ETV Bharat / state

ಬೇಸಿಗೆಯಲ್ಲಿ ಕಾಡಲಿದೆಯಾ ಹೆಚ್1ಎನ್1 ಮಹಾಮಾರಿ..? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹೀಗಿದೆ! - ಬೇಸಿಗೆ

ಹೆಚ್1ಎನ್1 ಭಯ ಇಲ್ಲಪ್ಪ ಅಂತಾ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಮತ್ತೆ ಮಹಾಮಾರಿ ನಡುಕ ಹುಟ್ಟಿಸಿದೆ. ಈಗಾಗಲೇ ಬೇಸಿಗೆ ಬಿಸಿಗೆ ತತ್ತರಿಸಿದ್ದವರಿಗೆ ಹಂದಿ ಜ್ವರ ಮತ್ತಷ್ಟು ತಲೆ ಬಿಸಿ ಮಾಡಿದೆ.

ಹೆಚ್1ಎನ್1
author img

By

Published : Mar 11, 2019, 5:44 PM IST

Updated : Mar 11, 2019, 6:00 PM IST

ಬೆಂಗಳೂರು: ಪ್ರತಿ ವರ್ಷ ಜನರಲ್ಲಿ ಆತಂಕ ಹುಟ್ಟಿಸ್ತಿದ್ದ ಮಹಾಮಾರಿ ಹೆಚ್1ಎನ್1 ಈ ವರ್ಷದ ಮೊದಲ ತಿಂಗಳಲ್ಲಿ 100ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿತ್ತು.

ಸದ್ಯ, ಈ ಹೆಚ್1ಎನ್1 ಭಯ ಇಲ್ಲಪ್ಪ ಅಂತಾ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಮತ್ತೆ ಮಹಾಮಾರಿ ನಡುಕ ಹುಟ್ಟಿಸಿದೆ. ಈಗಾಗಲೇ ಬೇಸಿಗೆ ಬಿಸಿಗೆ ತತ್ತರಿಸಿದ್ದವರಿಗೆ ಹಂದಿ ಜ್ವರ ಮತ್ತಷ್ಟು ತಲೆ ಬಿಸಿ ಮಾಡಿದೆ.

ಬೆಂಗಳೂರಿನಲ್ಲಿ‌ ಈ ವರ್ಷ ಜನವರಿಯಲ್ಲಿ 155 ಪ್ರಕರಣಗಳು ಕಂಡು ಬಂದಿದ್ದು, ಈ ಸಂಬಂಧ ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯೂ ಸಹ ಸಲಹೆ ನೀಡಿತ್ತು. ಈಗ ಮತ್ತೆ ಬೇಸಿಗೆಯಲ್ಲಿ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಅದರಲ್ಲೂ ಹೆಚ್1ಎನ್1 ಜ್ವರದಿಂದ ಪಾರಾಗಲು ವೈದ್ಯರು ಸಲಹೆ ನೀಡುತ್ತಿದ್ದಾರೆ.

ವೈದ್ಯ ಡಾ.ಕಾರ್ತಿಕ್ ರಿಂದ ಜನರಿಗೆ ಸಲಹೆ

ವೈದ್ಯ ಡಾ.ಕಾರ್ತಿಕ್ ರಿಂದ ಜನರಿಗೆ ಸಲಹೆ

ಹೆಚ್1ಎನ್1 ಬಾರದಂತೆ ಎಚ್ಚರ ವಹಿಸುವುದು ಹೇಗೆ..?

  • ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನ ಕರವಸ್ತ್ರದಿಂದ ಅಥವಾ ಟಿಶ್ಯೂ ಪೇಪರಿಂದಾಗಲಿ ಮುಚ್ಚಿಕೊಳ್ಳಬೇಕು.
  • ಕೈಗಳನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
  • ಕೈ ತೊಳೆಯದೇ ಕಣ್ಣು, ಮೂಗು, ಬಾಯಿಯನ್ನು ಮುಟ್ಟಬಾರದು.
  • ಅತಿಯಾಗಿ ಜನಸಂದಣಿ ಇರುವ ಸ್ಥಳದಲ್ಲಿ ಹೋಗುವುದನ್ನ ತಪ್ಪಿಸುವುದು.
  • ಫ್ಲೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರುವುದು.
  • ಚೆನ್ನಾಗಿ ನಿದ್ದೆ ಮಾಡುವುದು, ದೈಹಿಕವಾಗಿ ಚಟುವಟಿಕೆಯಿಂದ ಇರುವುದು.
  • ಸಾಕಷ್ಟು ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು.

ಯಾವುದನ್ನೂ ಮಾಡದಿದ್ದರೆ ಉತ್ತಮ..?

  • ಹಸ್ತಲಾಘವ ಮೂಲಕ ಶುಭ ಕೋರಿಕೆ.
  • ರಸ್ತೆಯಲ್ಲಿ/ ಜನರಿರುವ ಪ್ರದೇಶಗಳಲ್ಲಿ ಉಗುಳುವುದು.
  • ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುವುದು.
  • ಅನಾವಶ್ಯಕವಾಗಿ ಜನಸಂದಣಿ ಪ್ರದೇಶಗಳಿಗೆ ಭೇಟಿ ಮಾಡುವುದನ್ನ ನಿಲ್ಲಿಸುವುದು ಒಳಿತು.

ಹೆಚ್1 ಎನ್1 ಜ್ವರ ದ ಲಕ್ಷಣಗಳೇನು..?

ಅಧಿಕ ಜ್ವರ, ಉಸಿರಾಟದ ತೊಂದರೆ, ಚರ್ಮದ ಅಥವಾ ತುಟಿಗಳ ನೀಲಿ ಬಣ್ಣ, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಈ ರೀತಿ ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ವೈದ್ಯ ಡಾ. ಕಾರ್ತಿಕ್ ಜನರಿಗೆ ಸಲಹೆ ನೀಡಿದ್ದಾರೆ.

ಗಾಳಿಯಲ್ಲಿ ಬಲು ಬೇಗ ಹರಡುವ ಸಾಧ್ಯತೆ ಇದೆ.. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

sample description
Last Updated : Mar 11, 2019, 6:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.