ಬೆಂಗಳೂರು: ನಿನ್ನೆ ವರ ಹೆಲಿಕಾಪ್ಟರ್ ಏರಿ ವಿವಾಹ ಮಂಟಪಕ್ಕೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ತುಮಕೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ವಧು ಐಶ್ವರ್ಯಾ ಕೈ ಹಿಡಿದಿದ್ದಾರೆ.
ಇದೀಗ ಈ ಮದುವೆಗೆ ಖರ್ಚಾದ ಹಣದ ಕುರಿತಂತೆ ಸುದ್ದಿ ಹರಿದಾಡುತ್ತಿದೆ. ಬ್ಯುಸಿನೆಸ್ಮ್ಯಾನ್ ಆಗಿರುವ ವರ ನಿರೂಪ್ ತುಮಕೂರಿಂದ ಬೆಂಗಳೂರಿಗೆ ಆಗಮಿಸಲು ಬರೋಬ್ಬರಿ 80 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಅಲ್ಲದೆ ವಿವಾಹಕ್ಕೆ ಒಟ್ಟು 30 ಲಕ್ಷ ರೂಪಾಯಿ ವ್ಯಯಿಸಲಾಗಿದೆ.
ವರನ ತಂದೆ ಬಲರಾಮ್ ಶೆಟ್ಟಿ ಮತ್ತು ತಾಯಿ ರಮಾದೇವಿ ತುಮಕೂರಿನವರಾಗಿದ್ದು ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಎಪಿಎಂಸಿಯಲ್ಲಿ ಕೆಲ ಮಂಡಿಗಳು ಸೇರಿದಂತೆ ರೈಸ್ ಮಿಲ್ ಗಳನ್ನು ಹೊಂದಿದ್ದಾರೆ. ವಧುವಿನ ತಂದೆ ಕಿಶೋರ್ ಮತ್ತು ತಾಯಿ ಮಾದವಿ ಮೂಲತಃ ಬೆಂಗಳೂರಿನವರಾಗಿದ್ದು, ವಧು ಐಶ್ವರ್ಯಾ ಬಿ.ಟೆಕ್ ಮಾಡಿ ಸಾಫ್ಟವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್ ಏರಿ ಬಂದ ಹೃದಯದ ಚೋರ.. ಮದುವೆ ಮಂಟಪದೊಳು ಇವ ಚೆಲುವ ರಾಜಕುಮಾರ..