ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಜೀವನ ಆಧರಿಸಿ ಹಿರಿಯ ಪತ್ರಕರ್ತ ಸುಗತಾ ಶ್ರೀನಿವಾಸರಾಜು ಅವರು ಬರೆದಿರುವ 'ಫರೋಸ್ ಇನ್ ಎ ಫೀಲ್ಡ್: ದಿ ಅನ್ ಎಕ್ಸ್ ಫ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡʼ (Furrows in a Field: The Unexplored Life of H.D. Deve Gowda) ಪುಸ್ತಕವನ್ನು ಸೋಮವಾರ ಬಿಡುಗಡೆ ಆಯಿತು.
![Furrows in a Field: The Unexplored Life of H.D. Deve Gowda Book Release](https://etvbharatimages.akamaized.net/etvbharat/prod-images/kn-bng-06-devegowda-book-release-script-7208083_20122021231412_2012f_1640022252_230.jpg)
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ, ದೇವೇಗೌಡರ ರಾಜಕೀಯ ಜೀವನದ ಕೆಲವು ವಿಷಯಗಳ ಕುರಿತು ನಿವೃತ್ತ ನ್ಯಾಯಮೂರ್ತಿಗಳು ಮೆಲುಕು ಹಾಕಲಾಯಿತು.
ಇದನ್ನೂ ಓದಿ: ಆಗಸದಲ್ಲಿ ನಕ್ಷತ್ರದಂತೆ ಗೋಚರಿಸಿದ ಬೆಳಕಿನ ಸರ... ವಿಜ್ಞಾನಿಗಳು ಹೇಳಿದ್ದು ಹೀಗೆ
ದೇವೇಗೌಡರ ಗರಡಿಯಲ್ಲಿದ್ದ ಕಾಂಗ್ರೆಸ್ ನ ಮುಖಂಡ ಬಿ.ಎಲ್. ಶಂಕರ್ ಸಹ ಗೌಡರ ರಾಜಕಾರಣದ ಕುರಿತು ಹಲವು ವಿಚಾರಗಳನ್ನು ಬಿಚ್ಚಿಟ್ಟರು. ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪತ್ರಕರ್ತ ಸುಗತ ಶ್ರೀನಿವಾಸರಾಜು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ, ಸೊಸೆ ಅನಿತಾ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಖ್ಯಾತ ವಕೀಲ ಫಾಲಿ ಎಸ್ ನಾರಿಮನ್ ಅವರು ಈ ಪುಸ್ತಕ ಬಿಡುಗಡೆ ಮಾಡಿದ್ದರು.