ETV Bharat / state

ಆಜಾನ್ - ಭಜನೆ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಶೀಘ್ರದಲ್ಲೇ ಮಾರ್ಗಸೂಚಿ

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ, ಕಾನೂನುಬಾಹಿರವಾಗಿ ಲೌಡ್ ಸ್ಪೀಕರ್ ಅಳವಡಿಸಿರುವವರು ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಅದಕ್ಕಾಗಿ ಅವರಿಗೆ 15 ದಿನ ಅಥವಾ 1 ತಿಂಗಳು ಕಾಲಾವಕಾಶ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

guidelines-will-be-issued-by-govt-to-use-loudspeaker-in-public-places
ಆಜಾನ್-ಭಜನೆ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಶೀಘ್ರದಲ್ಲಿ ಮಾರ್ಗಸೂಚಿ
author img

By

Published : May 9, 2022, 5:08 PM IST

ಬೆಂಗಳೂರು: ಆಜಾನ್ - ಭಜನೆ ಸಂಘರ್ಷ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ ಸಂಬಂಧ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಜಾನ್ - ಭಜನೆ ಸಂಘರ್ಷದ ಬಗ್ಗೆ ತುರ್ತು ಸಭೆ ನಡೆಸಿದರು.‌

ಈ ವೇಳೆ ಮಾರ್ಗಸೂಚಿ ಹೊರಡಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಸಿಎಂ ಅಧಿಕಾರಿಗಳಿಗೆ ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ಇದೇ ವೇಳೆ ಸೂಚನೆ ನೀಡಿದರು. ಸಭೆಯಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ, ಕಾನೂನು ಬಾಹಿರವಾಗಿ ಲೌಡ್ ಸ್ಪೀಕರ್ ಅಳವಡಿಸಿರುವವರು ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಅದಕ್ಕಾಗಿ ಅವರಿಗೆ 15 ದಿನ ಅಥವಾ 1 ತಿಂಗಳು ಕಾಲಾವಕಾಶ ನೀಡಲಾಗುವುದು. ಒಂದು ವೇಳೆ ಅನುಮತಿ ಪಡೆಯದೇ ಇದ್ದರೆ ಅಂತಹ ಧ್ವನಿವರ್ಧಕಗಳನ್ನು ತೆರವು ಮಾಡಲಾಗುವುದು.

ಯಾವ ಡೆಸಿಬಲ್ ಧ್ವನಿಯಲ್ಲಿ ಯಾವ ಸಮಯದಲ್ಲಿ ಬಳಸಬೇಕು ಎಂಬುದಕ್ಕೆ ಸುಪ್ರೀಂಕೋರ್ಟ್ ಆದೇಶದಂತೆ ಪಾಲಿಸಲು ತೀರ್ಮಾನಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಒಂದು ಡೆಸಿಬಲ್, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಒಂದು ಡೆಸಿಬಲ್​ನಲ್ಲಿ ಧ್ವನಿವರ್ಧಕ ಬಳಸುವ ನಿಟ್ಟಿನಲ್ಲಿ ಸ್ಪಷ್ಟವಾದ ಮಾರ್ಗಸೂಚಿ ಹೊರಡಿಸಲಾಗುತ್ತದೆ.

ಈ ಮಾರ್ಗಸೂಚಿ ಕೇವಲ ಹಿಂದೂ ಧಾರ್ಮಿಕ ಅಥವಾ ಮುಸ್ಲಿಂ ಧಾರ್ಮಿಕ ಕೇಂದ್ರಗಳಲ್ಲಿನ ಧ್ವನಿವರ್ಧಕಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೂ ಇದು ಅನ್ವಯಿಸಲಿದೆ. ಧ್ವನಿವರ್ಧಕ ಮಿತಿ ಪ್ರಮಾಣದಲ್ಲೇ ಬಳಸಬೇಕು. ಈ ಸಂಬಂಧ ಇವತ್ತು ಸಂಜೆ ಅಥವಾ ನಾಳೆ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ದೇಗುಲಗಳಲ್ಲಿ ಭಜನೆ, ಮಂತ್ರ ಪಠಣ: ಬೆಂಗಳೂರಲ್ಲಿ ಹಿಂದೂ ಮುಖಂಡರು ಪೊಲೀಸ್‌ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.