ಬೆಂಗಳೂರು: ಜಂಗಲ್ ಲಾಡ್ಜ್, ರೆಸಾರ್ಟ್, ಸಫಾರಿ, ಚಾರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಜೂನ್ 8ರಿಂದ ಜಂಗಲ್ ಲಾಡ್ಜ್, ರೆಸಾರ್ಟ್, ಸಫಾರಿಗಳನ್ನು ಪುನಾರಂಭಿಸಲು ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.

ಆತಿಥ್ಯ ವಲಯದಲ್ಲಿನ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರಂತೆ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಗಳು ಹಾಗೂ ಇದೇ ರೀತಿಯ ಆತಿಥ್ಯ ನೀಡುವ ಖಾಸಗಿ ಸಂಸ್ಥೆಗಳು, ಚಾರಣ, ಸಫಾರಿ ಸೇರಿದಂತೆ ಇತರ ಚಟುವಟಿಕೆಗಳನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಸಾಮಾಜಿಕ ಅಂತರ ಸೇರಿದಂತೆ ಆರೋಗ್ಯ ಇಲಾಖೆ ಹೊರಡಿಸಿರುವ ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.