ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಗುಡುಗು ಸಹಿತ ಮಳೆಯಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಮುಂಗಾರು ಮಳೆಗೆ ಇನ್ನೂ ಕೆಲವು ದಿನಗಳು ಬಾಕಿ ಇದ್ದು, ಇದು ಪೂರ್ವ ಮುಂಗಾರುಮಳೆ. ಈ ಮಳೆ ಸ್ವಲ್ಪ ಅಪಾಯಕಾರಿ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಯಶವಂತಪುರ, ನವರಂಗ್, ಮಲ್ಲೇಶ್ವರಂ, ವಿಜಯನಗರ, ಕಬ್ಬನ್ ಪಾರ್ಕ್, ಶಾಂತಿನಗರದಲ್ಲಿ ಭಾರಿ ಮಳೆಯಾದ ಪರಿಣಾಮ ವಾಹನ ಸವಾರರು ಪರದಾಡಿದರು. ಅಷ್ಟೇ ಅಲ್ಲದೇ ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಕೆಆರ್ ಸರ್ಕಲ್, ಶಿವಾಜಿನಗರ, ಮೇಖ್ರಿ ಸರ್ಕಲ್ ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ.