ETV Bharat / state

ಕೋವಿಡ್ ನಿರ್ವಹಣೆಗೆ ಬಹುಪಾಲು SDRF ನಿಧಿ ಬಳಕೆ ; ನೆರೆ ಪರಿಹಾರಕ್ಕೆ ಉಳಿದಿರುವುದು ಅಲ್ಪ ಹಣ!

11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಮಳೆ ಹಾನಿ ಪ್ರಮಾಣದ ಪರಿಶೀಲನೆ ಪ್ರಗತಿಯಲ್ಲಿದೆ. ಪ್ರಾಥಮಿಕವಾಗಿ ಸುಮಾರು 15 ಸಾವಿರ ಕೋಟಿ ರೂ.‌ ಗೂ ಅಧಿಕ ನೆರೆ ಹಾನಿ ಸಂಭವಿಸಿರುವ ಅಂದಾಜಿಸಲಾಗಿದೆ.

ನೆರೆ ಪರಿಹಾರಕ್ಕೆ ಉಳಿದಿರುವುದು ಅಲ್ಪ ಹಣ
ನೆರೆ ಪರಿಹಾರಕ್ಕೆ ಉಳಿದಿರುವುದು ಅಲ್ಪ ಹಣ
author img

By

Published : Jul 30, 2021, 1:16 AM IST

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಅಬ್ಬರದಿಂದ ಇನ್ನೇನು ಕರುನಾಡು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ‌ ಮಧ್ಯೆ ರಾಜ್ಯದ ಹಲವೆಡೆ ಮಳೆಯ ರೌದ್ರವತಾರ ಹೆಚ್ಚಾಗಿದ್ದು, ನೆರೆ ಪರಿಸ್ಥಿತಿ ಉಂಟಾಗಿ ಅಪಾರ ಹಾನಿ ಸಂಭವಿಸಿದೆ. ಎಸ್​ಡಿಆರ್​ಎಫ್ (SDRF) ನಡಿ ಬಹುತೇಕ ಹಣವನ್ನು ಕೋವಿಡ್ ನಿಯಂತ್ರಣಕ್ಕೆ ಬಳಸಿರುವ ರಾಜ್ಯ ಸರ್ಕಾರಕ್ಕೆ ನೆರೆ ಪರಿಹಾರಕ್ಕಾಗಿ ಉಳಿದಿರುವುದು ಅಲ್ಪ ಹಣ.

ಈ ಬಾರಿ ಕರುನಾಡು ಕೊರೊನಾ ಎರಡನೇ ಅಲೆಗೆ ಸಂಪೂರ್ಣ ತತ್ತರಿಸಿ ಹೋಗಿದೆ.‌ ಕೋವಿಡ್ ನಿರ್ವಹಣೆಯೇ ಸದ್ಯ ಸರ್ಕಾರದ ಮುಂದಿರುವ ಆದ್ಯತೆ. ಇದರ ಮಧ್ಯೆ ರಾಜ್ಯದಲ್ಲಿ ಮಳೆ ತನ್ನ ಆರಂಭಿಕ ಆರ್ಭಟವನ್ನು ಪ್ರದರ್ಶಿಸಿದೆ. 11 ಜಿಲ್ಲೆಗಳ 45 ತಾಲೂಕುಗಳಲ್ಲಿ ಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಮಳೆ ಹಾನಿ ಪ್ರಮಾಣದ ಪರಿಶೀಲನೆ ಪ್ರಗತಿಯಲ್ಲಿದೆ. ಪ್ರಾಥಮಿಕವಾಗಿ ಸುಮಾರು 15 ಸಾವಿರ ಕೋಟಿ ರೂ.‌ ಗೂ ಅಧಿಕ ನೆರೆ ಹಾನಿ ಸಂಭವಿಸಿರುವ ಅಂದಾಜಿಸಲಾಗಿದೆ.

ಇದಕ್ಕೂ ಮುನ್ನ ರಾಜ್ಯಕ್ಕೆ ತೌಕ್ತೆ ಚಂಡಮಾರುತ ಅಪ್ಪಳಿಸಿ, ಭಾರೀ ನಷ್ಟ ಉಂಟು ಮಾಡಿದೆ. ಕರಾವಳಿ ಭಾಗದಲ್ಲಿ ಚಂಡಮಾರುತ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಕರಾವಳಿ ಕರ್ನಾಟಕ ಭಾಗಕ್ಕೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಬರೋಬ್ಬರಿ 209 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ. ಒಂದೆಡೆ ಕೋವಿಡ್ ನಿರ್ವಹಣೆ ಮತ್ತೊಂದೆಡೆ ನೆರೆ ಪರಿಹಾರ ಕಾರ್ಯಕ್ಕೆ ಸರ್ಕಾರಕ್ಕೆ ಹಣ ಹೊಂದಿಸುವ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಬಹುತೇಕ SDRF ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲಾಗುತ್ತಿದೆ. ಈ ಮಧ್ಯೆ ನೆರೆ ವಿಪತ್ತು ಎದುರಾಗಿದ್ದು, ಸೀಮಿತ SDRF ಹಣದಿಂದ ಸಂಪೂರ್ಣ ನೆರೆ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ.

ಕೋವಿಡ್​ ನಿಯಂತ್ರಣಕ್ಕೆೆ SDRF ಹಣದ ಬಳಕೆಯಾಗಿದ್ದೆಷ್ಟು?:

2021-22ನೇ ಸಾಲಿಗೆ ಕೇಂದ್ರ ಸರ್ಕಾರದಿಂದ SDRF ಅನುದಾನವಾಗಿ ಕರ್ನಾಟಕಕ್ಕೆ 1,054 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ರಾಜ್ಯದ ಪಾಲು 263 ಕೋಟಿ ರೂಪಾಯಿ ಆಗಿದ್ದರೆ, 791 ಕೋಟಿ ರೂ. ಕೇಂದ್ರದ ಪಾಲಾಗಿದೆ. ಮೊದಲನೇ ಕಂತಿನ ಬಾಪ್ತು ಕೇಂದ್ರದ ಪಾಲಿನ 316.4 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನು 329.93 ಕೋಟಿ ರೂ. ರಾಜ್ಯದ ಪಾಲನ್ನು ಬಿಡುಗಡೆ ಮಾಡಲಾಗಿದೆ. ಈ ಎಲ್ಲಾ ಹಣವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದೆ.

ಒಟ್ಟು SDRF ಹಣದಲ್ಲಿ 50% ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. SDRF ಹಣದಲ್ಲಿ ಅರ್ಧದಷ್ಟು ಕೋವಿಡ್ ನಿರ್ವಹಣೆಗೆ ವ್ಯಯಿಸಿದರೆ, ಅತಿವೃಷ್ಟಿ, ಅನಾವೃಷ್ಟಿಯ ನಿರ್ವಹಣೆಗೆ SDRFನಡಿ‌ ಕೇವಲ 50% ಮಾತ್ರ ಉಳಿಯಳಿದೆ. ಕಂದಾಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಜೂನ್ ಅಂತ್ಯದ ವರೆಗೆ SDRFನಡಿ 646.38 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕೋವಿಡ್ ನಿರ್ವಹಣೆಗಾಗಿನೇ ಬಳಸಲಾಗಿದೆ.

ಕೋವಿಡ್ ನಿರ್ವಹಣೆಗೆ ಯಾವ ಇಲಾಖೆಗೆ ಎಷ್ಟು ಬಿಡುಗಡೆ?:

ಕಂದಾಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕೋವಿಡ್ ನಿರ್ವಹಣೆಗಾಗಿ SDRFದಡಿ ರಾಜ್ಯ ಸರ್ಕಾರ 646.38 ಕೋಟಿ ರೂ. ಮೊತ್ತವನ್ನು ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿದೆ. ಅದರ ವಿವರ ಹೀಗಿದೆ-

ಬಿಬಿಎಂಪಿ- 300 ಕೋಟಿ
ಎಲ್ಲಾ ಜಿಲ್ಲೆಗಳು- 266.33 ಕೋಟಿ
ಪೊಲೀಸ್ ಇಲಾಖೆ- 10 ಕೋಟಿ
ಕಾರಾಗೃಹ ಇಲಾಖೆ- 5 ಕೋಟಿ
ಚಿತ್ರದುರ್ಗ ಜಿಲ್ಲೆ- 20 ಕೋಟಿ
ಅಗ್ನಿಶಾಮಕ- 5 ಕೋಟಿ
ಹಾಸನ‌- 10 ಕೋಟಿ
ಗ್ರಾಮ ಪಂಚಾಯತಿಗಳು- 30 ಕೋಟಿ

ನೆರೆ ಪರಿಹಾರಕ್ಕೆ ಅಲ್ಪ SDRF ಹಣ ಉಳಿಕೆ:

SDRFನಡಿ ರಾಜ್ಯ ಸರ್ಕಾರ ಬಹುತೇಕ ಹಣವನ್ನು ಕೋವಿಡ್ ನಿರ್ವಹಣೆಗಾಗಿ ಬಳಸಿದೆ. ಈಗ ಸರ್ಕಾರದ ಬಳಿ ಉಳಿಕೆಯಾಗಿರುವ SDRF ಹಣ 474.6 ಕೋಟಿ ರೂ. ಈ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ರಾಜ್ಯದ ಪಾಲಿನ SDRF ಹಣ ಕೋವಿಡ್​ಗೆ ಸಂಪೂರ್ಣ ಬಳಕೆಯಾಗಿದೆ. ಕೇಂದ್ರದ ಪಾಲಿನ ಉಳಿಕೆ ಹಣವನ್ನು ಬಿಡುಗಡೆ ಮಾಡಬೇಕಾಗಿದೆ.

ಈ ಉಳಿಕೆಯಾಗಿರುವ ಹಣವನ್ನು ರಾಜ್ಯ ಸರ್ಕಾರ ನೆರೆ ಪರಿಹಾರಕ್ಕೆ ಬಳಸಬೇಕಾಗಿದೆ. ಈಗ ಬಂದಿರುವ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಮುಂದಿನ ತಿಂಗಳಲ್ಲಿ ಮತ್ತೆ ಮಳೆಯ ಅಬ್ಬರ ಇನ್ನಷ್ಟು ಜೋರಾಗುವ ಸಾಧ್ಯತೆ ಇದ್ದು, ಉಳಿದಿರುವ ಅಲ್ಪ SDRF ಹಣದಿಂದ ನೆರೆ ನಿರ್ವಹಣೆ ಕಷ್ಟ ಸಾಧ್ಯ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೋವಿಡ್ ಹಾಗೂ ನೆರೆಯ ಡಬಲ್ ಟ್ರಬಲ್ ಎದುರಿಸಲು ಹಣಕಾಸಿನ ಕಷ್ಟಪಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ NDRF ಹಣ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕೇಂದ್ರ ಸರ್ಕಾರ 2020ರ ನೆರೆ ಹಾನಿ ಹಾಗೂ ಭೂ ಕುಸಿತದ ಬಾಪ್ತು ಮೊನ್ನೆ ಮಂಗಳವಾರ 629 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದರಿಂದ ಕಳೆದ ವರ್ಷದ ಪರಿಹಾರ ಒದಗಿಸಲು ಹಣದ ಕೊರತೆ ಎದುರಿಸುತ್ತಿರುವ ಸರ್ಕಾರ ಕೊಂಚ ನಿಟ್ಟುಸಿರು ಬಿಟ್ಟಿದೆ.

ಈ ಬಾರಿ ಮತ್ತೆ ಮಳೆಯ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಸರ್ಕಾರ ನೆರೆ ಪರಿಹಾರಕ್ಕಾಗಿ ಈಗ ಸಂಪೂರ್ಣವಾಗಿ ನೆಚ್ಚಿಕೊಂಡಿರುವುದು ಕೇಂದ್ರ ಸರ್ಕಾರದ NDRF ಹಣವನ್ನೇ. ನೆರೆ ಪರಿಹಾರಕ್ಕಾಗಿ ಸೀಮಿತ SDRF ಹಣ ಉಳಿದಿರುವ ಕಾರಣ ಪ್ರಸಕ್ತ ಹಾಗೂ ಮುಂಬರುವ ನೆರೆ ನಿರ್ವಹಣೆಗಾಗಿ NDRF ಹಣವೊಂದೇ ರಾಜ್ಯ ಸರ್ಕಾರದ ಮುಂದಿರುವ ಏಕೈಕ ಮೂಲವಾಗಿದೆ.

ಇದನ್ನು ಓದಿ:ಪ್ರವಾಹದಿಂದ ಹಾನಿ: ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರೂ. ಘೋಷಿಸಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.