ETV Bharat / state

ಬೆಂಗಳೂರು ನೀಲಿ ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸಚಿವರು

author img

By

Published : Apr 15, 2020, 11:24 PM IST

ರಾಜ್ಯದಲ್ಲಿ ಸುಮಾರು 662 ಹೆಕ್ಟೇರ್ ಪ್ರದೇಶದಲ್ಲಿ ನೀಲಿ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿ 15 ಸಾವಿರ ಟನ್ ನಷ್ಟು ದ್ರಾಕ್ಷಿ ಬೆಳೆಯಲಾಗುತ್ತೆ. ಬೆಳೆ ಮಾರಾಟವಾಗದೇ ಕಂಗಾಲಾಗಿದ್ದ ರೈತರಿಗೆ ಈ ಸಭೆಯಲ್ಲಿ ನಿರಾಳವಾಗುವ ಸೂಚನೆ ಸಿಕ್ಕಿದೆ.

ಬೆಂಗಳೂರು ನೀಲಿ ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸಚಿವರು..

ಬೆಂಗಳೂರು: ದ್ರಾಕ್ಷಿ ಬೆಳೆಗಾರರಿಗೆ ಸಚಿವ ನಾರಾಯಣಗೌಡ ಹಾಗೂ ಡಾ. ಎಚ್ ನಾಗೇಶ್ ಸಿಹಿ ಸುದ್ದಿ ನೀಡಿದ್ದಾರೆ.

ಇಂದು ವಿಕಾಸಸೌಧದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಸುದೀರ್ಘ ಸಭೆ ನಡೆಸಿದ ನಂತರ ಈ ಸಿಹಿ ಸುದ್ದಿ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿರುವ ಮಾಹಿತಿ ಸಿಕ್ಕಿದೆ.

ರಾಜ್ಯದಲ್ಲಿ ಸುಮಾರು 662 ಹೆಕ್ಟೇರ್ ಪ್ರದೇಶದಲ್ಲಿ ನೀಲಿ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿ 15 ಸಾವಿರ ಟನ್ ನಷ್ಟು ದ್ರಾಕ್ಷಿ ಬೆಳೆಯಲಾಗುತ್ತೆ. ಬೆಳೆ ಮಾರಾಟವಾಗದೇ ಕಂಗಾಲಾಗಿದ್ದ ರೈತರಿಗೆ ಈ ಸಭೆಯಲ್ಲಿ ನಿರಾಳವಾಗುವ ಸೂಚನೆ ಸಿಕ್ಕಿದೆ. ಸಭೆಯಲ್ಲಿ ಈ ನೀಲಿ ದ್ರಾಕ್ಷಿಯನ್ನ ಡಿಸ್ಟಿಲರಿಸ್​ಗೆ ಬಳಸಲು ಸರ್ಕಾರ ಚಿಂತನೆ ನಡೆಸಬೇಕು.

ಇದಕ್ಕಾಗಿ ಡಿಸ್ಟಿಲರಿಸ್ ಕಂಪನಿ ಪುನಾರಂಭಿಸಲು ಸಚಿವ ನಾರಾಯಣಗೌಡ ಅಬಕಾರಿ ಸಚಿವ ಡಾ. ನಾಗೇಶ್ ಅವರಲ್ಲಿ ಅವರು ಮನವಿ ಮಾಡಿದರು. ನಾಳೆಯೇ ಅಧಿಕಾರಿಗಳ ಜೊತೆ ಸಭೆ ನಡೆಸುವ ಭರವಸೆಯನ್ನು ಸಚಿವ ನಾಗೇಶ್ ನೀಡುವ ಮೂಲಕ ರೈತರಲ್ಲಿ ಸಂತಸ ಮೂಡುವಂತೆ ಮಾಡಿದ್ದಾರೆ. ತಕ್ಷಣವೇ ಕಂಪನಿ ಆರಂಭಿಸುವ ಬಗ್ಗೆ ಸಭೆ ನಡೆಸಲಾಗಿದ್ದು, ಡಿಸ್ಟಿಲರಿ ಕಂಪೆನಿಗಳ ಮುಖ್ಯಸ್ಥರೊಂದಿಗೂ ಉಭಯ ಸಚಿವರು ಶೀಘ್ರವೇ ಮಾತುಕತೆ ನಡೆಸಲಿದ್ದಾರೆ. ಇದಾದ ಬಳಿಕ ಆದಷ್ಟು ಬೇಗ ಬೆಂಗಳೂರು ನೀಲಿ ದ್ರಾಕ್ಷಿಯನ್ನ ಡಿಸ್ಟಿಲರಿಸ್​ಗೆ ಬಳಸುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.