರಿಂದ ಸಮಸ್ಯೆಯಾಯಿತು ಎಂದು ಅವರು ಹೈಕಮಾಂಡ್ ಮೇಲೆ ದೋಷ ಹೊರಿಸುವಂತಿರಬಾರದು.
ಇದರ ಬದಲು ಉಪಚುನಾವಣೆಯ ಕ್ಯಾಂಡಿಡೇಟುಗಳನ್ನು ಅವರೇ ನಿರ್ಧರಿಸಿದರೆ ಫಲಿತಾಂಶದ ಹೊಣೆಗಾರಿಕೆಯನ್ನು ಯಡಿಯೂರಪ್ಪ ಅವರೇ ಹೊರುತ್ತಾರೆ. ಹೀಗಾಗಿ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಲು ಸಂಪೂರ್ಣ ಸಹಕಾರ ನೀಡುವುದಷ್ಟೇ ನಮ್ಮ ಉದ್ದೇಶವಾಗಬೇಕು ಎಂದು ದೆಹಲಿ ವರಿಷ್ಟರು ರಾಜ್ಯದ ಇತರ ನಾಯಕರಿಗೆ ಸಿಗ್ನಲ್ ರವಾನಿಸಿದ್ದಾರೆ.
ಇದ್ದಕ್ಕಿದ್ದಂತೆ ಬಿಜೆಪಿ ಹೈಕಮಾಂಡ್ ತಳೆದಿರುವ ಈ ಧೋರಣೆ ಯಡಿಯೂರಪ್ಪ ಅವರ ಆಪ್ತರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದ್ದು, ಇದು ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವ ಇರಾದೆಯಿರಬಹುದು ಎಂಬ ಶಂಕೆ ಮೂಡುವಂತೆ ಮಾಡಿದೆ.
ವರ್ಷಾಂತ್ಯದ ವೇಳೆಗೆ ಇಲ್ಲವೇ ಹೊಸ ವರ್ಷದ ಶುರುವಿನ ವೇಳೆಗೆ ನಡೆಯಲಿರುವ ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯ ಜತೆಗೆ ಕರ್ನಾಟಕ ವಿಧಾನಸಭೆಗೂ ಮಧ್ಯಂತರ ಚುನಾವಣೆ ನಡೆಸುವ ಪೂರ್ವಬಾವಿ ತಯಾರಿ ಇದು ಎಂದು ಯಡಿಯೂರಪ್ಪ ಬೆಂಬಲಿಗರು ಅನುಮಾನಪಡುತ್ತಿದ್ದಾರೆ.
ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿದರೂ ನೆರವಿಗೆ ಬರದ ಕೇಂದ್ರ ಸರ್ಕಾರದ ಧೋರಣೆ, ನೆರವು ಕೊಡಿ ಎಂದು ಯಡಿಯೂರಪ್ಪ ಅವರು ಪದೇ ಪದೇ ಕೋರಿದರೂ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವ ರೀತಿಗಳೂ ಇದಕ್ಕೆ ಪೂರಕವಾಗಿವೆ.
ಈಗ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಜವಾಬ್ದಾರಿಯ ಬೆಟ್ಟ ಹೊರಿಸಿದ್ದು ಅದು ಕೂಡಾ ಸಿಎಂ ಬೆಂಬಲಿಗರಿಗೆ ಅನುಮಾನ ಮೂಡಿಸಿದೆ.
ಒಟ್ಟಾರೆ, ಉಪಚುನಾವಣೆ ಕದನ ಜೋರಾಗಿಯೇ ಇದೆ. ಇದೆಲ್ಲವನ್ನೂ ಬಿಎಸ್ ವೈ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.