ETV Bharat / state

ಪಿಪಿಇ ಕಿಟ್​ಗಳ ಗುಣಮಟ್ಟದಲ್ಲಿ ರಾಜಿಯಾಗಿಲ್ಲ: ಹೈಕೋರ್ಟ್​ಗೆ ಸರ್ಕಾರದ ಸ್ಪಷ್ಟನೆ - ಪಿಪಿಇ ಕಿಟ್​

ರಾಜ್ಯ ಸರ್ಕಾರ ಕೊರೊನಾ ವಾರಿಯರ್ಸ್​ಗಳಿಗೆ ಅಗತ್ಯ ಪ್ರಮಾಣದಲ್ಲಿ ಪಿಪಿಇ ಕಿಟ್​ಗಳನ್ನು ಪೂರೈಸುತ್ತಿಲ್ಲ ಹಾಗೂ ಕಿಟ್​ಗಳು ಕಳಪೆ ಇವೆ ಎಂದು ಆರೋಪಿಸಿ ಡಾಕ್ಟರ್ ರಾಜೀವ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

High Court
ಹೈಕೋರ್ಟ್​ಗೆ ಸರ್ಕಾರದ ಸ್ಪಷ್ಟನೆ
author img

By

Published : May 28, 2020, 10:53 PM IST

ಬೆಂಗಳೂರು: ಕೊರೊನಾ ವಾರಿಯರ್ಸ್​ಗಳಿಗೆ ಈವರೆಗೂ ಪೂರೈಸಿರುವ ಪಿಪಿಇ ಕಿಟ್​ಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸರ್ಕಾರ ಹೈಕೋರ್ಟ್​ಗೆ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ಕೊರೊನಾ ವಾರಿಯರ್ಸ್​ಗಳಿಗೆ ಅಗತ್ಯ ಪ್ರಮಾಣದಲ್ಲಿ ಪಿಪಿಇ ಕಿಟ್​ಗಳನ್ನು ಪೂರೈಸುತ್ತಿಲ್ಲ ಹಾಗೂ ಕಿಟ್ ಗಳು ಕಳಪೆ ಇವೆ ಎಂದು ಆರೋಪಿಸಿ ಡಾಕ್ಟರ್ ರಾಜೀವ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ‌ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಲಿಖಿತ ಮಾಹಿತಿ ನೀಡಿ, ಪಿಪಿಇ ಕಿಟ್ ಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರ ಈವರೆಗೆ ಖರೀದಿಸಿರುವ ಕಿಟ್​ಗಳಲ್ಲಿ ನಕಲಿ ಅಥವಾ ಕಳಪೆ ಗುಣಮಟ್ಟ ಕಂಡು ಬಂದಿಲ್ಲ. ಗುಣಮಟ್ಟದ ಕಿಟ್​ಗಳನ್ನು ಪೂರೈಸಲಾಗಿದೆ. ಜಿಲ್ಲಾವಾರು ಜನಸಂಖ್ಯೆ, ಸಂಭಾವ್ಯ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಅಂದಾಜಿಸಿ ಖರೀದಿಸಿದ್ದೇವೆ. ರಾಜ್ಯದಲ್ಲಿ 87,196 ಕೊರೊನಾ ಪ್ರಕರಣಗಳನ್ನು ಅಂದಾಜಿಸಲಾಗಿತ್ತು. ಅದಕ್ಕನುಗುಣವಾಗಿ ರಾಜ್ಯ ಸರ್ಕಾರ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.