ETV Bharat / state

ಕಸದ ವಾಹನಗಳ ದಾಖಲಾತಿ ಪರಿಶೀಲಿಸಿ ಕಠಿಣ ಕ್ರಮ: ಪಾಲಿಕೆ ಮುಖ್ಯ ಆಯುಕ್ತ - ಕಸದ ವಾಹನಗಳ ದಾಖಲಾತಿ ಪರಿಶೀಲಿಸಿ ಕಠಿಣ ಕ್ರಮದ ಕುರಿತು ಗೌರವ್ ಗುಪ್ತ ಪ್ರತಿಕ್ರಿಯೆ

ಘನತ್ಯಾಜ್ಯ ವಿಲೇವಾರಿ ವಾಹನಗಳ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಬಿಬಿಎಂಪಿ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ

author img

By

Published : Apr 19, 2022, 5:13 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಸದ ವಾಹನಗಳ ದಾಖಲಾತಿ, ಇನ್ನಿತರ ದೋಷಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತ ಎಚ್ಚರಿಕೆ ನೀಡಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಕಸದ ಲಾರಿ ಡಿಕ್ಕಿ ಹೊಡೆದು ಆಕಸ್ಮಿಕವಾಗಿ ಘಟನೆ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದರು.

ಕಸದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ನಾಯಂಡಹಳ್ಳಿ ಬಳಿ ಇತ್ತೀಚೆಗೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಕ್ರಮಕ್ಕೆ ಮುಂದಾಗಿದೆ.

ಘನತ್ಯಾಜ್ಯ ವಿಲೇವಾರಿ ವಾಹನಗಳ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಮೇಲ್ಸೇತುವೆ, ಜಂಕ್ಷನ್ ಅಕ್ಕಪಕ್ಕ ಬಹಳ ವೇಗವಾಗಿ ವಾಹನಗಳ ಸಂಚಾರ ಇರುತ್ತದೆ. ಇದಕ್ಕೆ ತಡೆ ಹಾಕಲು ಪೊಲೀಸರ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಕುಟುಂಬಗಳಿಗೆ ಪರಿಹಾರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾನವೀಯತೆಯ ದೃಷ್ಟಿಯಿಂದ ಪರಿಹಾರ ನೀಡಲಾಗುತ್ತದೆ ಎಂದರು. ನಗರದಲ್ಲಿ ಸುರಿದ ಮಳೆಯಿಂದ ನಾನಾ ಕಡೆ ಅನಾಹುತ ಉಂಟಾಗಿದೆ. ಮಳೆಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದೇವೆ. ಪೌರಕಾರ್ಮಿಕರ ಮೂಲಕ ಹಲವು ಪ್ರದೇಶಗಳನ್ನು ಸ್ವಚ್ಛ ಮಾಡಲಾಗುತ್ತದೆ. ಮಳೆಯಿಂದ ಅನಾಹುತಕ್ಕೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯವೂ ಆಗುತ್ತೆ. ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳ ಮೂಲಕ ಪರಿಹಾರ ಹಣ ಹೋಗಲಿದೆ ಎಂದು ಗುಪ್ತ ತಿಳಿಸಿದರು.

ಗಾಂಧಿ ಬಜಾರ್‌ನ ರಸ್ತೆಯನ್ನು ಹೈಟೆಕ್ ಮಾಡುವ ಡಲ್ಟ್ ಯೋಜನೆಗೆ ವಿರೋಧ ವ್ಯಕ್ತವಾಗಿದೆ‌. ಅಲ್ಲಿನ ಸ್ಥಳೀಯರು, ಸಂಘಟನೆಗಳು, ಅಸೋಸಿಯೇಷನ್​ಗಳ ಜೊತೆ ಮಾತನಾಡುತ್ತಿದ್ದೇವೆ. ಇದು ನಗರ ಭೂಸಾರಿಗೆ ನಿರ್ದೇಶನಾಲಯದ ಯೋಜನೆ ಆಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು: ಕಸದ ಲಾರಿಗೆ ಬ್ಯಾಂಕ್ ಉದ್ಯೋಗಿ ಬಲಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.