ETV Bharat / state

ರಾಜ್ಯಕ್ಕೆ ಸಾಲದ ಶೂಲ: ಬಜೆಟ್ ಅನುಷ್ಠಾನಕ್ಕಾಗಿ ಸರ್ಕಾರ ವ್ಯಯಿಸುವ ಸಾಲದ ಪಾಲು ಎಷ್ಟು ಗೊತ್ತಾ? - ಆರ್ಥಿಕ ಇಲಾಖೆ

ಕೋವಿಡ್ ಕಾರಣದಿಂದ ರಾಜ್ಯದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಆದಾಯ ಕೊರತೆ ಎದುರಿಸುತ್ತಿರುವ ಸರ್ಕಾರ, ಬಜೆಟ್ ಅನುಷ್ಠಾನಕ್ಕಾಗಿ ಇದೀಗ ಸಾಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಕಳೆದ ಆರು ವರ್ಷಗಳಲ್ಲಿ ಸರ್ಕಾರ ಮಾಡಿರುವ ಸಾಲ ಮತ್ತು ಬಜೆಟ್ ಅನುಷ್ಠಾನದಲ್ಲಿ ಸಾಲದ ಪಾಲು ಎಷ್ಟು ಎಂಬುವುದರ ಸಮಗ್ರ ವರದಿ ಇಲ್ಲಿದೆ.

Govt Facing Financial Crisis
ಹಣಕಾಸು ಸಮಸ್ಯೆ
author img

By

Published : Jul 26, 2021, 7:22 AM IST

ಬೆಂಗಳೂರು : ಕೋವಿಡ್ ಸಂಕಷ್ಟ ಇಡೀ ದೇಶವನ್ನೇ ಮಂಡಿಯೂರುವಂತೆ ಮಾಡಿದೆ. ಜನ ಸಾಮಾನ್ಯರ ಜೀವ, ಜೀವನ ಎರಡರ ಮೇಲೂ ಕೋವಿಡ್ ಪರಿಣಾಮ ಬೀರಿದೆ. ರಾಜ್ಯದ ಬೊಕ್ಕಸದ ಮೇಲೂ ಕೋವಿಡ್ ದೊಡ್ಡ ಹೊಡೆತ ನೀಡಿದ್ದು, ಸರ್ಕಾರಕ್ಕೆ ಬಜೆಟ್ ಅನುಷ್ಠಾನಕ್ಕೆ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ.

ರಾಜ್ಯದ ಸ್ವಂತ ರಾಜಸ್ವ ಸಂಗ್ರಹ ಸೊರಗಿದ್ದರೆ, ಅತ್ತ ಕೇಂದ್ರದಿಂದ ಬರಬೇಕಿದ್ದ ನೆರವೂ ಕಡಿಮೆಯಾಗಿದೆ. ಹೀಗಾಗಿ, ಆರ್ಥಿಕ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಸಾಲದ ಮೊರೆ ಹೋಗುತ್ತಿದೆ. ಬಜೆಟ್ ಅನುಷ್ಠಾನಕ್ಕಾಗಿ ಸರ್ಕಾರ ಬಹುಪಾಲು ಸಾಲದ ಹಣ ಬಳಸುವ ಪರಿಸ್ಥಿತಿ ಎದುರಾಗಿದೆ. ಸಾಲ ಮಾಡಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡುವ ಅನಿವಾರ್ಯತೆ ಬಂದೊದಗಿದೆ. ಇದರಿಂದ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಾಲದ ಮೊತ್ತದ ಬಳಕೆ ವರ್ಷಂಪ್ರತಿ ಏರಿಕೆಯಾಗುತ್ತಿದೆ.

ಕಳೆದ‌ ಆರು ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿದ ಸಾಲ ಎಷ್ಟು?

ರಾಜ್ಯ ಸರ್ಕಾರ ಆರ್ಥಿಕ ನಿರ್ವಹಣೆಗಾಗಿ ಸಾಲ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ, ಪ್ರತಿ ವರ್ಷ ಸಾಲ ಮಾಡಿ ಬಜೆಟ್ ಕಾರ್ಯಕ್ರಮಗಳಿಗೆ ಹಣ ಹೊಂದಿಸಲಾಗುತ್ತದೆ. ಆದರೆ, ಕೋವಿಡ್ ಕಾರಣ ಕಳೆದ ಎರಡು ವರ್ಷದಲ್ಲಿ ಸರ್ಕಾರದ ಸಾಲದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.

ಆರ್ಥಿಕ ಇಲಾಖೆಯ ಅಂಕಿ - ಅಂಶಗಳ ಪ್ರಕಾರ 2016-17ರಲ್ಲಿ ರಾಜ್ಯ ಸರ್ಕಾರ 36,940.24 ಕೋಟಿ ರೂ.‌ ಸಾಲ ಎತ್ತುವಳಿ ಮಾಡಿತ್ತು. ಆ ವೇಳೆ, ರಾಜ್ಯದ ಸ್ವಂತ ರಾಜಸ್ವ ಸಂಗ್ರಹ ವಿದ್ದಿದ್ದು 43,342.78 ಕೋಟಿ ರೂ.‌ 7305.61 ಕೋಟಿ ರೂ. ಕೇಂದ್ರದಿಂದ ನೆರವು ಬಂದಿತ್ತು.

2017-18ರಲ್ಲಿ ರಾಜ್ಯದ ಸ್ವಂತ ರಾಜಸ್ವ ಸಂಗ್ರಹ ಮೊತ್ತ 1,36,806.47 ಕೋಟಿ ರೂ. ಆಗಿತ್ತು. ಕೇಂದ್ರದಿಂದ 12,662.37 ಕೋಟಿ ರೂ. ನೆರವು ಬಂದಿತ್ತು. ಒಟ್ಟು ಮಾಡಿದ ಸಾಲದ ಮೊತ್ತ 37,092.25 ಕೋಟಿ ರೂ.

2018-19ರಲ್ಲಿ ಸ್ವಂತ ರಾಜಸ್ವ ಮೂಲಕ 1,57,887.70 ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಕೇಂದ್ರದಿಂದ 14,727.25 ಕೋಟಿ ರೂ. ನೆರವು ಬಂದಿತ್ತು. ಇನ್ನು 41,914.06 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿತ್ತು.

2019-20ರಲ್ಲಿ ರಾಜ್ಯ ಸ್ವಂತ ರಾಜಸ್ವ ಮೂಲಕ 1,58,295.17 ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಕೇಂದ್ರದ ನೆರವಿನ‌ ಮೊತ್ತ 19,839.82 ಕೋಟಿ ರೂ. ಆಗಿತ್ತು. ಸಾಲದ ಮೂಲಕ 48,490.01 ಕೋಟಿ ರೂ.‌ ಎತ್ತುವಳಿ ಮಾಡಲಾಗಿತ್ತು.

2020-21ರಲ್ಲಿ ಸ್ವಂತ ರಾಜಸ್ವ ಮೂಲಕ ಸರ್ಕಾರ 1,69,521.37 ಕೋಟಿ ರೂ. ಸಂಗ್ರಹ ಮಾಡಿತ್ತು. ಕೇಂದ್ರ ಸರ್ಕಾರ 15,454.46 ಕೋಟಿ ರೂ. ಅನುದಾನ ನೀಡಿತ್ತು. ಕಡಿತವಾದ ಕೇಂದ್ರದ ನೆರವು ಹಾಗೂ ರಾಜಸ್ವ ಸಂಗ್ರಹದ ಹಿನ್ನೆಲೆ ಸರ್ಕಾರ ಬರೋಬ್ಬರಿ 52,917.50 ಕೋಟಿ ರೂ. ಸಾಲ ಮಾಡಿತ್ತು.

2021-22ರಲ್ಲಿ ಸ್ವಂತ ರಾಜಸ್ವವಾಗಿ 1,59,337 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಕೇಂದ್ರದ ಅನುದಾನ ಮೂಲಕ ರಾಜ್ಯಕ್ಕೆ 15,538 ಕೋಟಿ ರೂ. ಬರಲಿದೆ. ಇತ್ತ ರಾಜ್ಯ ಸರ್ಕಾರ ಆದಾಯ ಕೊರತೆಯನ್ನು ನೀಗಿಸಲು ಬರೋಬ್ಬರಿ 71,332 ಕೋಟಿ ರೂ.‌ ಸಾಲ ಮಾಡಲು ನಿರ್ಧರಿಸಿದೆ.

ಬಜೆಟ್ ಅನುಷ್ಠಾನಕ್ಕಾಗಿ ಸಾಲದ ಬಳಕೆ ಎಷ್ಟು?

ಬಜೆಟ್ ಅನುಷ್ಠಾನಕ್ಕಾಗಿ ರಾಜ್ಯ ಬಹುವಾಗಿ ಸಾಲದ ಮೊತ್ತವನ್ನೇ ಅವಲಂಭಿಸಿದೆ. ಸಾಲ ಮೊತ್ತದ ಮೂಲಕ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ‌ ಮಾಡುತ್ತಿದೆ. ಆದರೆ, ಆದಾಯ ಕೊರತೆ ಹಿನ್ನೆಲೆ ವರ್ಷಂಪ್ರತಿ ಬಜೆಟ್ ಅನುಷ್ಠಾನಕ್ಕಾಗಿ ಸಾಲದ ಮೊತ್ತದ ಬಳಕೆ ಏರಿಕೆಯಾಗುತ್ತಿದೆ.

ಆರ್ಥಿಕ ಇಲಾಖೆ ನೀಡಿದ ಅಂಕಿಅಂಶದಂತೆ 2016-17ರಲ್ಲಿ ರಾಜ್ಯದ ಬಜೆಟ್ ಗಾತ್ರ 87,588.63 ಕೋಟಿ ರೂ. ಆಗಿತ್ತು. ಬಜೆಟ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಶೇ.42.17 ಸಾಲದ ಮೊತ್ತ ಬಳಕೆ ಮಾಡಲಾಗಿತ್ತು. ಇನ್ನು 2017-18ರಲ್ಲಿ ರಾಜ್ಯದ ಬಜೆಟ್ ಗಾತ್ರ 1,86,561.09 ಕೋಟಿ ರೂ. ಇದರ ಅನುಷ್ಠಾನಕ್ಕಾಗಿ ಶೇ. 19.88 ಸಾಲದ ಮೊತ್ತವನ್ನು ಬಳಕೆ ಮಾಡಲಾಗಿತ್ತು.

ಅದೇ 2018-19ರಲ್ಲಿ ರಾಜ್ಯದ ಆಯವ್ಯಯದ ಗಾತ್ರ 2,14,529.01 ಕೋಟಿ ರೂ. ಆಗಿತ್ತು. ಬಜೆಟ್ ಅನುಷ್ಠಾನಕ್ಕಾಗಿ ಶೇ. 19.54 ಸಾಲದ ಮೊತ್ತ ಬಳಸಲಾಗಿತ್ತು. 2019-20ರಲ್ಲಿ ರಾಜ್ಯ 2,26,625 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿತ್ತು. ಇದರ ಅನುಷ್ಠಾನಕ್ಕಾಗಿ ಸಾಲದ ಪ್ರಮಾಣ ಶೇ. 21.40.

ಇನ್ನು 2020-21ಸಾಲಿನಲ್ಲಿ ರಾಜ್ಯದ ಬಜೆಟ್ ಗಾತ್ರ 2,37,893.33 ಕೋಟಿ ರೂ. ಆಗಿತ್ತು. ಇದರ ಜಾರಿಗೆ ಸಾಲದ ಪಾಲು ಶೇ. 22.24ಗೆ ಏರಿಕೆಯಾಗಿತ್ತು. 2021-22 ಸಾಲಿನಲ್ಲಿ 2,46,207 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ಮೊತ್ತದ ಪ್ರತಿ ಸಾಲದ ಪಾಲು ಶೇ. 28.97 ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.