ETV Bharat / state

ಬೆಂಗಳೂರಿನಲ್ಲಿ ರಾತ್ರಿ ಮಳೆಯೋ ಮಳೆ, ರಸ್ತೆಯೆಲ್ಲಾ ಹೊಳೆ - ಕಳೆದ ರಾತ್ರಿಯೆಲ್ಲಾ ಸುರಿದ ಧಾರಾಕಾರ ಮಳೆ

ಕಳೆದ ರಾತ್ರಿಯೆಲ್ಲಾ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿಗರು ಮತ್ತೆ ನಲುಗುವಂತಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಾಜಧಾನಿಯ ರಸ್ತೆಗಳು ಹೊಳೆಯಂತೆ ಕಂಡುಬಂದವು.

heavy-rain-in-bangalore
ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ : ಜನಜೀವನ ಅಸ್ತವ್ಯಸ್ತ
author img

By

Published : Sep 5, 2022, 7:46 AM IST

Updated : Sep 5, 2022, 10:36 AM IST

ಬೆಂಗಳೂರು: ಐಟಿ ಹಬ್​ ಸಿಲಿಕಾನ್​ ಸಿಟಿಯಲ್ಲಿ ಭಾರಿ ಮಳೆಯಿಂದಾಗಿ ಐಟಿ ಕಂಪನಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಮಳೆಯಿಂದುಂಟಾದ ಹಾನಿ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಶುರುವಾದ ಮಳೆ ರಾತ್ರಿಯೆಲ್ಲಾ ಎಡಬಿಡದೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಹಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹೊಳೆಯಂತಾಗಿತ್ತು. ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ.

ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆ

ಬಾಣಸವಾಡಿ, ಜಯನಗರ, ಜೆ.ಪಿ.ನಗರ, ವಿಜಯ ನಗರ, ಮಲ್ಲೇಶ್ವರ, ರಾಜಾಜಿನಗರ, ಮೈಸೂರು ರಸ್ತೆ, ಕೆಂಗೇರಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಇಲ್ಲಿನ ತಗ್ಗು ಪ್ರದೇಶಗಳು ಹಾಗು ಅಂಡರ್ ಪಾಸ್​ಗಳಲ್ಲಿ ನೀರು ತುಂಬಿದೆ. ಶಿವಾನಂದ ಸರ್ಕಲ್​ನಲ್ಲಿ ಮ್ಯಾನ್‌ ಹೋಲ್ ತೆರೆದುಕೊಂಡು ನೀರು ರಸ್ತೆಯ ಮೇಲೆಲ್ಲಾ ಹರಿದು ರಸ್ತೆ ಕೆರೆಯಂತೆ ಕಂಡುಬಂತು. ಜಲಮಂಡಳಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದರು.

ಶಾಂತಿನಗರ ಮುಖ್ಯರಸ್ತೆಯಲ್ಲಿ ಮೂರಡಿ ನೀರು: ಶಾಂತಿನಗರದ ಮುಖ್ಯರಸ್ತೆಯಲ್ಲಿ ನಿಂತ ಮಳೆ ನೀರು ವಾಹನ ಸವಾರರನ್ನು ಪೇಚಿಗೆ ಸಿಲುಕಿಸಿತ್ತು. ಅಂದಾಜು ಮೂರು ಅಡಿ ನಿಂತ‌ ಮಳೆ ನೀರಿನಲ್ಲಿ ವಾಹನಗಳ ಓಡಾಟ ದುಸ್ತರವಾಗಿತ್ತು. ನೀರಿನಲ್ಲಿಯೇ ಆಟೋ, ಕಾರು, ಬೈಕ್ ಸವಾರರು ಸಾಗುತ್ತಿದ್ದರು.

ಭದ್ರತಾ ಸಿಬ್ಬಂದಿಯಿಂದ ವ್ಯಕ್ತಿಯ ರಕ್ಷಣೆ: ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯ ಬಳಿ ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ವರ್ಷಧಾರೆ: ಹವಾಮಾನ ಇಲಾಖೆ ಮುನ್ಸೂಚನೆ

Last Updated : Sep 5, 2022, 10:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.