ಬೆಂಗಳೂರು: ಶನಿವಾರ ರಾತ್ರಿ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮಲ್ಲೇಶ್ವರಂನಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದಿದ್ದು, ಕಾಂಪೌಂಡ್ ಪಕ್ಕ ನಿಲ್ಲಿಸಿದ್ದ ಒಂದು ಕಾರು, ನಾಲ್ಕು ಬೈಕ್ಗಳು ಜಖಂಗೊಂಡಿವೆ.
ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಮಲ್ಲೇಶ್ವರಂ ಮಂತ್ರಿ ಮಾಲ್ ಮುಂಭಾಗ, ಕೋರಮಂಗಲ ಆರನೇ ಬ್ಲಾಕ್ನ ರಸ್ತೆಗಳು ಹಾಗೂ ವರ್ತೂರು ಫೋರಂ ಮಾಲ್ ಬಳಿ ರಾಜಕಾಲುವೆಗಳ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯಿಂದ ನೀರು ನಿಂತಿದೆ. ಹೆಬ್ಬಾಳದ ಗುಡ್ಡದಹಳ್ಳಿ ಹಾಗೂ ಗಂಗಮ್ಮ ಬಡಾವಣೆಗೆ ನೀರು ನುಗ್ಗಿದೆ. ಲೇಔಟ್ನ ರಸ್ತೆಗಳು ಕೆರೆಗಳಾಗಿ ಮಾರ್ಪಾಡಾಗಿದ್ದು, ಸ್ಥಳೀಯರೇ ನೀರು ತೆರವು ಮಾಡಲು ಮ್ಯಾನ್ಹೋಲ್ ತೆರೆಯಲು ಹರಸಾಹಸಪಟ್ಟರು.