ETV Bharat / state

ಅನುದಾನದ ಕೊರತೆ: ಈ ವರ್ಷವೂ ಮಕ್ಕಳಿಗಿಲ್ಲ ಸಮವಸ್ತ್ರ ಭಾಗ್ಯ!

ಸರ್ಕಾರಿ ಶಾಲೆಗಳು ಪ್ರಾರಂಭವಾಗಿ ಅರ್ಧ ಶೈಕ್ಷಣಿಕ ವರ್ಷ ಕಳೆದಿದ್ದರೂ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಿದ್ದು, ಇನ್ನೊಂದು ಜೊತೆ ಸಮವಸ್ತ್ರದ ಭಾಗ್ಯವೇ ಇಲ್ಲದಂತಾಗಿದೆ. ಈ ಕುರಿತು ಶಿಕ್ಷಣ ಸಚಿವರು ಪ್ರತಿಕ್ರಿಯೆ ನೀಡಿದ್ದು, ಅನುದಾನದ ಕೊರತೆಯಿಂದ ಮುಂದಿನ ವರ್ಷ ಸಮವಸ್ತ್ರ ನೀಡುವ ಪ್ಲಾನ್​ ಮಾಡಿರುವುದಾಗಿ ತಿಳಿಸಿದರು.

author img

By

Published : Sep 27, 2019, 5:34 AM IST

suresh kumar

ಬೆಂಗಳೂರು: ಸರ್ಕಾರಿ ಶಾಲೆಗಳು ಪ್ರಾರಂಭವಾಗಿ ಅರ್ಧ ಶೈಕ್ಷಣಿಕ ವರ್ಷ ಕಳೆದಿದ್ದರೂ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಿದ್ದು, ಇನ್ನೊಂದು ಜೊತೆ ಸಮವಸ್ತ್ರದ ಭಾಗ್ಯವೇ ಇಲ್ಲದಂತಾಗಿದೆ. ಈ ಕುರಿತು ಶಿಕ್ಷಣ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಅನುದಾನದ ಕೊರತೆ: ಈ ವರ್ಷವೂ ಮಕ್ಕಳಿಗಿಲ್ಲ ಸಮವಸ್ತ್ರದ ಭಾಗ್ಯ

ಈ ಸಂಬಂಧ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್​, ಈ ಶೈಕ್ಷಣಿಕ ವರ್ಷದಲ್ಲಿ ಸಮವಸ್ತ್ರ ವಿತರಣೆ ಕಷ್ಟವಿದೆ. ಮುಂದಿನ ವರ್ಷ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿ ಸಮವಸ್ತ್ರ ನೀಡಲಾಗುತ್ತದೆ. ಈ ಕುರಿತು ಸರಿಯಾಗಿ ಸಮವಸ್ತ್ರ ನೀಡುವ ಬಗ್ಗೆ ಪ್ಲಾನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಆರ್​ಟಿಇ ಕಾರ್ಯಕರ್ತ ನಾಗಸಿಂಹ ಅವರು ಪ್ರತಿಕ್ರಿಸಿದ್ದು, ನೆರೆ ಹಾವಳಿಯಿಂದ ಅದೆಷ್ಟೋ ಮಕ್ಕಳು ಪುಸ್ತಕ ಸೇರಿದಂತೆ ಎಲ್ಲವನ್ನೂ ಕೆಳದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಈ ವರ್ಷ ಮತ್ತೊಂದು ಜೊತೆ ಬಟ್ಟೆ ಕೊಡೋದಿಲ್ಲ ಅಂದರೆ ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ. ಸರ್ಕಾರ ಅನುದಾನ ಕೊರತೆ ಎಂದೇಳಿಕೊಂಡು ಮಕ್ಕಳಿಗೆ ತೊಂದರೆ ಉಂಟುಮಾಡಬಾರದು. ಸ್ಥಳೀಯ ಶಾಸಕರು, ಇನ್ನಿತರರ ಬಳಿ ದೇಣಿಗೆ ತೆಗೆದಾದರು ಮಕ್ಕಳಿಗೆ ಸಮವಸ್ತ್ರ ವಿತರಿಸಬೇಕು. ಸರ್ಕಾರಕ್ಕೆ ಅದೇನು ಕಷ್ಟದ ಸಂಗತಿ ಅಲ್ಲ ಎಂದರು.

Intro:ಮಕ್ಕಳ ಸಮವಸ್ತ್ರಕ್ಕೂ ಅನುದಾನದ ಕೊರತೆ; ಈ ವರ್ಷವೂ ಮಕ್ಕಳಿಗಿಲ್ಲ ಸಮವಸ್ತ್ರದ ಭಾಗ್ಯ..

ಬೆಂಗಳೂರು: ಶಾಲೆಗಳ ಶೈಕ್ಷಣಿಕ ಸಾಲು ಅರ್ಧ ವರ್ಷ ಕಳೆದರು ಇನ್ನು ಶಾಲಾ ಮಕ್ಕಳಿಗೆ ಸಮವಸ್ತ್ರ‌ ಸಿಕ್ಕಿಲ್ಲ..‌ ಅನುದಾನದ ಕೊರತೆಯಿಂದಾಗಿ ಈಗ ಸಮವಸ್ತ್ರ ಸಿಗುವ ಕನಸನ್ನ ಮಕ್ಕಳು ಕೈ ಬಿಡಬೇಕಿದೆ..‌ ಶಾಲಾ ಮಕ್ಕಳಿಗೆ ವರ್ಷದಲ್ಲಿ ಎರಡು ಬಾರಿ ಸಮವಸ್ತ್ರ ನೀಡಲಾಗುತ್ತೆ..‌ ಆದರೆ ಈ ಬಾರಿ ಒಂದು ಜೊತೆ ಸಮವಸ್ತ್ರ ನೀಡಿ ಕೈ ತೊಳೆದು ಕೊಂಡಿರೋ ಇಲಾಖೆ, ಅನುದಾನ ಕೊರತೆಯ ನೆಪವೊಡ್ಡಿ ಈಗ ಮಕ್ಕಳಿಗೆ ಸಿಗಬೇಕಾದ ಸಮವಸ್ತ್ರ ಇಲ್ಲದಂತಾಗಿದೆ..

ಈ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿರುವ ಸಚಿವ ಸುರೇಶ್ ಕುಮಾರ್, ಈ ಶೈಕ್ಷಣಿಕ ವರ್ಷದಲ್ಲಿ ಸಮವಸ್ತ್ರ ವಿತರಣೆಗೆ ಕಷ್ಟವಿದ್ದು, ಮುಂದಿನ ವರ್ಷ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿ ಸಮವಸ್ತ್ರ ನೀಡಲಾಗುತ್ತದೆ ಅಂತ ತಿಳಿಸಿದ್ದಾರೆ.. ಮುಂದಿನ ವರ್ಷಕ್ಕೆ ಸರಿಯಾಗಿ ಸಮವಸ್ತ್ರ ನೀಡುವ ಸಂಬಂಧ ಪ್ಲಾನ್ ಮಾಡಲಾಗುವುದು ಅಂತ ತಿಳಿಸಿದ್ದಾರೆ..‌ ಈ ಮೂಲಕ ಈ ವರ್ಷ ಕೇವಲ ಒಂದು ಜೊತೆ ಯೂನಿಫಾರ್ ನಲ್ಲೇ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಬೇಕಿದೆ..

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಆರ್ ಟಿ ಇ ಕಾರ್ಯಕರ್ತ ನಾಗಸಿಂಹ, ಅನುದಾನ ಕೊರತೆ ಅಂತ ಹೇಳಿ ಮಕ್ಕಳಿಗೆ ಕೊರತೆಯನ್ನುಂಟು ಮಾಡಬಾರದು.. ಸ್ಥಳೀಯ ಶಾಸಕರು ಇನ್ನಿತರರ ಬಳಿ ದೇಣಿಗೆ ತೆಗೆದಾದರು ಮಕ್ಕಳಿಗೆ ಸಮವಸ್ತ್ರ ವಿತರಿಸಲಿ.. ಸರ್ಕಾರಕ್ಕೆ ಅದೇನು ಕಷ್ಟದ ಸಂಗತಿ ಅಲ್ಲ ಅಂತ ಮಾತಾನಾಡಿದರು..

ಈಗ ಇರೋ ಒಂದೇ ಜೊತೆ ಬಟ್ಟೆಯು ಹಾಕಿ ಹಳೆಯದಾಗಿರುತ್ತೆ.. ಜೊತೆಗೆ ಅರೆದ ಬಟ್ಟೆಗಳನ್ನು ಹಾಕಿಕೊಂಡು ಶಾಲೆಗೆ ಹೋಗಲು ಸಾಧ್ಯವಿಲ್ಲ ಇದರಿಂದಾಗಿ ಮಕ್ಕಳಿಗೆ ಆತ್ಮವಿಶ್ವಾಸ ಕಡಿಮೆ ಮಾಡಿದಂತಾಗುತ್ತದೆ.. ನೆರೆ ಹಾವಳಿಯಿಂದ ಅದೆಷ್ಟೋ ಮಕ್ಕಳು ಪುಸ್ತಕ ಎಲ್ಲವನ್ನೂ ಕೆಳದುಕೊಂಡಿದ್ದಾರೆ.. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಈ ವರ್ಷ ಮತ್ತೊಂದು ಜೊತೆ ಬಟ್ಟೆ ಕೊಡೋದಿಲ್ಲ ಅಂದರೆ ನಿಜಕ್ಕೂ ಹಾಸ್ಯಾಸ್ಪದ ಅಂತ ತಿಳಿಸಿದರು..

ಒಟ್ಟಾರೆ, ಅನುದಾನದ ನೆಪವೊಡ್ಡಿ ಮಕ್ಕಳಿಗೆ ಸಮವಸ್ತ್ರ ನೀಡದೇ ಇರೋದು ಎಷ್ಟು ಸರಿ ಎಂಬ ಪ್ರಶ್ನೆ‌ ಉದ್ಭವಿಸಿದೆ..‌

KN_BNG_02_NO_UNIFORMS_SCRIPT_7201801

BYTE: ಸುರೇಶ್ ಕುಮಾರ್- ಶಿಕ್ಷಣ ಸಚಿವ
Byte: ನಾಗಸಿಂಹ- ಆರ್ ಟಿಇ ಕಾರ್ಯಕರ್ತ..

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.