ETV Bharat / state

ಗತಿಶಕ್ತಿ ವಿವಿ - ಏರ್ ಬಸ್ ಒಡಂಬಡಿಕೆಗೆ ಸಹಿ: ಬಿ-ಟೆಕ್ ಕೋರ್ಸ್ ವಿಪುಲ ಅವಕಾಶ ಎಂದ ಸಚಿವ ಅಶ್ವಿನಿ ವೈಷ್ಣವ - ಈಟಿವಿ ಭಾರತ್​ ಕನ್ನಡ ನ್ಯೂಸ್

ಭಾರತೀಯ ರೈಲ್ವೆಯು ಸಚಿವ ಅಶ್ವಿನಿ ವೈಷ್ಣವ ನೇತೃತ್ವದಲ್ಲಿ ಗತಿಶಕ್ತಿ ವಿವಿ - ಏರ್ ಬಸ್ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಗತಿಶಕ್ತಿ ವಿವಿ-ಏರ್ ಬಸ್ ಒಡಂಬಡಿಕೆಗೆ ಸಹಿ
ಗತಿಶಕ್ತಿ ವಿವಿ-ಏರ್ ಬಸ್ ಒಡಂಬಡಿಕೆಗೆ ಸಹಿ
author img

By ETV Bharat Karnataka Team

Published : Sep 7, 2023, 10:46 PM IST

ಹುಬ್ಬಳ್ಳಿ : ಭಾರತೀಯ ರೈಲ್ವೆ ವಲಯದ ಗತಿಶಕ್ತಿ ವಿಶ್ವವಿದ್ಯಾಲಯವು ಹೊಸದಾದ ಬಿ - ಟೆಕ್ ಕೋರ್ಸ್ ಆರಂಭಿಸಿದ ಬೆನ್ನಲ್ಲೇ ಈಗ ಪ್ಲೇಸಮೆಂಟ್ ಸಂಬಂಧಿಸಿದಂತೆ ಏರ್ ಬಸ್ ಸಂಸ್ಥೆಯೊಂದಿಗಿನ ಒಡಂಬಡಿಕೆಗೆ ಭಾರತೀಯ ರೈಲ್ವೆಯು ಸಚಿವ ಅಶ್ವಿನಿ ವೈಷ್ಣವ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದರು.

ಗುಜರಾತ್ ರಾಜ್ಯದಲ್ಲಿರುವ ಭಾರತೀಯ ರೈಲ್ವೆಯ ಗತಿಶಕ್ತಿ ವಿಶ್ವವಿದ್ಯಾಲಯು ಬಿ - ಟೆಕ್ ಕೋರ್ಸ್ ಗಳನ್ನು ಟ್ರಾನ್ಸಪೋರ್ಟ್ ಸಂಬಂಧಿಸಿದಂತೆ ವಿಶೇಷ ಕೋರ್ಸ್ ಆರಂಭಿಸಿದ್ದು, ಈ ನಿಟ್ಟಿನಲ್ಲಿ ರೈಲ್ವೆ ಸೇರಿದಂತೆ ಹಲವು ವಲಯಗಳಲ್ಲಿ ವಿಪುಲವಾಗಿ ಅವಕಾಶ ಕಲ್ಪಿಸುವ ಸದುದ್ದೇಶದಿಂದ ಏರ್ ಬಸ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ವರ್ಚುಯಲ್ ಮೂಲಕ ಸಹಿ ಮಾಡಲಾಯಿತು. ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಡಿಆರ್​ಎಂ ಹಾಗೂ ಜಿಎಂ ಕಚೇರಿಯಲ್ಲಿ ವೀಕ್ಷಣೆಗೆ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಇನ್ನು ಮಾತನಾಡಿದ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ವಿದ್ಯಾರ್ಥಿಗಳಿಗೆ ರೈಲ್ವೆ, ಏರ್​ಪೋರ್ಸ್ ಹಾಗೂ ಟ್ರಾನ್ಸ್​ಪೋರ್ಟ್ ವಿಭಾಗದಲ್ಲಿ ವಿಶೇಷ ತರಬೇತಿ ನೀಡಿ ಬಿ-ಟೆಕ್ ಕೋರ್ಸ್ ಮೂಲಕ ಉದ್ಯೋಗ ಅವಕಾಶ ಕಲ್ಪಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ವರ್ಷದ ಕೊರ್ಸ್ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ‌ ಸುಧಾರಿಸುವ ಜೊತೆಗೆ ಉದ್ಯೋಗ ಅವಕಾಶವನ್ನು ಹುಟ್ಟು ಹಾಕಲು ಚಿಂತನೆ ನಡೆಸಿದೆ ಎಂದರು. ಇದೇ ವೇಳೆ ರೈಲ್ವೆ ಬೋರ್ಡ್ ಚೇರ್ಮನ್ ಜಯಾ ವರ್ಮಾ ಸಿನ್ಹ, ಏರ್ ಬಸ್ ಮುಖ್ಯಸ್ಥರಾದ ರೇಮಿ ಮೆಲಾರ್ಡ್ ಸೇರಿದಂತೆ ಇತರರು ಉಪಸ್ಥಿತರಿದರು.

ಇದನ್ನೂ ಓದಿ : Job fraud: ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ.. ಹುಬ್ಬಳ್ಳಿಯಲ್ಲಿ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.