ETV Bharat / state

3ನೇ ಹಂತದ ಅನ್‌ಲಾಕ್‌ಗೆ ಸರ್ಕಾರ ಚಿಂತನೆ: ದೇವಸ್ಥಾನ, ಮಾಲ್‌ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ

author img

By

Published : Jun 29, 2021, 10:53 AM IST

ರಾಜ್ಯ ಸರ್ಕಾರ ಮೂರನೇ ಹಂತದ ಅನ್​ಲಾಕ್ ಜಾರಿಗೆ ಮುಂದಾಗಿದೆ. ಅನ್​ಲಾಕ್​ 3.0ನಲ್ಲಿ ಮಾಲ್ ಮತ್ತು ಧಾರ್ಮಿಕ ಕೇಂದ್ರಗಳನ್ನು ತೆರೆಯುಲು ಅವಕಾಶ ಸಿಗುವ ಸಾಧ್ಯತೆಯಿದೆ.

Unlock 3.0
ಮೂರನೇ ಹಂತದ ಅನ್‌ಲಾಕ್‌

ಬೆಂಗಳೂರು: ಮೂರನೇ ಹಂತದ ಅನ್‌ಲಾಕ್​ಗೆ ಸರ್ಕಾರ ಪ್ಲಾನ್‌ ಮಾಡುತ್ತಿದ್ದು, ಇದೇ ವಾರದಲ್ಲಿ ಘೋಷಣೆಯಾಗುವ ಸಾಧ್ಯತೆ‌ ಇದೆ. ಈ ಹಂತದಲ್ಲಿ ಶಾಪಿಂಗ್‌ ಮಾಲ್ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲು ಸರ್ಕಾರ ಯೋಚಿಸಿದೆ. ಮಾಲ್​ ತೆರೆಯಲು ಅನುಮತಿ ಸಿಕ್ಕರೆ ಸರ್ಕಾರ ವಿಶೇಷ ಮಾರ್ಗಸೂಚಿಸಿ ಹೊರಡಿಸಬಹುದು.

ಮಾಲ್​ಗಳು ತೆರೆದರೆ ಮೊದಲು ಶೇ. 50 ರಷ್ಟು ಜನರಿಗೆ ಅವಕಾಶ ನೀಡಿ, ಅವರು ಶಾಪಿಂಗ್ ಮುಗಿಸಿದ ಬಳಿಕ ಮತ್ತೆ ಶೇ.50 ರಷ್ಟು ಮಂದಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕೋವಿಡ್​ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಮಾಲ್​​ಗಳನ್ನು ತೆರೆಯಲು ಅವಕಾಶ ನೀಡುವಂತೆ ಒತ್ತಡ ಹೆಚ್ಚಾಗ್ತಿದೆ. ಈ ಸಂಬಂಧ ಮಾಲ್ ಅಸೋಸಿಯೇಷನ್ ಮುಖಂಡರು ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಲಿರುವ ನಿಯೋಗ ಮನವಿ ಪತ್ರ ಸಲ್ಲಿಸಿ, ಮಾಲ್ ತೆರೆಯಲು ಅವಕಾಶ ಕೊಡಿ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾವು ಮಾಲ್ ಓಪನ್ ಮಾಡುತ್ತೇವೆ ಎಂದು ಮನವಿ ಮಾಡಲಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ‌ ಇಂದು ಸಿಎಂ ಭೇಟಿ: ಮಿತ್ರಮಂಡಳಿ ಸದಸ್ಯರ ಜೊತೆಗೂ ಸಮಾಲೋಚನೆ

ಧಾರ್ಮಿಕ ಕೇಂದ್ರಗಳು ಅದರಲ್ಲೂ ವಿಶೇಷವಾಗಿ ದೇವಸ್ಥಾನಗಳನ್ನು ತೆರೆಯಲು ಮೂರನೇ ಹಂತದಲ್ಲಿ ಸರ್ಕಾರ ಅವಕಾಶ ನೀಡಬಹುದು. ಆದರೆ, ವಿಶೇಷ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ದೇವಸ್ಥಾನಗಳು ಬಾಗಿಲು ತೆರೆದರೆ, ಮೊದಲ ಹಂತದಲ್ಲಿ ಕೇವಲ ಭಕ್ತರ ದರ್ಶನಕ್ಕೆ ಅವಕಾಶ ನೀಡಿ, ಆನಂತರ ಅಭಿಷೇಕ , ರಥೋತ್ಸವ , ಅನ್ನದಾನಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.

ಜುಲೈನಿಂದ ಎಲ್ಲವೂ ಅನ್ ಲಾಕ್ ಆಗುವ ಸಾಧ್ಯತೆ ಇದ್ದು, 24 ಗಂಟೆಗಳ ಸಂಚಾರಕ್ಕೆ ಅವಕಾಶ ನೀಡಬಹುದು. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅನ್ನು ಜುಲೈ ಮೊದಲ ವಾರದಲ್ಲೆ ವಾಪಸ್ ಪಡೆದು ವಿನಾಯಿತಿ ಕೊಟ್ಟ ಕ್ಷೇತ್ರಗಳಿಗೆ ಮತ್ತಷ್ಟು ರಿಲೀಫ್ ನೀಡುವ ಸಾಧ್ಯತೆ ಇದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.