ETV Bharat / state

ಪದವಿ, ವಿವಿ, ಡಿಪ್ಲೋಮಾ ಕಾಲೇಜುಗಳಿಗೆ ಫೆ.16ರವರೆಗೆ ರಜೆ ಘೋಷಿಸಿದ ಸರ್ಕಾರ - ಹಿಜಾಬ್ ಗಲಾಟೆ ಹಿನ್ನೆಲೆ

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್​ ​ - ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಸರ್ಕಾರ ಪದವಿ ಕಾಲೇಜು, ಡಿಪ್ಲೋಮಾ, ವಿಶ್ವವಿದ್ಯಾಲಯಗಳಿಗೆ ನಾಳೆಯಿಂದ ಫೆ.16ರವರೆಗೆ ರಜೆ ಘೋಷಿಸಿದೆ.

Govt announces holiday for Degree, University, Diploma Colleges due to hijab controversy
ಹಿಜಾಬ್ ಗಲಾಟೆ ಹಿನ್ನೆಲೆ ಪದವಿ ಕಾಲೇಜುಗಳಿಗೆ ರಜೆ ಘೋಷಣೆ
author img

By

Published : Feb 11, 2022, 9:41 PM IST

ಬೆಂಗಳೂರು: ಪದವಿ ಕಾಲೇಜು, ಡಿಪ್ಲೋಮಾ, ವಿಶ್ವವಿದ್ಯಾಲಯಗಳಿಗೆ ನಾಳೆಯಿಂದ ಫೆ.16ರವರೆಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಈಗಾಗಲೇ ಮೂರು ದಿ‌ನಗಳ ಕಾಲ ರಜೆ ಘೋಷಿಸಲಾಗಿತ್ತು. ಅದರಂತೆ ಫೆ.11ರವರೆಗೆ ರಜೆ ನೀಡಲಾಗಿತ್ತು. ಇದೀಗ ಮತ್ತೆ ಬುಧವಾರದವರೆಗೆ ರಜೆ ಮುಂದುವರಿಸಲಾಗಿದೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಫೆ.12, 13ರ ಭಾನುವಾರ ರಜಾ ದಿನ ಸಹಿತವಾಗಿ 14, 15 ಮತ್ತು 16ರಂದು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಕಾಲೇಜುಗಳು, ಡಿಪ್ಲೋಮಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಈ ದಿನಾಂಕಗಳಂದು ಪರೀಕ್ಷೆಗಳು ನಡೆಯುತ್ತಿದ್ದಲ್ಲಿ ಯಥಾವತ್ತಾಗಿ ನಡೆಯಲಿವೆ. ಆನ್​​​​​​ಲೈನ್ ತರಗತಿಗಳ ಮೂಲಕ ವ್ಯಾಸಂಗ ಕ್ರಮವನ್ನು ನಡೆಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆ ಕಂಡ ಪಾಸಿಟಿವ್ ದರ: 3976 ಮಂದಿಗೆ ಕೋವಿಡ್ ದೃಢ, 41 ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.