ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಹಿನ್ನೆಲೆ ಸಹಾಯ ಬೇಡುತ್ತಿರುವವರಿಗಾಗಿ, ಮುಖ್ಯವಾಗಿ ಹಿರಿಯ ನಾಗರಿಕರಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೆಲ್ಪ್ ಲೈನ್ ಓಪನ್ ಮಾಡಿದ್ದಾರೆ.
ಕೊರೊನಾ ವೈರಸ್ ಲಾಕ್ ಡೌನ್ನಿಂದಾಗಿ ಏಕಾಂಗಿಯಾಗಿದ್ದೀರಾ? ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡು ಡಾಕ್ಟರ್ ಕನ್ಸಲ್ಟ್ ಮಾಡಬೇಕಾ? ಮೆಡಿಕಲ್ ಎಮರ್ಜೆನ್ಸಿಗಾಗಿ ಆ್ಯಂಬುಲೆನ್ಸ್ ಬೇಕಾ? ವಿದ್ಯುತ್, ವಾಟರ್, ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗಿದ್ಯಾ? ನಿಂದನೆ ಹಾಗೂ ಸಮಸ್ಯೆಗಳನ್ನ ಅನುಭವಿಸುತ್ತಿದ್ದೀರಾ? ಪೆನ್ಶನ್, ಬ್ಯಾಂಕಿಂಗ್, ಇಎಮ್ಐ ಬಗ್ಗೆ ಗೊಂದಲ ಇದೆಯಾ? ದಿನಸಿ ವಸ್ತುಗಳು, ಮೆಡಿಸಿನ್ಸ್ ಬೇಕಾ? ಹಾಗಾದರೆ 1090 ಅಥವಾ 100ಗೆ ಕರೆ ಮಾಡಿ. ಇದಕ್ಕಾಗಿ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಟೀಂ ಕೆಲಸ ನಿರ್ವಹಿಸಲಿದೆ. ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ತಿಳಿಸಿ ನಿಮ್ಮ ಮನೆಬಾಗಿಲಿಗೆ ಹೊಯ್ಸಳ ಬಂದು ಸಹಾಯ ಮಾಡುತ್ತೆ ಎಂದು ನಗರ ಆಯುಕ್ತ ತಿಳಿಸಿದ್ದಾರೆ.
ಸದ್ಯ ನಗರದಲ್ಲಿ ಲಾಕ್ ಡೌನ್ ಇರುವುದರಿಂದ ವಿನಾಕಾರಣ ಯಾರು ಕೂಡ ರಸ್ತೆಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಈಗಾಗಲೇ ಎಲ್ಲೆಡೆ ಜಾಗೃತೆ ವಹಿಸಿದ್ದಾರೆ. ಆದರೆ ಯುವಕರುಅನಿವಾರ್ಯ ಕಾರಣಕ್ಕೆ ಹೊರಗೆ ಬಂದು ಹೇಗಾದರೂ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗ್ತಾರೆ. ಆದರೆ ಹಿರಿ ಜೀವಿಗಳಿಗೆ ಸರಿಯಾದ ವ್ಯವಸ್ಥೆ ಸಿಗದ ಕಾರಣ ಈ ರೀತಿಯಾದ ನಿರ್ಧಾರವನ್ನ ಕೈಗೊಂಡಿದ್ದಾರೆ.