ETV Bharat / state

ಬಿಜೆಪಿ ನೂತನ ರಾಜ್ಯಾಧ್ಯಕ್ಷರಿಗೆ ಏರ್‌ಪೋರ್ಟ್‌​ನಲ್ಲಿ ಅದ್ಧೂರಿ ಸ್ವಾಗತ..

ನನಗೆ ರಾಷ್ಟ್ರೀಯ ಅಧ್ಯಕ್ಷರು ಬಹು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕಿರಿಯರ ಜೊತೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ನಳೀನ್‌ಕುಮಾರ್ ಕಟೀಲ್​ ತಿಳಿಸಿದ್ದಾರೆ.

author img

By

Published : Aug 27, 2019, 10:57 AM IST

Updated : Aug 27, 2019, 12:03 PM IST

ಬಿಜೆಪಿ ರಾಜ್ಯಾದ್ಯಕ್ಷರಿಗೆ ಏರ್ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ

ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳೀನ್‌ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯಸ್ವಾಗತ ನೀಡಲಾಯಿತು.

ಸಾವಿರಾರು ಬೆಂಬಲಿಗರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹೂ ಗುಚ್ಛ ನೀಡಿ ಸ್ವಾಗತ ಕೋರಿದ್ರು. ಯಲಹಂಕ ಶಾಸಕ ವಿಶ್ವನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ‌ ಅಧ್ಯಕ್ಷ ರಾಜಣ್ಣ ಸೇರಿ ಸಾವಿರಾರು ಕಾರ್ಯಕರ್ತರು ಏರ್‌ಪೋರ್ಟ್‌ಗೆ ತೆರಳಿದ್ದರು.

ಇದೇ ವೇಳೆ ಬೆಂಬಲಿಗರು, ಕಾರ್ಯಕರ್ತರು ಸೆಲ್ಪಿ ಪಡೆಯಲು ಮುಂದಾದ್ರು. ಅಭಿಮಾನಿಗಳಿಂದ ನೂತನ ರಾಜ್ಯಧ್ಯಕ್ಷರನ್ನು ಕಾರಿನಲ್ಲಿ ಹತ್ತಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು. ನೂಕು ನುಗ್ಗಲಿನಲ್ಲೇ ಪೊಲೀಸರು ನಳೀನ್‌ಕುಮಾರ್ ಕಟೀಲ್ ಅವರನ್ನು ಕಾರು ಹತ್ತಿಸಿದ್ರು.

ಬಿಜೆಪಿ ನೂತನ ರಾಜ್ಯಾಧ್ಯಕ್ಷರಿಗೆ ಏರ್‌ಪೋರ್ಟ್‌​ನಲ್ಲಿ ಅದ್ಧೂರಿ ಸ್ವಾಗತ..

ನಂತರ ಮಾತನಾಡಿದ ನೂತನ ರಾಜ್ಯಧ್ಯಕ್ಷ ನಳೀನ್‌ಕುಮಾರ್ ಕಟೀಲ್, ನನಗೆ ರಾಷ್ಟ್ರೀಯ ಅಧ್ಯಕ್ಷರು ಬಹು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕಿರಿಯರ ಜೊತೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ರೈತರ ಪರವಾದ ಬಜೆಟ್‌ನ ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿತ್ತು. ಅಭಿವೃದ್ಧಿ ಕೆಲಸಗಳನ್ನು ಮುಂದೆಯೂ ಮಾಡಿಕೊಂಡು ಸರ್ಕಾರವನ್ನು ಮುನ್ನಡಸಲಿದ್ದೇವೆ ಎಂದರು.

ಯಲಹಂಕ ಶಾಸಕ ಎಸ್‌ ಆರ್‌ ವಿಶ್ವನಾಥ್ ಕೂಡ ಮಾತನಾಡಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಳೀನ್ ಕುಮಾರ್ ಕಟೀಲ್ ಅವರನ್ನು ಸ್ವಾಗತಿಸಲು ನಾವೆಲ್ಲ ಬಂದಿದ್ದೇವೆ. ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಸಚಿವರ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡಿದ್ದು, ಕೆಲವರಲ್ಲಿ ಅಸಮಾಧಾನ ಇರುವುದು ನಿಜ. ಅದನ್ನೆಲ್ಲಾ ರಾಷ್ಟ್ರೀಯ ಅಧ್ಯಕ್ಷರೇ ನೋಡಿಕೊಳ್ಳುತ್ತಾರೆ. ಸಚಿವ ಸಂಪುಟ ಇನ್ನೆರಡು ದಿನಗಳಲ್ಲಿ ವಿಸ್ತರಣೆಯಾಗಬಹುದು ಎಂದ ಅವರು, ಸಿಟಿ ರವಿ ಅಸಮಾಧಾನಗೊಂಡು ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ ಎಂದರು.

Intro:KN_BNG_01_27_naleen kumara katil_Ambarish_7203301
Slug: ಬಿಜೆಪಿ ರಾಜ್ಯಾದ್ಯಕ್ಷರಿಗೆ ಏರ್ಪೋರ್ಟ್ ನಲ್ಲಿ ಅದ್ದೂರಿ ಸ್ವಾಗತ

ಬೆಂಗಳೂರು: ಬಿಜೆಪಿಯ ರಾಜ್ಯಾದ್ಯಕ್ಷರಾದ ನೂತನವಾಗಿ ಆಯ್ಕೆಯಾದ ನಳೀನ್ ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ತು..‌ಸಾವಿರಾರು ಬೆಂಬಲಿಗರು ವಿಮಾನ ನಿಲ್ದಾಣಲ್ಕೆ ಆಗಮಿಸಿ ಹೂ ಗುಚ್ಚ ನೀಡಿ ಸ್ವಾಗತ ಕೋರಿದ್ರು.. ಬ್ಯಾಂಡ್ ಸೆಟ್ ಮೂಲಕ ಸ್ವಾಗತ ಕೋರಿದ್ರು... ಯಲಹಂಕ ಶಾಸಕ ವಿಶ್ವನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ‌ ಅದ್ಯಕ್ಷ ರಾಜಣ್ಣ ಸೇರಿದಂತೆ ಸಾವಿರಾರು ಕಾರ್ಯಕರ್ತರು ಏರ್ಪೋರ್ಟ್ ಗೆ ಆಗಮಿಸಿ ಬರಮಾಡಿಕೊಂಡರು..

ಇದೇ ವೇಳೆ ಬೆಂಬಲಿಗರು, ಕಾರ್ಯಕರ್ತರು ಸೆಲ್ಪಿ ಪಡೆಯಲು ಮುಂದಾದ್ರು.. ಸಾವಿರಾರು ಅಭಿಮಾನಿಗಳಿಂದ ನೂತನ ರಾಜ್ಯದ್ಯಕ್ಷರನ್ನು ಕಾರಿನಲ್ಲಿ ಹತ್ತಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು.. ನೂಕು ನುಗ್ಗಲಿನಲ್ಲೇ ಪೊಲೀಸರು ನಳೀನ್ ಕುಮಾರ್ ಕಟೀಲ್ ಅವರನ್ನು ಕಾರು ಹತ್ತಿಸಿದ್ರು..

ಇದೇ ವೇಳೆ ಮಾತನಾಡಿದ ನೂತನ ರಾಜ್ಯದ್ಯಕ್ಷ ನಳೀನ್ ಕುಮಾರ್ ಕಟೀಲ್, ನನಗೆ ರಾಷ್ಟ್ರೀಯ ಅಧ್ಯಕ್ಷರು ಬಹು ದೊಡ್ಡ ಜವಬ್ದಾರಿ ನೀಡಿದ್ದಾರೆ..ಸಿಎಂ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕಿರಿಯರ ಜೊತೆಯಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ.. ರೈತರ ಪರವಾದ ಬಜೆಟ್ ಅನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿತ್ತು.. ಅಭಿವೃದ್ಧಿ ಕೆಲಸಗಳನ್ನು ಮುಂದೆಯೂ ಮಾಡಿಕೊಂಡು ಸರ್ಕಾರವನ್ನು ಮುನ್ನಡಸಲಿದ್ದೇವೆ ಎಂದರು..

ಇನ್ನು ಯಲಹಂಕ ಶಾಸಕ ವಿಶ್ವನಾಥ್ ಕೂಡ, ಮಾತನಾಡಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಳೀನ್ ಕುಮಾರ್ ಕಟೀಲ್ ಅವರನ್ನು ಸ್ವಾಗತಿಸಲು ನಾವೆಲ್ಲ ಬಂದಿದ್ದೇವೆ.. ಸರ್ಕಾರ ಸುಭದ್ರ ವಾಗಿ ಆಡಳಿತ ನಢಸಲಿದೆ.. ಸಚಿವರ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷರು ಆಯ್ಕೆ ಮಾಡಿದ್ದು, ಕೆಲವರಲ್ಲಿ ಅಸಮಾಧಾನ ಇರುವುದು ನಿಜ..ಅದನ್ನೆಲ್ಲಾ ರಾಷ್ಟ್ರೀಯ ಅದ್ಯಕ್ಷರ ನೋಡಿಕೊಳ್ಳುತ್ತಾರೆ.. ಸಚಿವ ಸಂಪುಟ ಇನ್ನೆರಡು ದಿನಗಳಲ್ಲಿ ವಿಸ್ತರಣೆಯಾಗಬಹುದು.. ಇನ್ನು ಸಿಟಿ ರವಿ ಅಸಮಾಧಾನಗೊಂಡು ರಾಜೀನಾಮೆ ಕೊಡುವ ವಿಚಾರ ನನಗೆ ಗೊತ್ತಿಲ್ಲ ಎಂದರು.. Body:NoConclusion:No
Last Updated : Aug 27, 2019, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.