ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ನಡೆದ ಬಳಿಕ ಆ ಭಾಗಕ್ಕೆ ಮತ್ತೊಂದು ಹೊಸ ಪೊಲೀಸ್ ಠಾಣೆ ಮಂಜೂರು ಮಾಡಲು ರಾಜ್ಯ ಸರ್ಕಾರದಿಂದ ಗೃಹ ಇಲಾಖೆ ಅನುಮತಿ ಪಡೆದಿದೆ.
![government has given permission to construct govindpura police station](https://etvbharatimages.akamaized.net/etvbharat/prod-images/9255935_police.jpg)
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೋವಿಂದಪುರ ಪೊಲೀಸ್ ಠಾಣೆ ಸದ್ಯದಲ್ಲೇ ನಿರ್ಮಾಣವಾಗಲಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಬಳಿ ಜನಸಂಖ್ಯೆ ಹೆಚ್ಚಳ, ಮಾದಕ ವಸ್ತು ಮಾರಾಟ, ಕ್ರಿಮಿನಲ್ ಪ್ರಕರಣ ಹೆಚ್ಚಾದ ಹಿನ್ನೆಲೆ ನೂತನ ಪೊಲೀಸ್ ಠಾಣೆಗಾಗಿ ಸರ್ಕಾರಕ್ಕೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಇತ್ತೀಚೆಗೆ ಪತ್ರ ಬರೆದಿದ್ದರು.
![government has given permission to construct govindpura police station](https://etvbharatimages.akamaized.net/etvbharat/prod-images/9255935_station.jpg)
ಈ ಹಿನ್ನೆಲೆ ಗೋವಿಂದಪುರ ಪೊಲೀಸ್ ಠಾಣೆ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಕೆಲವೇ ದಿನಗಳಲ್ಲಿ ಗೋವಿಂದಪುರ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಲಿದೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯ ಕೆಲವು ಭಾಗಗಳು ಹೊಸ ಠಾಣೆ ವ್ಯಾಪ್ತಿಗೆ ಬರಲಿವೆ. ಗಲಭೆ ಬಳಿಕ ಎಚ್ಚೆತ್ತ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹೊಸ ಠಾಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯದಲ್ಲೇ ಕೆಲಸ ಶುರುವಾಗಲಿದೆ.