ETV Bharat / state

ಪ್ರತಿ ಜಿಲ್ಲೆಯಲ್ಲೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರದಿಂದ ಸಹಾಯ.. ಸಿಎಂ ಬೊಮ್ಮಾಯಿ‌ - ಪ್ರತಿ ಜಿಲ್ಲೆಯಲ್ಲೂ ರೆಡ್​​​​ ಕ್ರಾಸ್​​​ ಕೇಂದ್ರ

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್
ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್
author img

By

Published : Aug 25, 2022, 1:28 PM IST

ಬೆಂಗಳೂರು: ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಶ್ಲಾಘಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ನೀಡಿದ 1.5 ಕೋಟಿ ಮೌಲ್ಯದ ಮೂರು ರಕ್ತ ಸಂಗ್ರಹ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಜನರ ಸೇವೆಗೆ ಅಣಿ ಮಾಡಿಕೊಟ್ಟು ಸಿಎಂ ಮಾತನಾಡಿದರು. ರಾಜ್ಯಾದ್ಯಂತ ರೆಡ್ ಕ್ರಾಸ್ ಸಂಸ್ಥೆಯ ಈ ವಾಹನಗಳು ಸಂಚರಿಸಿ ರಕ್ತದ ಕೊರತೆ ನೀಗಿಸಲು ಸಹಾಯ ಮಾಡಲಿ ಎಂದು ಆಶಿಸಿದರು.

ಪ್ರತಿ ಜಿಲ್ಲೆಯಲ್ಲೂ ರೆಡ್​​​​ ಕ್ರಾಸ್​​​ ಕೇಂದ್ರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಜ್ಯದ ನಾನಾ ಭಾಗಗಳಲ್ಲಿ ರಕ್ತ ಸಂಗ್ರಹಣ (ಬ್ಲಡ್ ಬ್ಯಾಂಕ್) ಕೇಂದ್ರಗಳನ್ನು ಹೊಂದಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿಯೂ ರೆಡ್ ಕ್ರಾಸ್ ರಕ್ತ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಕೂಡ ಸಹಾಯಹಸ್ತ ಚಾಚಲಿದೆ ಎಂದು ಭರವಸೆ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯು ಅತ್ಯುತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಪ್ರಕೃತಿ ವಿಕೋಪ, ಕೋವಿಡ್-19 ಸಂದರ್ಭದಲ್ಲಿ ಸಂಸ್ಥೆಯ ಸ್ವಯಂಸೇವಕರು ಸಲ್ಲಿಸಿದ ಕಾರ್ಯಕ್ರಮಗಳಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯು ಕೇವಲ ರಕ್ತದಾನ, ಆರೋಗ್ಯ ಅಭಿವೃದ್ಧಿ ಕಾರ್ಯಕ್ರಮಗಳಷ್ಟೇ ಅಲ್ಲದೇ ಪ್ರಥಮ ಚಿಕಿತ್ಸಾ ಕಾರ್ಯಾಗಾರಗಳು, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಯುವಕರ ಕಾರ್ಯಪಡೆ ತಯಾರು ಮಾಡುತ್ತಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕಗಳು ಸಕ್ರಿಯವಾಗಿದೆ.

ಯುವಜನತೆಯ ಸ್ವಯಂಸೇವಕರ ಪಡೆಯನ್ನು ವಿಪತ್ತು ನಿರ್ವಹಣೆಗಾಗಿ ಮತ್ತು ಸಮಾಜ ಸೇವೆಗೆ ತೊಡಗಿಸಿಕೊಳ್ಳುವಂತಹ ತರಬೇತಿಗಳನ್ನು ಎಸ್.ಡಿ.ಆರ್.ಟಿ. (ರಾಜ್ಯ ವಿಪತ್ತು ನಿರ್ವಹಣಾ ತಂಡ) ಅಡಿಯಲ್ಲಿ ನೀಡಲಾಗುತ್ತಿದೆ ಎಂದು ರೆಡ್ ಕ್ರಾಸ್​​ನ ವಿಜಯ ಕುಮಾರ್ ಪಾಟೀಲ್ ಹೇಳಿದರು. ಇದೇ ವೇಳೆ, ಅವರು ಮುಖ್ಯಮಂತ್ರಿಗಳಿಗೆ ತಿಳಿಸಿ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನೂ ನೀಡಿದರು. ಬರುವ ದಿನಗಳಲ್ಲಿ ಇಂತಹ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ಸಹಕಾರ ನೀಡಬೇಕೆಂದು ವಿನಂತಿಸಿದರು.

ದೇಶಭಕ್ತಿ ಬಗ್ಗೆ ಅರಿವು: ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಆಶಯದಂತೆ ಶಿಕ್ಷಣ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಶಾಲಾ ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ ಬಗ್ಗೆ ಅರಿವು ಮೂಡಿಸಿ ಜೀವನ ಮೌಲ್ಯಗಳು, ಪ್ರಥಮ ಚಿಕಿತ್ಸೆಯಂತಹ ಜೀವ ಉಳಿಸುವ ಕೌಶಲ್ಯಗಳನ್ನು ತಿಳಿಸಿ ಸುಸಂಸ್ಕೃತರನ್ನಾಗಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಿತ ಪರಿಪೋಷಣಂ ಯೋಜನೆ ಅಡಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಆನಂದ ಎಸ್ ಜಿಗಜಿನ್ನಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಂ.ಎನ್. ಶಶಿಧರ ಅವರು ಪಲ್ಸ್ ಆಕ್ಸೀಮೀಟರ್ ಮತ್ತು ಮಾಸ್ಕ್​​ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಸಾಂಕೇತಿಕವಾಗಿ ಚಾಲನೆ ಕೊಡಿಸಿದರು. ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ ಬುಡರಕಟ್ಟಿ, ಶಿವರಾಜು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

(ಇದನ್ನೂ ಓದಿ: EXCLUSIVE: ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ಕೇಂದ್ರ ಸರ್ಕಾರ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.