ಬೆಂಗಳೂರು: ಅಹಿಂಸೆಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತಿದ್ದೇನೆ ಎಂದು ಗಾಂಧಿ ಜಯಂತಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶುಭ ಕೋರಿದ್ದಾರೆ.
![ದೇವೇಗೌಡ ಟ್ವೀಟ್](https://etvbharatimages.akamaized.net/etvbharat/prod-images/10:34:30:1601615070_kn-bng-02-hdd-tweet-script-7208083_02102020101429_0210f_1601613869_984.jpg)
ಈ ಕುರಿತು ಟ್ವೀಟ್ ಮಾಡಿರುವ ಹೆಚ್ಡಿಡಿ, ಅವರು ಸಮಾಜದಿಂದ ದ್ವೇಷವನ್ನು ತೊಡೆದು ಹಾಕಲು ಮತ್ತು ಅವರ ಆದರ್ಶಗಳನ್ನು ಪಾಲಿಸುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಹೇಳಿದ್ದಾರೆ.