ಬೆಂಗಳೂರು: ಸೂರ್ಯ ಪಥ ಬದಲಿಸಿ ಹೊಸ ಭರವಸೆಯ ಹೊಂಗಿರಣ ಮೂಡಿಸಿದಂತೆ ಈ ಮಕರ ಸಂಕ್ರಾಂತಿಯಂದು ಜೆಡಿಎಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಹೊಸತನದೊಂದಿಗೆ ಪಕ್ಷದ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇದರ ಮೊದಲ ಹೆಜ್ಜೆಯಾಗಿ ಈ ತಿಂಗಳ 18 ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಹೊಸ ಕೋರ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗುವುದು.
ನಂತರ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕ, ಕಂದಾಯ ವಿಭಾಗವಾರು, ಜಿಲ್ಲೆ, ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗಾಗಿ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.