ಬೆಂಗಳೂರು: ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ಬಹಿರಂಗ ಪ್ರಚಾರ ಶುರುವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೃಷ್ಣಬೈರೇಗೌಡ ಭರ್ಜರಿ ಮತಯಾಚನೆ ಮಾಡಿದರು.
ಮಹಾಲಕ್ಷ್ಮಿ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ಮೂಲಕ ಮತಯಾಚನೆ ಮಾಡಿದ ಕಾಂಗ್ರೆಸ್ ನಾಯಕರಿಗೆ ಅದ್ದೂರಿ ಸ್ವಾಗತ ದೊರೆಯಿತು. ರಸ್ತೆಯುದ್ದಕ್ಕೂ ಹೂವಿನ ಸುರಿಮಳೆಯ ಜೊತೆಗೆ ಬಗೆ ಬಗೆಯ ಆಹಾರ, ಕಿರೀಟಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು.
ನಂತರ ಮಾತನಾಡಿದ ಕೃಷ್ಣಬೈರೇಗೌಡ, ಶಿವರಾಜ್ ಅತ್ಯಂತ ಸೂಕ್ತ ವ್ಯಕ್ತಿ ಮತ್ತು ಪ್ರತಿಭಾನ್ವಿತ, ಸುಪ್ರೀಂಕೋರ್ಟ್ ಅನರ್ಹರು ಎಂದು ಸರ್ಟಿಫಿಕೇಟ್ ಕೊಟ್ಟವರಿಗೆ ನಾವು ಮತ ಹಾಕದೆ ಇರುವುದು ಒಳ್ಳೆಯ ಕೆಲಸ, ಅಂತಹ ವ್ಯಕ್ತಿಗಳನ್ನು ನಾವು ಪುನಃ ಆರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.