ETV Bharat / state

ರೈಲ್ವೆ ಕ್ರಾಸಿಂಗ್ ಗೇಟ್ ತೆರೆದಾಗಲೇ ಹಾದು ಹೋದ ಗೂಡ್ಸ್ ರೈಲು: ಸ್ವಲ್ಪದರಲ್ಲೇ ತಪ್ಪಿದ ದುರಂತ - ತಪ್ಪಿದ ರೈಲು ದುರಂತ

ರೈಲ್ವೆ ಕ್ರಾಸಿಂಗ್​ನಲ್ಲಿ ಗೇಟ್​ಮ್ಯಾನ್ ಇರದ ಕಾರಣ ಗೇಟ್ ತೆರೆದಿದ್ದ ವೇಳೆ ಗೂಡ್ಸ್ ರೈಲು ಹಾದು ಹೋಗಿದೆ. ಭಾನುವಾರವಾದ ಕಾರಣದಿಂದಾಗಿ ಗೇಟ್​ಮ್ಯಾನ್ ರಜೆಯಲ್ಲಿದ್ದ ಎನ್ನಲಾಗಿದೆ. ಆದರೆ ಸಿಬ್ಬಂದಿ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

goods-train-passed-through-when-crossing-gate-was-opened-at-bangalore
ರೈಲ್ವೆ ಕ್ರಾಸಿಂಗ್ ಗೇಟ್ ತೆರೆದಾಗಲೇ ಹಾದು ಹೋದ ಗೂಡ್ಸ್ ರೈಲು
author img

By

Published : Sep 12, 2021, 8:04 PM IST

ಯಲಹಂಕ (ಬೆಂಗಳೂರು): ಯಲಹಂಕ-ದೇವನಹಳ್ಳಿ ಮಾರ್ಗದಲ್ಲಿ ರೈಲ್ವೆ ಗೇಟ್ ಹಾಕದೆ ಗೂಡ್ಸ್ ರೈಲು ಹಾದು ಹೋಗಿದ್ದು, ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಅಕ್ರೋಶ ಹೊರಹಾಕಿದ್ದಾರೆ.

ಯಲಹಂಕ- ದೇವನಹಳ್ಳಿ ರೈಲ್ವೆ ಮಾರ್ಗದ ಗಂಟಿಗಾನಹಳ್ಳಿ ಬಳಿಯ ನಿಟ್ಟೆ ಕಾಲೇಜು ರೈಲ್ವೆ ಕ್ರಾಸ್ ಬಳಿ ರೈಲ್ವೆ ಗೇಟ್ ಅನ್ನು ಹಾಕದೆ ಹಾಗೆಯೇ ಬಿಡಲಾಗಿತ್ತು. ಅದೃಷ್ಟವಶಾತ್, ರೈಲು ಬರುವಾಗ ಹಳಿಯ ಮೇಲೆ ವಾಹನ ಸವಾರರು ಇರದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.

ರೈಲ್ವೆ ಕ್ರಾಸಿಂಗ್ ಗೇಟ್ ತೆರೆದಾಗಲೇ ಹಾದು ಹೋದ ಗೂಡ್ಸ್ ರೈಲು

ರೈಲ್ವೆ ಕ್ರಾಸಿಂಗ್​ನಲ್ಲಿ ಯಾವೊಬ್ಬ ಸಿಬ್ಬಂದಿ ಇರದೇ ಬೀಗಹಾಕಲಾಗಿತ್ತು. ಈ ವೇಳೆ ಬಂದ ಗೂಡ್ಸ್ ರೈಲು ಹಾದು ಹೋಗಿದೆ. ಬಳಿಕ ಗೂಡ್ಸ್ ರೈಲಿನಲ್ಲಿದ್ದ ಸಿಬ್ಬಂದಿ ಕೆಳಗಿಳಿದು ಬಂದು ಕ್ರಾಸಿಂಗ್ ವೇಳೆ ರಸ್ತೆಯಲ್ಲಿ ನಿಂತಿದ್ದಾನೆ.

ಇದೇ ವೇಳೆ ರೈಲು ನಿಲ್ಲಿಸಲಾಗಿದ್ದು ಕೆಲಸಮಯದ ಬಳಿಕ ಮತ್ತೆ ರೈಲು ಅಲ್ಲಿಂದ ತೆರಳಿದೆ. ಗೇಟ್​​ ಮ್ಯಾನ್ ಇಂದು ರಜೆಯಲ್ಲಿದ್ದ ಕಾರಣ ಈ ಅವಘಡ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.