ಬೆಂಗಳೂರು : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದೇವೇಗೌಡರು, ನಾಡಿನ ಸಮಸ್ತ ಜನತೆಗೆ ಪವಿತ್ರ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಜಗತ್ತಿಗೆ ಮಾನವತೆಯ ಸಂದೇಶ ಸಾರಿದ ಮಹಾ ಪುರುಷ ಏಸು ಕ್ರಿಸ್ತನ ಸಹನೆ, ಕ್ಷಮೆ, ತಾಳ್ಮೆಯ ಗುಣಗಳು ನಮಗೆ ಪ್ರೇರಣೆಯಾಗಲಿ ಎಂದಿದ್ದಾರೆ.
ಅದೇ ರೀತಿ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಕ್ಕೆ ಶುಭ ಕೋರಿದ ದೇವೇಗೌಡರು, ವಾಜಪೇಯಿ ಅವರು ದೂರದೃಷ್ಟಿಯ ನಾಯಕರಾಗಿದ್ದರು ಮತ್ತು ನಮ್ಮ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ ರಾಜಕಾರಣಿ ಎಂದು ಬಣ್ಣಿಸಿದ್ದಾರೆ.
ಕ್ರಿಸ್ಮಸ್ ಹಬ್ಬಕ್ಕೆ ಟ್ವೀಟ್ ಮೂಲಕ ಶುಭ ಕೋರಿರುವ ಹೆಚ್ ಡಿ ಕುಮಾರಸ್ವಾಮಿ, ತ್ಯಾಗ, ಕರುಣೆ, ಪ್ರೀತಿ ಮತ್ತು ಕ್ಷಮಾ ಗುಣಗಳಿಂದ ಮಾತ್ರವೇ ಮನುಷ್ಯನ ಬದುಕು ಸಾರ್ಥಕ ಎಂಬ ಮಹೋನ್ನತ ಬೆಳಕು ತೋರಿದ ಏಸುಕ್ರಿಸ್ತನಿಗೆ ನಮನಗಳು ಎಂದಿದ್ದಾರೆ.
ಕೇಡು ಮೊದಲಾಗಿ ಶಿಲುಬೆಗೆ ಮತ್ತಿಕೊಂಡು ನೆತ್ತಿ, ಅಂಗಾಲು, ಮುಂಗೈಗಳು ಉಕ್ಕಿನ ಮೊಳೆ ನೆಟ್ಟು ನೆತ್ತರು ಧುಮ್ಮಿಕ್ಕುವಾಗಲು ಪರಮಪ್ರೀತಿ, ಕಾರುಣ್ಯವನ್ನು ಹಂಚಿದ ಸರ್ವಶ್ರೇಷ್ಠ ಸಂತ ಏಸುಕ್ರಿಸ್ತ ಮನುಕುಲಕ್ಕೆ ಮಹಾಬೆಳಕು ಎಂದು ಹೇಳಿದ್ದಾರೆ.