ಬೆಂಗಳೂರು: ಸರ್ಕಾರದ 1 ವರ್ಷದ ಹರ್ಷದ ನಡುವೆ 24 ಶಾಸಕರಿಗೆ ನೀಡಲಾಗಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ನಾಲ್ವರ ಸ್ಥಾನವನ್ನು ಹಿಂಪಡೆಯಲಾಗಿದ್ದು, ಅವಕಾಶ ಕಳೆದುಕೊಂಡ ಶಾಸಕರು ತೀವ್ರ ನಿರಾಸೆಗೊಳಗಾಗಿದ್ದಾರೆ.
ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಾಪು ಶಾಸಕ ಲಾಲಾಜಿ ಮೆಂಡನ್ ಹಾಗೂ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರಿಗೆ ನೀಡಲಾಗಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆಯಲಾಗಿದೆ.
![four MLAs appointment cancelled from chairmanship of corporation board](https://etvbharatimages.akamaized.net/etvbharat/prod-images/kn-bng-05-board-corporation-4mla-dropped-photo-7208080_27072020172001_2707f_1595850601_583.jpg)
ನೇಮಕಾತಿ ಆದೇಶ ಹೊರಡಿಸಿದ್ದ ಕೆಲ ಗಂಟೆಗಳಲ್ಲಿಯೇ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಹೊರಡಿಸಲಾಗಿದ್ದ ಟಿಪ್ಪಣಿಯಲ್ಲಿ ನಾಲ್ವರು ಶಾಸಕರನ್ನು ಕೂಡಲೇ ಹಿಂಪಡೆಯಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಇದರಿಂದಾಗಿ ನಾಲ್ವರು ಶಾಸಕರು ಸರ್ಕಾರ ರಚನೆಯಾದ ವರ್ಷದ ಸಂಭ್ರಮದಲ್ಲಿ ತೀವ್ರ ನಿರಾಸೆಗೊಳಗಾಗಿದ್ದಾರೆ. ಅಲ್ಲದೆ ಕೆಲವರು ಅಧ್ಯಕ್ಷ ಸ್ಥಾನದ ಕುರಿತು ಅಸಮಾಧಾನ ಹೊರಹಾಕಿದ್ದರಿಂದಾಗಿ ಹೆಸರು ವಾಪಸ್ ಪಡೆಯಲಾಗಿದೆ ಎನ್ನಲಾಗ್ತಿದೆ.