ETV Bharat / state

ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ: ಯಡಿಯೂರಪ್ಪ

ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಸ್ಪಷ್ಟವಾದರೂ ಕೂಡ ರಾಜ್ಯಪಾಲರರು ಮೂರನೇ ಬಾರಿಗೆ ನಿರ್ದೇಶನ ನೀಡಿ ಇವತ್ತಾದರೂ ವಿಶ್ವಾಸಮತ ಮಂಡಿಸಬೇಕು ಎಂದು ತಿಳಿಸಿದ್ದರು. ಆದ್ರೆ ಸ್ಪೀಕರ್ ಸದನದಲ್ಲಿ‌ ಕೆಲ ಸದಸ್ಯರಿಗೆ ಹೆಚ್ಚು ಸಮಯ‌ ನೀಡಿ‌ ಕಾಲ‌ಹರಣ ಮಾಡಿದರು ಎಂದು ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲರು ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ: ಬಿಎಸ್ವೈ!
author img

By

Published : Jul 19, 2019, 10:52 PM IST

ಬೆಂಗಳೂರು: ವಿಶ್ವಾಸಮತ ಯಾಚನೆ ಸಂಬಂಧ ಸದನದಲ್ಲಿ ನಡೆದ ವಿದ್ಯಮಾನಗಳ ಕುರಿತು ರಾಜ್ಯಪಾಲರು ಕೇಂದ್ರಕ್ಕೆ ವರದಿ ನೀಡಿದ್ದಾರೆ. ಮುಂದೇನು ಎನ್ನುವುದರ ಕುರಿತು ರಾಜ್ಯಪಾಲರು ನಿರ್ಧರಿಸಲಿದ್ದಾರೆ. ನಾವು ಸೋಮವಾರದವರೆಗೂ ಕಾದು ನೋಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಿ.ಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಸ್ಪಷ್ಟವಾದರೂ ಕೂಡ ರಾಜ್ಯಪಾಲರರು ಮೂರನೇ ಬಾರಿಗೆ ನಿರ್ದೇಶನ ನೀಡಿ ಇವತ್ತಾದರೂ ವಿಶ್ವಾಸಮತ ಮಂಡಿಸಬೇಕು ಎಂದು ತಿಳಿಸಿದ್ದರು. ಆದರೂ ಸಹ ಸ್ಪೀಕರ್ ಸದನದಲ್ಲಿ‌ ಕೆಲ ಸದಸ್ಯರಿಗೆ ಹೆಚ್ಚು ಸಮಯ‌ ನೀಡಿ‌ ಕಾಲ‌ಹರಣ ಮಾಡಿದರು. ರಾತ್ರಿ 8.15 ಕ್ಕೆ ಸ್ಪೀಕರ್ ಸದನಕ್ಕೆ ಬಂದು ಸೋಮವಾರ ವಿಶ್ವಾಸಮತ ಪೂರ್ಣ ಮಾಡುತ್ತೇವೆ. ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸಭಾಧ್ಯಕ್ಷರ ಹೇಳಿದ್ದಾರೆ. ಅಲ್ಲದೆ, ಸೋಮವಾರ ಇದಕ್ಕೆಲ್ಲಾ ಮಂಗಳ ಹಾಡುವುದಾಗಿ ತಿಳಿಸಿ ಕಲಾಪ ಸೋಮವಾರಕ್ಕೆ ಮುಂದೂಡಿದ್ದಾರೆ. ನಾವು ಸೋಮವಾರದವರೆಗೂ ಕಾದು ನೋಡುತ್ತೇವೆ. ಸಧ್ಯಕ್ಕೆ ಮತ್ತೆ ರಾಜ್ಯಪಾಲರನ್ನು ಭೇಟಿಯಾಗಲ್ಲ ಎಂದರು.

ಮುಂಬೈನಲ್ಲಿರುವ ಶಾಸಕರನ್ನ ಸದನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಅವರು 98 ಶಾಸಕರಿದ್ದು, ನಾವು 106 ಇದ್ದೇವೆ. ಆದ್ರೆ ವಿನಾಕಾರಣ ಕಾಲಹರಣ ಮಾಡಲಾಗಿದೆ ಎಂದು ಬಿಎಸ್​ವೈ ಅಸಮಾಧಾನ ವ್ಯಕ್ತಪಡಿಸಿದರು.

ಕುದುರೆ ವ್ಯಾಪಾರ ಮಾಡುತ್ತಿರುವುದು ಕಾಂಗ್ರೆಸ್​ನವರು. ಅದರ ಭಯ ನಮಗಿಲ್ಲ ಎಂದು ರಿವರ್ಸ್ ಆಪರೇಷನ್ ಕುರಿತು ಯಡಿಯೂರಪ್ಪ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.