ETV Bharat / state

ಅಮೆರಿಕನ್ ಡಾಲರ್ ಎಂದ್ಹೇಳಿ ನ್ಯೂಸ್​ ಪೇಪರ್​ ನೀಡಿದ ವಂಚಕರು : ಲಕ್ಷಾಂತರ ರೂ. ಕಳೆದುಕೊಂಡ ಮಾಲೀಕ - ಬೆಂಗಳೂರಲ್ಲಿ ವಂಚನೆ ಪ್ರಕರಣ

ಅಮೆರಿಕನ್​ ಡಾಲರ್​ ನೀಡುವುದಾಗಿ ಹೇಳಿ ಅಂಗಡಿ ಮಾಲೀಕನಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಕರು ಪಂಗನಾಯ ಹಾಕಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ..

Fraud case in bangalore
ಅಮೆರಿಕನ್​​ ಡಾಲರ್​ ಎಂದೇಳಿ ವಂಚನೆ
author img

By

Published : Dec 22, 2021, 7:35 PM IST

Updated : Dec 22, 2021, 7:59 PM IST

ಬೆಂಗಳೂರು : ನಕಲಿ ಅಮೆರಿಕನ್ ಡಾಲರ್‌ನ ಅಸಲಿ ಎಂದು ನಂಬಿಸಿ ವಂಚಕರು ಅಂಗಡಿ ಮಾಲೀಕನಿಗೆ 2 ಲಕ್ಷ ರೂ. ಟೋಪಿ ಹಾಕಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಲ್ಲಿ ವಂಚನೆ ಪ್ರಕರಣ ದಾಖಲು

ಕಳೆದ 10 ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಆರ್‌ಟಿನಗರದ ಕ್ಯಾಂಡಿಮೆಂಟ್ ಶಾಪ್ ಮಾಲೀಕ ರಮಾನಾಥ್ ರೈ ಎಂಬುವರ ಶಾಪ್​ ಬಳಿ ಬಂದಿದ್ದಾನೆ. ಕಸದಲ್ಲಿ ಒಂದು ಅಮೆರಿಕನ್ ಡಾಲರ್ ಸಿಕ್ಕಿದೆ ಎಂದೇಳಿದ್ದಾನೆ.

ಬಳಿಕ ಬ್ಯಾಂಕ್​ಗೆ ಹೋಗಿ ನೋಟು ಅಸಲಿ ಎಂದು ಖತಪಡಿಸಿಕೊಂಡಿದ್ದಾರೆ. ನಂತರ ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಅಂಗಡಿ ಮಾಲೀಕನಿಂದ 1400 ರೂ. ಪಡೆದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ವಂಚಕರು, ನಮ್ಮಲ್ಲಿ ಅಮೆರಿಕನ್ ಡಾಲರ್​​ಗಳಿವೆ. ಭಾರತೀಯ ಕರೆನ್ಸಿಗೆ ಪರಿವರ್ತಿಸಿದರೆ ಹೆಚ್ಚು ಹಣ ಸಂಪಾದಿಸಿಬಹುದು ಎಂದು ಆಸೆ ತೋರಿಸಿದ್ದಾರೆ.‌ ಹಣ ಗಳಿಸುವ ಆಸೆಯಿಂದ ರಮಾನಾಥ್ ವಂಚಕರು ಹೇಳಿದ್ದಂತೆ ಯಶವಂತಪುರ ಬಳಿ ಹೋಗಿ 2 ಲಕ್ಷ ರೂ.ನೀಡಿದ್ದಾರೆ.

ಈ ವೇಳೆ ಖದೀಮರು ಡಾಲರ್ ಹೆಸರಿನಲ್ಲಿ ನ್ಯೂಸ್ ಪೇಪರ್ ನೀಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Dec 22, 2021, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.