ETV Bharat / state

ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಸರ್ಕಾರ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ - ಸಂಪುಟದಲ್ಲಿ ಚರ್ಚೆ

ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮಗಳ ಕುರಿತು ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಯಾ ಜಿಲ್ಲೆಗೆ ಹೋಗಿ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ
ಸಿಎಂ ಬಿ.ಎಸ್. ಯಡಿಯೂರಪ್ಪ
author img

By

Published : Mar 27, 2020, 6:11 PM IST

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಮುಂಜಾಗ್ರತಾ ಕ್ರಮಗಳ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿದೆ. ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಯಾ ಜಿಲ್ಲೆಗೆ ಹೋಗಿ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಬೇಕು ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಸೂಚಿಸಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ

ನಗರಪಾಲಿಕೆ, ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲಿ ಮನೆ ಮನೆಗೆ ದಿನಸಿ ವ್ಯವಸ್ಥೆ ಕಲ್ಪಿಸಲು ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ರು.

ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮಗಳ ಕುರಿತು ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಇಂದು ಬೆಳಗ್ಗೆ ಪ್ರಧಾನಿ ಮಾತನಾಡಿದ್ದು, ಕರ್ನಾಟಕದಲ್ಲಿ ಇನ್ನೂ ಓಡಾಟ ಮುಂದುವರಿದಿದೆ. ಬಂದೋಬಸ್ತ್ ಇನ್ನಷ್ಟು ಬಿಗಿಗೊಳಿಸಲು ಸೂಚನೆ ಕೊಟ್ಟಿದ್ದಾರೆ. ಹಾಗಾಗಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಕೊರೊನಾ ಪಾಸಿಟಿವ್ ಇದ್ದರೂ ಶೇ. 98.99ರಷ್ಟು ಗುಣುಮುಖರಾಗುತ್ತಿದ್ದಾರೆ. ಇದು ಬಹಳ ಜನರಿಗೆ ಗೊತ್ತಿಲ್ಲ. ಕೊರೊನಾ ಅಟ್ಯಾಕ್ ಆದರೆ ಜೀವಕ್ಕೆ ಅಪಾಯ ಎಂದು ಗಾಬರಿ ಪಟ್ಟುಕೊಂಡಿದ್ದಾರೆ. ಕೊರೊನಾ ಸೋಂಕು ಗುಣಪಡಿಸಲು ಎಲ್ಲಾ ರೀತಿಯ ಅವಕಾಶ ಇದೆ. ಸರ್ಕಾರ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಯಾವುದೇ ರೀತಿಯಲ್ಲಿ ಔಷಧಿ ಕಡಿಮೆಯಾಗದ ರೀತಿ ಕ್ರಮ ತೆಗೆದುಕೊಂಡಿದ್ದು, ಯಾವುದಕ್ಕೂ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತವಾಗಿ ಫುಡ್ ಪ್ಯಾಕೆಟ್ ವಿತರಣೆ ಮಾಡುತ್ತೇವೆ. ಒಂದು ಬೀದಿಗೆ ಹೋಗಿ ದಿನಸಿ ಖರೀದಿಸಲು ಅವಕಾಶ ನೀಡಲಾಗುತ್ತದೆ. ಜನರ ಅಗತ್ಯ ವಸ್ತುಗಳಾದ ಮಾಂಸ, ಬೇಳೆ-ಕಾಳು, ತರಕಾರಿ, ಹಣ್ಣುಗಳು ಸೇರಿದಂತೆ ಆಹಾರ ಧಾನ್ಯಗಳು ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಾಗಿದೆ. ರೈತರಿಂದ ಬೆಳೆಗಳು ಗೊದಾಮಿಗೆ, ಗೋದಾಮಿನಿಂದ ಚಿಲ್ಲರೆ ವಹಿವಾಟುಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ನಿನ್ನೆ ಮುಸ್ಲಿಂ ಮುಖಂಡರ ಜೊತೆ ಸಚಿವ ಅಶೋಕ್ ಸೇರಿದಂತೆ ಹಲವರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಸೀದಿ ಬಿಟ್ಟು ಮನೆಯಲ್ಲಿ ಪ್ರಾರ್ಥನೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ನಾನು ಮತ್ತೊಮ್ಮೆ ಮುಸ್ಲಿಂ ಮುಖಂಡರ ಜೊತೆ ಚರ್ಚೆ ನಡೆಸುತ್ತೇನೆ. ಸರ್ಕಾರದ ಪರವಾಗಿ ಅಲ್ಪಸಂಖ್ಯಾತ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಸರ್ಕಾರ ಅವರ ಜೊತೆಗೆ ಇದೆ ಎಂದರು.

ಸಂಪುಟ ಸಭೆಯ ಮಹತ್ವದ ಇತರ ತೀರ್ಮಾನಗಳು:

ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಎಲ್​​ಆರ್​​ಓಟಿ ( LROT ) ಆಧಾರದ ಮೇಲೆ ಖಾಸಗಿ ಕಂಪನಿಗೆ 40 ವರ್ಷ ಅವಧಿಗೆ ಗುತ್ತಿಗೆ ನೀಡಲು ಅನುಮತಿ. ಮೂರು ನೀರಾವರಿ ಯೋಜನೆಗಳಿಗೆ ಸಂಪುಟ ಅಸ್ತು ಎಂದಿದೆ.

ಮಹದಾಯಿ ಯೋಜನೆಗೆ ಬಂಪರ್ ಗಿಫ್ಟ್.

799 ಕೋಟಿ ರೂ. ಮೊತ್ತದ ಬಂಡೂರಿ ನಾಲಾ ತಿರುವು ಯೋಜನೆಗೆ ಒಪ್ಪಿಗೆ. 855.80 ಕೋಟಿ ರೂ. ಮೊತ್ತದ ಕಳಸಾ ನಾಲಾ ತಿರುವು ಯೋಜನೆಗೆ ಒಪ್ಪಿಗೆ, 964 ಕೋಟಿ ರೂ. ಮೊತ್ತದ ಭೀಮ ಏತ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಜೂನ್​​ನಿಂದಲೇ ಕಬ್ಬು ಅರೆಯಲು ಅವಕಾಶ.

ಕಲ್ಯಾಣ ಕರ್ನಾಟಕ ಜಿಲ್ಲಾವಾರು ಉಸ್ತುವಾರಿ ಸಮಿತಿ ರಚಿಸಲು ಅನುಮತಿ.

ರೈತರ ಟ್ರ್ಯಾಕ್ಟರ್ , ಟಿಲ್ಲರ್ ಸಾಲ ಬಡ್ಡಿ ಮನ್ನಾ ಯೋಜನೆ ಮಾರ್ಚ್ 31ರಿಂದ ಜೂ. 31ರವರೆಗೆ ವಿಸ್ತರಣೆ ಮಾಡಲು ತೀರ್ಮಾನ.

ಗ್ರಾ.ಪಂ, ತಾ‌.ಪಂ, ಜಿ.ಪಂ ಅಧ್ಯಕ್ಷರ ಅಧಿಕಾರಾವಧಿ 30 ತಿಂಗಳಿಗೆ ಇಳಿಕೆ.

ಮೀಸಲಾತಿ 10 ವರ್ಷದಿಂದ 5 ವರ್ಷಕ್ಕೆ ಇಳಿಕೆ. ಹಲವು ತಿದ್ದುಪಡಿಗಳುಳ್ಳ ವಿಧೇಯಕಕ್ಕೆ ಅಂಗೀಕಾರ.

1993ರ ಕಾಯ್ದೆಗೆ 2017ರಲ್ಲಿ ಕಾಂಗ್ರೆಸ್ ಸರ್ಕಾರ ಸಮಗ್ರ ತಿದ್ದುಪಡಿ ತಂದಿತ್ತು. ಈಗ ಹೊಸದಾಗಿ 36 ತಿದ್ದುಪಡಿ ತಂದು ಬಿಜೆಪಿ ಸರ್ಕಾರ ಮಂಡಿಸಿತ್ತು. ವಿಧಾನ ಪರಿಷತ್​​ನಲ್ಲಿ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿರಲಿಲ್ಲ. ಹಾಗಾಗಿ ಸಂಪುಟದಲ್ಲಿ ಸುಗ್ರೀವಾಜ್ಞೆ ತರಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.