ETV Bharat / state

ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ ಪೂರೈಸಲು ಹೆಚ್​ಎಎಲ್​ ಜೊತೆ ಜಿಇ ಏರೋಸ್ಪೇಸ್ ಒಪ್ಪಂದ - Hindustan Aeronautics Limited

ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸದ ಭಾಗವಾಗಿ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್​ಗಳನ್ನು ಉತ್ಪಾದಿಸಲು ಹೆಚ್​ಎಎಲ್​ ಜೊತೆ ಜಿಇ ಏರೋಸ್ಪೇಸ್ ಸಹಿ ಹಾಕಿದೆ.

fighter jet engines for Indian Air Force
ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌
author img

By

Published : Jun 23, 2023, 7:00 AM IST

ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಪರಿಣಾಮವಾಗಿ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೊಂದಿಗೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿರುವುದಾಗಿ ಜಿಇ ಏರೋಸ್ಪೇಸ್ ಪ್ರಕಟಿಸಿದೆ.

ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಅಂಶವಾಗಿದೆ. ಒಪ್ಪಂದವು ಭಾರತದಲ್ಲಿ ಜಿ ಇ ಏರೋಸ್ಪೇಸ್‌ನ ಎಫ್ 414 ಎಂಜಿನ್‌ಗಳ ಜಂಟಿ ಉತ್ಪಾದನೆಯ ಯೋಜನೆಗೆ ಬುನಾದಿಯಾಗಿದೆ. ಜಿಇ ಏರೋಸ್ಪೇಸ್ ಇದಕ್ಕಾಗಿ ಅಗತ್ಯವಾದ ರಫ್ತು ಅನುಮತಿಗೆ ಅಮೆರಿಕ ಸರ್ಕಾರದ ಅನುಮತಿ ಪಡೆದಿದೆ. ಈ ಒಪ್ಪಂದವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ಎಂ ಕೆ 2 ಕಾರ್ಯಕ್ರಮದ ಭಾಗವಾಗಿದೆ.

ಜಿಇ ಏರೋಸ್ಪೇಸ್ ಭಾರತದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಇಂಜಿನ್‌ಗಳು, ಏವಿಯಾನಿಕ್ಸ್ ಸೇವೆಗಳು, ಎಂಜಿನಿಯರಿಂಗ್ ಉತ್ಪಾದನೆ ಉದ್ಯಮದಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದೆ. 1986 ರಲ್ಲಿ ಜಿಇ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಮತ್ತು ಹೆಚ್‌ಎಎಲ್ ಎಫ್ 404 ಭಾರತದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಅಭಿವೃದ್ಧಿ ಪಡಿಸಿವೆ. ತದನಂತರ ಜಿಇ ಏರೋಸ್ಪೇಸ್‌ನ ಎಫ್ 404, ಎಫ್ 414, ಎಲ್ ಸಿ ಎ- ಎಂ ಕೆ 1 ಮತ್ತು ಎಲ್ ಸಿ ಎ- ಎಂ ಕೆ 2 ಯುದ್ಧ ವಿಮಾನಗಳ ಅಭಿವೃದ್ಧಿ, ಉತ್ಪಾದನೆಯನ್ನು ಜಂಟಿಯಾಗಿ ಮಾಡಿವೆ. 75 ಎಫ್ 404 ಎಂಜಿನ್‌ ಮತ್ತು ಮತ್ತು 99 ಎಲ್ ಸಿ ಎ- ಎಂ ಕೆ 1ಎ ಉತ್ಪಾದನೆ ಚಾಲ್ತಿಯಲ್ಲಿದೆ. ಎಲ್ ಸಿ- ಎ ಎಂ ಕೆ 2 ನ ಭಾಗವಾದ ಎಂಟು ಎಫ್ 414 ಎಂಜಿನ್‌ಗಳನ್ನು ವಿತರಿಸಲಾಗಿದೆ.

ಭಾರತದಲ್ಲಿ ಜಿಇ ಸಂಸ್ಥೆ ತನ್ನ ಸಂಶೋಧನೆ ಮತ್ತು ತಂತ್ರಜ್ಞಾನ ಕೇಂದ್ರವನ್ನು ಹೊಂದಿದೆ. ಬೆಂಗಳೂರಿನಲ್ಲಿ 2000ನೇ ಇಸವಿಯಿಂದ ಜಾನ್ ಎಫ್ ವೆಲ್ಚ್ ತಂತ್ರಜ್ಞಾನ ಕೇಂದ್ರ ಮತ್ತು 2015 ರಿಂದ ಪುಣೆಯಲ್ಲಿ ಮಲ್ಟಿ- ಮಾಡೆಲ್ ಫ್ಯಾಕ್ಟರಿ ಕಾರ್ಯಚರಣೆ ನಡೆಯುತ್ತಿದೆ. ಭಾರತ ಮತ್ತು ಹೆಚ್‌ಎಎಲ್‌ನೊಂದಿಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಲ್ಲಿ ಇಂದಿನದು ಐತಿಹಾಸಿಕ ಒಪ್ಪಂದವಾಗಿದೆ ಎಂದು ಜಿಇ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಇ ಏರೋಸ್ಪೇಸ್‌ನ ಸಿಇಒ ಹೆಚ್ ಲಾರೆನ್ಸ್ ಕಲ್ಪ್ ಜೂ ಹೇಳಿದ್ದಾರೆ.

ಎರಡು ರಾಷ್ಟ್ರಗಳ ನಡುವಿನ ನಿಕಟ ಸಮನ್ವಯದ ದೃಷ್ಟಿಕೋನದ ದೃಷ್ಟಿಯಿಂದ ಕೈಗೊಳ್ಳಲಾದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಮ್ಮೆಪಡುತ್ತೇವೆ. ನಮ್ಮ ಎಫ್ 414 ಎಂಜಿನ್‌ಗಳು ಸಾಟಿಯಿಲ್ಲದ ಕಾರ್ಯಕ್ಷಮತೆ ಹೊಂದಿವೆ. ಎರಡೂ ದೇಶಗಳಿಗೆ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕಾರ್ಯತತ್ಪರತೆರಾಗಿದ್ದೇವೆ. ನಮ್ಮ ಗ್ರಾಹಕರಿಗೆ ತಮ್ಮ ಮಿಲಿಟರಿ ವಿಮಾನಗಳ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ಎಂಜಿನ್‌ಗಳನ್ನು ಉತ್ಪಾದಿಸಲು ನಾವು ಸಹಕಾರ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ- ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.